ಪಾಟ್ನಾ: ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿ, ಮಹಿಳೆಗೆ ಗುಂಡಿಕ್ಕಿ ಹತ್ಯೆ

ಪಾಟ್ನಾದ ಹೊರವಲಯದಲ್ಲಿರುವ ಪಾಲಿಗಾಂಗ್ ಬ್ಲಾಕ್‌ನಲ್ಲಿ ಗುರುವಾರ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯನ್ನು ಮತ್ತು ಆತನ ಪಾರ್ಟನರ್ ಗೆ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪಾಟ್ನಾ: ಪಾಟ್ನಾದ ಹೊರವಲಯದಲ್ಲಿರುವ ಪಾಲಿಗಾಂಗ್ ಬ್ಲಾಕ್‌ನಲ್ಲಿ ಗುರುವಾರ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯನ್ನು ಮತ್ತು ಆತನ ಪಾರ್ಟನರ್ ಗೆ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪಲಿಗಂಜ್ ಬ್ಲಾಕ್‌ನ ಮದರಿಪುರ-ಫತೇಪುರ್‌ನ ಖಿರಿ ಮೋರ್ ಬಳಿ ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿ ಹಾಗೂ ಮಹಿಳೆಯ ಶವಗಳನ್ನು ನೋಡಿದ ಕೆಲವು ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಮೂರು ಡೆಡ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೃತರನ್ನು ಖಿರಿ ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌಸ್‌ನಗರ ನಿವಾಸಿ ರಾಜೇಂದ್ರ ಯಾದವ್ ಮತ್ತು ಅದೇ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್‌ಪುರ ಗ್ರಾಮದ ನಿವಾಸಿ ಶಾರದಾ ದೇವಿ ಎಂದು ಗುರುತಿಸಲಾಗಿದೆ.

"ಮೃತರು ಅಕ್ರಮ ಸಂಬಂಧ ಹೊಂದಿದ್ದು, ಇದರ ಪರಿಣಾಮ ಕೊಲೆ ನಡೆದಿರಬಹುದು. ರಾಜೇಂದ್ರ ಯಾದವ್ ಎರಡು ಮದುವೆಯಾಗಿದ್ದರು. ಆದರೆ ಅವರ ಇಬ್ಬರು ಪತ್ನಿಯರು ಸಾವನ್ನಪ್ಪಿದ್ದಾರೆ. ನಂತರ ಅವರು ವಿವಾಹಿತ ಮಹಿಳೆ ಶಾರದಾ ದೇವಿಯೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ನಮ್ಮ ತಂಡವು ಸ್ಥಳದಲ್ಲಿ ಡೆಡ್ ಕಾಟ್ರಿಡ್ಜ್‌ಗಳನ್ನು ಪತ್ತೆ ಮಾಡಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಪಾಲಿಗಂಜ್ ಎಸ್‌ಡಿಪಿಒ ಅವಧೇಶ್ ದೀಕ್ಷಿತ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com