ಜಮ್ಮು ಮತ್ತು ಕಾಶ್ಮೀರ: ಶಸ್ತ್ರಾಸ್ತ್ರ, ಮದ್ದುಗುಂಡುಗಳೊಂದಿಗೆ ಇಬ್ಬರು ಲಷ್ಕರ್ ಸಹಚರರ ಬಂಧನ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಇಬ್ಬರು ಸಹಚರರನ್ನು ಗುರುವಾರ ಬಂಧಿಸಲಾಗಿದೆ.
Published: 01st June 2023 02:35 PM | Last Updated: 01st June 2023 02:37 PM | A+A A-

ಬಂಧಿತ ಉಗ್ರರೊಂದಿಗೆ ಸೇನಾಪಡೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಇಬ್ಬರು ಸಹಚರರನ್ನು ಗುರುವಾರ ಬಂಧಿಸಲಾಗಿದೆ.
ಜಿಲ್ಲೆಯ ವಾರ್ಪೋರಾ (ಕ್ರೀರಿ) ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಸ್ಥಳೀಯ ಪೊಲೀಸರು, ಸೇನೆ ಮತ್ತು ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ನ 'ನಾಕಾ' (ಪರಿಶೀಲನೆ) ಪಾರ್ಟಿ ಪತ್ತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
J&K | 2 terrorist associates of LeT outfit, namely Suhail Gulzar and Waseem Ahmad Pata arrested near Frestihar Kreeri village of Baramulla district. 2 Chinese pistols, 2 pistol magazines & 15 live pistol rounds recovered from their possession. Case registered under UA (P) Act &… pic.twitter.com/CxdXtifB4M
— ANI (@ANI) June 1, 2023
ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಪಿಸ್ತೂಲ್‌ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು 15 ಲೈವ್ ರೌಂಡ್ಸ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪೂಂಚ್ ಬಳಿ ಗಡಿ ನುಸುಳಲು ಯತ್ನ, ಮೂವರು ಉಗ್ರರ ಬಂಧನ
ಇವರಿಬ್ಬರನ್ನು ಸುಹೇಲ್ ಗುಲ್ಜಾರ್ ಮತ್ತು ವಸೀಂ ಪರ್ರಾ ಎಂದು ಗುರುತಿಸಲಾಗಿದ್ದು, ಇಬ್ಬರೂ ಎಲ್‌ಇಟಿ ಸಹಚರರಾಗಿದ್ದಾರೆ. ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.