ತಮಿಳುನಾಡು: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ, ಚರ್ಚ್ ಪಾದ್ರಿ ಬಂಧನ 

ನರ್ಸಿಂಗ್ ವಿದ್ಯಾರ್ಥಿನಿಗೆ  ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಚರ್ಚ್ ಪಾದ್ರಿಯೊಬ್ಬರನ್ನು ಸೋಮವಾರ ಕನ್ಯಾಕುಮಾರಿಯಲ್ಲಿ  ಬಂಧಿಸಲಾಗಿದೆ. ನರ್ಸಿಂಗ್ ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಪಾದ್ರಿ ಬೆನೆಡಿಕ್ಟ್ ಆಂಟೊ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಆತ ಕಳೆದೆರಡು ದಿನಗಳಿಂದ ತಲೆಮರೆಸಿಕೊಂಡಿದ್ದ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ನರ್ಸಿಂಗ್ ವಿದ್ಯಾರ್ಥಿನಿಗೆ  ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಚರ್ಚ್ ಪಾದ್ರಿಯೊಬ್ಬರನ್ನು ಸೋಮವಾರ ಕನ್ಯಾಕುಮಾರಿಯಲ್ಲಿ  ಬಂಧಿಸಲಾಗಿದೆ. ನರ್ಸಿಂಗ್ ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಪಾದ್ರಿ ಬೆನೆಡಿಕ್ಟ್ ಆಂಟೊ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಆತ ಕಳೆದೆರಡು ದಿನಗಳಿಂದ ತಲೆಮರೆಸಿಕೊಂಡಿದ್ದ. 

ಇಂದು ಬೆಳಗ್ಗೆ ನಾಗರ್‌ಕೋಯಿಲ್‌ನ ಫಾರ್ಮ್‌ಹೌಸ್‌ನಿಂದ ಆತನನ್ನು ಬಂಧಿಸಲಾಗಿದೆ ಎಂದು ಕನ್ಯಾಕುಮಾರಿ ಪೊಲೀಸ್ ಮೂಲಗಳು ತಿಳಿಸಿವೆ. ಪಾದ್ರಿಯು ಮಹಿಳೆಯೊಂದಿಗಿನ ಸರಸ- ಸಲ್ಲಾಪದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲ ದಿನಗಳ ಹಿಂದೆ ಪಾದ್ರಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಲ್ಯಾಪ್‌ಟಾಪ್ ಕಿತ್ತುಕೊಂಡಿತ್ತು. ಆದಾಗ್ಯೂ, ಆತ ಯಾರ ವಿರುದ್ಧವೂ ದೂರು ದಾಖಲಿಸಿರಲಿಲ್ಲ. 

ಲ್ಯಾಪ್‌ಟಾಪ್ ವಶಪಡಿಸಿಕೊಂಡ ಒಂದೆರಡು ದಿನಗಳ ನಂತರ, ಆಂಟೊ ಯುವತಿಯರೊಂದಿಗೆ ಇರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಪಾದ್ರಿ ಈ ಹಿಂದೆ ಆಸ್ಟಿನ್ ಗಿನೋ ಎಂಬ ಯುವಕನ ವಿರುದ್ಧ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಮತ್ತು ಆಸ್ಟಿನ್ ಸ್ನೇಹಿತನಾಗಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಪಾದ್ರಿಯ ವಿರುದ್ಧ ಗಿನೋ ಈ ಹಿಂದೆ ದೂರು ದಾಖಲಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com