ವಿಧಿ 370ರ ಮರುಸ್ಥಾಪನೆವರೆಗೂ ವಿಧಾನಸಭಾ ಚುನಾವಣೆ ಸ್ಪರ್ಧೆ ಇಲ್ಲ, ಕಾಂಗ್ರೆಸ್ ಗೆ ದೊಡ್ಡ ಜವಾಬ್ದಾರಿ ಇದೆ: ಮೆಹಬೂಬಾ ಮುಫ್ತಿ

ಮೋದಿ ಸರ್ಕಾರ ತೆಗೆದು ಹಾಕಿರುವ ವಿಧಿ370ರ ಮರುಸ್ಥಾಪನೆವರೆಗೂ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ..ಭಾರತದ ಕಲ್ಪನೆಯ ಉಳಿವಿಗಾಗಿ, ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ವಿಧಿ 370ರ ಮರುಸ್ಥಾಪನೆವರೆಗೂ ವಿಧಾನಸಭಾ ಚುನಾವಣೆ ಸ್ಪರ್ಧೆ ಇಲ್ಲ, ಕಾಂಗ್ರೆಸ್ ಗೆ ದೊಡ್ಡ ಜವಾಬ್ದಾರಿ ಇದೆ: ಮೆಹಬೂಬಾ ಮುಫ್ತಿ

ಬೆಂಗಳೂರು: ಮೋದಿ ಸರ್ಕಾರ ತೆಗೆದು ಹಾಕಿರುವ ವಿಧಿ370ರ ಮರುಸ್ಥಾಪನೆವರೆಗೂ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ..ಭಾರತದ ಕಲ್ಪನೆಯ ಉಳಿವಿಗಾಗಿ, ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, 'ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ... ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯುತ್ತದೆ ಎಂದು ನನಗನ್ನಿಸುತ್ತಿಲ್ಲ. ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವುದೇ ವಿರೋಧವನ್ನು ಬಯಸುವುದಿಲ್ಲ. ದೆಹಲಿ ಸರ್ಕಾರ ಶಕ್ತಿಹೀನವಾಗಿದೆ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ಅಂತೆಯೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿ-20 ದೇಶದ ಕಾರ್ಯಕ್ರಮ.. ಆದರೆ ಬಿಜೆಪಿ ಅದನ್ನು ಹೈಜಾಕ್ ಮಾಡಿದೆ. ಬಿಜೆಪಿ ಕಾರ್ಯಕ್ರಮದ ಚಿನ್ಹೆಯನ್ನು ಕಮಲಕ್ಕೆ ಬದಲಾಯಿಸಿದೆ. ಜನರು ದೇಶದೊಂದಿಗೆ ಬೆಸೆದುಕೊಂಡಿರಬೇಕೇ ಹೊರತು ಯಾವುದೇ ಪಕ್ಷದೊಂದಿಗೆ ಅಲ್ಲ... ಈ ಪ್ರದೇಶದಲ್ಲಿ ನಾವು ನಮ್ಮ ದೇಶದ ನಾಯಕತ್ವವನ್ನು ಸ್ಥಾಪಿಸುತ್ತೇವೆ.. ಏಕೆ ಸಾರ್ಕ್ ಶೃಂಗಸಭೆ ನಡೆಸಿ ಸಮಸ್ಯೆ ಬಗೆಹರಿಸಬಾರದು ಎಂದು ಮೆಹಬೂಬಾ ಹೇಳಿದರು.

ಕರ್ನಾಟಕ ಚುನಾವಣಾ ಫಲಿತಾಂಶ ಇಡೀ ದೇಶಕ್ಕೇ ಭರವಸೆಯ ಕಿರಣ
ಇದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವನ್ನು ಶ್ಲಾಘಿಸಿರುವ ಮುಫ್ತಿ ಮೆಹಬೂಬಾ, ಕರ್ನಾಟಕ ಚುನಾವಣಾ ಫಲಿತಾಂಶ ಇಡೀ ದೇಶಕ್ಕೇ ಭರವಸೆಯ ಕಿರಣ ತೋರಿಸಿದೆ. ಇತರ ಪಕ್ಷಗಳಿಗೆ ಹೋಲಿಸಿದರೆ ಭಾರತದ ಕಲ್ಪನೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ಹೊಂದಿದೆ. ಎಲ್ಲರೂ ಕೈಕೊಟ್ಟಾಗ ಕರ್ನಾಟಕ ಇಡೀ ದೇಶಕ್ಕೆ ಭರವಸೆಯ ಕಿರಣವನ್ನು ತೋರಿಸಿತು ಎಂದು ಹೇಳಿದರು.

370ನೇ ವಿಧಿ ರದ್ದತಿ ಮೂಲಕ ರಾಜ್ಯ ವಿಭಜನೆ
ಕಳೆದ ಐದು ವರ್ಷಗಳಿಂದ ಕರ್ನಾಟಕವು ದ್ವೇಷ ಮತ್ತು ಕೋಮುವಾದಿ ರಾಜಕಾರಣವನ್ನು ಅನುಭವಿಸಿದೆ, ಆದರೆ ರಾಜ್ಯವು ಪ್ರಜಾಪ್ರಭುತ್ವಕ್ಕೆ ಎರಡನೇ ಅವಕಾಶವನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವು ಫೆಡರಲಿಸಂಗೆ ಅತ್ಯುತ್ತಮ ಉದಾಹರಣೆಯಾಗಿದೆ, ಆದರೆ 370 ನೇ ವಿಧಿಯ ರದ್ದತಿಯು ರಾಜ್ಯವನ್ನು ವಿಭಜಿಸಿ ಅದನ್ನು ಅಸಮರ್ಥಗೊಳಿಸಿತು ಎಂದು ಮೆಹಬೂಬಾ ಮುಫ್ತಿ ಹೇಳಿದರು.

ಶಕ್ತಿಹೀನ ದೆಹಲಿ ಸರ್ಕಾರ
ಇದೇ ವೇಳೆ ಶಕ್ತಿಹೀನ ದೆಹಲಿ ಸರ್ಕಾರ ಎಂದು ಹೇಳಿರುವ ಮೆಹಬೂಬಾ, ದೆಹಲಿಯಲ್ಲಿ ಏನೇ ನಡೆದರೂ ಅದು ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ ಎಂದು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com