ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವು!

ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷಾ ಹೆಣ್ಣು ಚಿರತೆ ಮೃತಪಟ್ಟಿರುವುದಾಗಿ ಮಧ್ಯ ಪ್ರದೇಶ ಮುಖ್ಯ ಅರಣ್ಯಾ ಸಂರಕ್ಷಣಾಧಿಕಾರಿ ಜೆ ಎಸ್ ಚೌಹ್ಹಾಣ್ ತಿಳಿಸಿದ್ದಾರೆ.
ಮೃತಪಟ್ಟ ದಕ್ಷಾ ಹೆಣ್ಣು ಚಿರತೆ
ಮೃತಪಟ್ಟ ದಕ್ಷಾ ಹೆಣ್ಣು ಚಿರತೆ

ಮಧ್ಯ ಪ್ರದೇಶ: ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷಾ ಹೆಣ್ಣು ಚಿರತೆ ಮೃತಪಟ್ಟಿರುವುದಾಗಿ ಮಧ್ಯ ಪ್ರದೇಶ ಮುಖ್ಯ ಅರಣ್ಯಾ ಸಂರಕ್ಷಣಾಧಿಕಾರಿ ಜೆ ಎಸ್ ಚೌಹ್ಹಾಣ್ ತಿಳಿಸಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೂ ಮೂರು ಚಿರತೆಗಳು ಸಾವನ್ನಪ್ಪಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿದ್ದ ಆರು ವರ್ಷದ ಗಂಡು ಚಿರತೆ ಕಳೆದ ತಿಂಗಳು ಸಾವನ್ನಪ್ಪಿತ್ತು.  ಅದರ ಸಾವಿಗೆ ಕಾರಣಗಳು ಇನ್ನೂ ತಿಳಿದಿಲ್ಲ.

ಇತ್ತೀಚಿಗೆ ಉದಯ್ ಎಂದು ಹೆಸರಿಡಲಾದ  ಚಿರತೆ ಭಾನುವಾರ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿತ್ತು ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್‌ನಲ್ಲಿ, ಸಶಾ ಎಂಬ ನಮೀಬಿಯಾ ಚಿರತೆ ಮೂತ್ರಪಿಂಡದ ತೊಂದರೆಗಳಿಂದ ಸಾವನ್ನಪ್ಪಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com