'ಮೋದಿ ಇದ್ದರೆ ಎಲ್ಲವೂ ಸಾಧ್ಯ': ಶಿವಲಿಂಗಕ್ಕೆ ಮೆಹಬೂಬಾ ಮುಫ್ತಿ ಜಲಾಭಿಷೇಕಕ್ಕೆ ಪರ-ವಿರೋಧ ಚರ್ಚೆ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪೂಂಚ್ ಪ್ರವಾಸವು ಇದ್ದಕ್ಕಿದ್ದಂತೆ ಸುದ್ದಿ ಮಾಡುತ್ತಿದೆ. ಪೂಂಚ್ ಪ್ರವಾಸದ ವೇಳೆ ಮೆಹಬೂಬಾ ಮುಫ್ತಿ ಇಲ್ಲಿನ ನವಗ್ರಹ ದೇವಸ್ಥಾನಕ್ಕೆ ತೆರಳಿದ್ದರು.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪೂಂಚ್ ಪ್ರವಾಸವು ಇದ್ದಕ್ಕಿದ್ದಂತೆ ಸುದ್ದಿ ಮಾಡುತ್ತಿದೆ. ಪೂಂಚ್ ಪ್ರವಾಸದ ವೇಳೆ ಮೆಹಬೂಬಾ ಮುಫ್ತಿ ಇಲ್ಲಿನ ನವಗ್ರಹ ದೇವಸ್ಥಾನಕ್ಕೆ ತೆರಳಿದ್ದರು. ಇಲ್ಲಿ ಮೆಹಬೂಬಾ ಮುಫ್ತಿ ಅವರು ದೇವಸ್ಥಾನದ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದು ಮಾತ್ರವಲ್ಲದೆ ಶಿವಲಿಂಗಕ್ಕೆ ಜಲಾಭಿಷೇಕವನ್ನೂ ಮಾಡಿದ್ದಾರೆ. ಇದರ ವಿಡಿಯೋ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಡಿಯೋ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮೆಹಬೂಬಾ ಮುಫ್ತಿ ಹಿಂದೂ ದೇವಾಲಯದಲ್ಲಿ ಪ್ರಾರ್ಥಿಸುತ್ತಿದ್ದಾರೆ. ಫತ್ವಾ ಬರುತ್ತಿದೆ... ಎಂದು ಶೆಫಾಲಿ ವೈದ್ಯ ಬರೆದುಕೊಂಡಿದ್ದಾರೆ.

ಮೆಹಬೂಬಾ ಮುಫ್ತಿ ಶಿವ ಮಂದಿರದಲ್ಲಿ ಪೂಜೆ ಮಾಡುತ್ತಿದ್ದಾರೆ. ಸಾವರ್ಕರ್ ಜಿ ಹೇಳಿದ್ದು ಸರಿಯಾಗಿದೆ. ಹಿಂದೂಗಳು ಒಂದಾಗುವ ದಿನ ನಾಯಕರು ತಮ್ಮ ಕೋಟ್‌ಗಳ ಮೇಲೆ ಪವಿತ್ರ ದಾರವನ್ನು ಧರಿಸುತ್ತಾರೆ ಎಂದು ಸಾಮ್ರಾಟ್ ಭಾಯ್ ಎಂಬುವರು ಬರೆದುಕೊಂಡಿದ್ದಾರೆ.

ಮೆಹಬೂಬಾ ಮುಫ್ತಿ ಅವರು ಪೂಂಚ್‌ನ ನವಗ್ರಹ ದೇವಾಲಯದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ಇಂತಹ ದಿನ ಬರುತ್ತದೆ ಎಂದು ಯಾರಾದರೂ ಊಹಿಸಿದ್ದೀರಾ ಎಂದು ಪ್ರೀತಿ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಇಸ್ಲಾಂನಲ್ಲಿ ಇದನ್ನು ಅನುಮತಿಸಲಾಗಿದೆ. ಮೋದಿ ಇದ್ದರೆ ಅದು ಸಾಧ್ಯ. ಶೀಘ್ರದಲ್ಲೇ ಉಜ್ಜಯಿನಿಯಲ್ಲಿ ಮಹಾಕಾಲನ ಆರತಿಯನ್ನು ಮಾಡುವುದನ್ನು ಅವಳು ನೋಡಲಿದ್ದಾಳೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಇನ್ನು ತಮ್ಮ ನಡೆಯನ್ನು ಮೆಹಬೂಬಾ ಮುಫ್ತಿ ಅವರು  ಸಮರ್ಥಿಸಿಕೊಂಡಿದ್ದಾರೆ. ನಾವು ಗಂಗಾ-ಯಮುನ ತೆಹಜೀಬ್‌ನ ತವರೂರು ದೇಶದಲ್ಲಿ ವಾಸಿಸುತ್ತಿದ್ದೇವೆ. ನನಗೆ ಭೋದನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com