ಮನೆ ಸ್ವಚ್ಛಗೊಳಿಸು ಎಂದಿದ್ದಕ್ಕೆ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ: ಎಫ್‌ಐಆರ್‌ ದಾಖಲು

ಮನೆ ಸ್ವಚ್ಛಗೊಳಿಸು ಎಂದಿದ್ದಕ್ಕೆ ಕೋಪಗೊಂಡ ಪತ್ನಿಯೊಬ್ಬಳು ಗಂಡನ ಕಿವಿ ತುಂಡರಿಸಿದ ಘಟನೆಯೊಂದು ದೆಹಲಿಯ ಸುಲ್ತಾನ್​ಪುರಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮನೆ ಸ್ವಚ್ಛಗೊಳಿಸು ಎಂದಿದ್ದಕ್ಕೆ ಕೋಪಗೊಂಡ ಪತ್ನಿಯೊಬ್ಬಳು ಗಂಡನ ಕಿವಿ ತುಂಡರಿಸಿದ ಘಟನೆಯೊಂದು ದೆಹಲಿಯ ಸುಲ್ತಾನ್​ಪುರಿಯಲ್ಲಿ ನಡೆದಿದೆ.

45 ವರ್ಷದ ಗಂಡನ ಕಿವಿಯನ್ನು ಕಚ್ಚಿದ ಪರಿಣಾಮ ಬಲ ಕಿವಿ ತುಂಡಾಗಿದ್ದು, ಕೊನೆಗೆ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗಿದೆ. ಈ ಸಂಬಂಧ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.20ರಂದು ಬೆಳಗ್ಗೆ 9.20ರ ಸುಮಾರಿಗೆ ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ, ಮನೆ ಸ್ವಚ್ಛಗೊಳಿಸುವಂತೆ ಪತ್ನಿಗೆ ಹೇಳಿದ್ದೆ, ಮನೆಗೆ ಬಂದ ಕೂಡಲೇ ಪತ್ನಿ ಜಗಳವಾಡಲು ಶುರು ಮಾಡಿದ್ದಳು. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಮನೆಯನ್ನು ಮಾರಿ ತನಗೆ ಪಾಲು ನೀಡುವಂತೆ ಕೇಳಿದ್ದರು.

ನಾನು ಅವಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ, ವಾಗ್ವಾದ ನಡೆಯಿತು, ಆಕೆ ಹೊಡೆಯಲು ಬಂದಳು ನಾನು ದೂರ ತಳ್ಳಿದೆ, ಆಗ ಹಿಂದಿನಿಂದ ಬಂದು ಕಿವಿಯನ್ನು ಕಚ್ಚಿದಲು. ಇದರಿಂದ ನನ್ನ ಬಲಗಿವಿಯ ಮೇಲ್ಭಾಗ ತುಂಡಾಗಿದೆ ಎಂದು ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com