'ಬಿಜೆಪಿ ಜೊತೆ ಮೈತ್ರಿ ಇಲ್ಲ', ಚುನಾವಣೆ ವೇಳೆ ನಿರ್ಧಾರ ಎಂದ ಎಐಎಡಿಎಂಕೆ, ಅಣ್ಣಾಮಲೈ ವಿರುದ್ಧ ವಾಗ್ದಾಳಿ

ತಮ್ಮ ನಾಯಕ ಸಿವಿ ಷಣ್ಮುಗಂ ಮತ್ತು ಇತರರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ತೀವ್ರ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಎಐಎಡಿಎಂಕೆ ಮಹತ್ವದ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚೆನ್ನೈ: ತಮ್ಮ ನಾಯಕ ಸಿವಿ ಷಣ್ಮುಗಂ ಮತ್ತು ಇತರರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ತೀವ್ರ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಎಐಎಡಿಎಂಕೆ ಮಹತ್ವದ ಘೋಷಣೆ ಮಾಡಿದೆ.

ಎಐಎಡಿಎಂಕೆ ಸೋಮವಾರ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಮತ್ತು ಚುನಾವಣೆ ಅಧಿಸೂಚನೆಯ ನಂತರವೇ ಯಾವುದೇ ಮೈತ್ರಿ ನಿರ್ಧಾರವಾಗಲಿದೆ ಎಂದು ಸೋಮವಾರ ಎಐಎಡಿಎಂಕೆ ಘೋಷಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿ ಡಿ.ಜಯಕುಮಾರ್, 'ಬಿಜೆಪಿಯೊಂದಿಗೆ ಈಗ ಯಾವುದೇ ಮೈತ್ರಿ ಇಲ್ಲ ಎಂಬುದು ಪಕ್ಷದ ನಿಲುವು ಎಂದು ಪ್ರತಿಪಾದಿಸಿದರು.

"ಎಐಎಡಿಎಂಕೆ ಈಗ ಬಿಜೆಪಿಯೊಂದಿಗೆ ಮೈತ್ರಿ ಹೊಂದಿಲ್ಲ; ಚುನಾವಣೆ ಘೋಷಣೆಯಾದಾಗ ಮಾತ್ರ ಮೈತ್ರಿ ಕುರಿತು ನಿರ್ಧಾರವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ನಮ್ಮ ನಾಯಕರನ್ನು ಟೀಕಿಸುವುದನ್ನು ಮುಂದುವರಿಸಿದರೆ, ನಾವು ತೀವ್ರವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಜಯ್ ಕುಮಾರ್ ಹೇಳಿದ್ದಾರೆ.

2026ರಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂಬ ಅಣ್ಣಾಮಲೈ ಅವರ ಪ್ರತಿಪಾದನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯಕುಮಾರ್, ಈಗಾಗಲೇ ಅಣ್ಣಾಮಲೈ ಅವರು ಅಮ್ಮ (ಜೆ ಜಯಲಲಿತಾ) ಅವರನ್ನು ಟೀಕಿಸಿದ್ದಾರೆ ಮತ್ತು ಎಐಎಡಿಎಂಕೆ ಪಕ್ಷದ ಸಭೆಯಲ್ಲಿ ಅವರ ವಿರುದ್ಧ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು. 

"ಕೆಲವು ದಿನಗಳ ಹಿಂದೆ ಅಣ್ಣಾಮಲೈ ಅವರು ಅರಿಗ್ನಾರ್ ಅಣ್ಣಾ ಅವರನ್ನು ಕೀಳಾಗಿ ಟೀಕಿಸಿದ್ದರು. ಭಾನುವಾರ, ಅವರು ಪೆರಿಯಾರ್ ಅವರ ವಿರುದ್ಧವೂ ಹೇಳಿಕೆ ನೀಡಿದ್ದರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಹೇಗೆ ಮುಖ್ಯಮಂತ್ರಿಯಾದರು ಎಂಬಿತ್ಯಾದಿ ಅಂಶಗಳ ಕುರಿತು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಇದು ಮೈತ್ರಿಧರ್ಮದ ಪಾಲನೆಯಲ್ಲ. ಎಐಎಡಿಎಂಕೆ ಕಾರ್ಯಕರ್ತರು ಅವರ ಈ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಜಯಕುಮಾರ್ ಹೇಳಿದ್ದಾರೆ.

ಅಣ್ಣಾಮಲೈ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನರ್ಹರು. ಅವರು ಬಿಜೆಪಿಗಿಂತ ಹೆಚ್ಚಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅಣ್ಣಾಮಲೈ ಯಾವ ಕಾರಣಕ್ಕೆ ಪೊಲೀಸ್ ಕೆಲಸ ಬಿಟ್ಟಾರೋ ಗೊತ್ತಿಲ್ಲ. ಆ ಬಗ್ಗೆ ಕೆದಕಿದರೆ ಮಾತ್ರ ಗೊತ್ತಾಗುತ್ತದೆ. ಅಣ್ಣಾಮಲೈ ನೀಚ ಮನಸ್ಸಿನ ವ್ಯಕ್ತಿ. ಅಣ್ಣಾಮಲೈ ಏಕಾಂಗಿಯಾಗಿ ಸ್ಪರ್ಧಿಸಿದರೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆಯುತ್ತಾರೆ ಎಂದು ಜಯಕುಮಾರ್ ಹೇಳಿದ್ದಾರೆ.

"ನಾವು ಅಣ್ಣಾಮಲೈ ಅವರನ್ನು ವಿರೋಧಿ ಹೇಳಿಕೆಗಳನ್ನು ನಿಲ್ಲಿಸುವಂತೆ ಹಲವು ಬಾರಿ ಎಚ್ಚರಿಸಿದ್ದೇವೆ. ಆದರೆ ಅವರು ನಿಲ್ಲಿಸುತ್ತಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇನ್ನು ಮುಂದೆ ಎಐಎಡಿಎಂಕೆ ಐಟಿ ವಿಂಗ್‌ನವರು ಅಣ್ಣಾಮಲೈ ಅವರನ್ನು ಬಲವಾಗಿ ಟೀಕಿಸುತ್ತಾರೆ. ಬಿಜೆಪಿ ಕಾರ್ಯಕರ್ತರು ಎಐಎಡಿಎಂಕೆ ಜೊತೆ ಮೈತ್ರಿ ಮುಂದುವರಿಸಲು ಬಯಸುತ್ತದೆ. ಆದರೆ ಅಣ್ಣಾಮಲೈ ಈ ಮೈತ್ರಿಯನ್ನು ಇಷ್ಟಪಡಲಿಲ್ಲ. ಮೈತ್ರಿ ಪಕ್ಷದ ನಾಯಕರ ಬಗ್ಗೆ ಅಣ್ಣಾಮಲೈ ಇಂತಹ ಟೀಕೆಗಳನ್ನು ಮುಂದುವರಿಸಿದರೆ, ಚುನಾವಣೆಯ ಸಮಯದಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ಹೇಗೆ ಕೆಲಸ ಮಾಡುತ್ತಾರೆ? ಅಣ್ಣಾಮಲೈ ಅವರ ಈ ಎಲ್ಲಾ ಅನಗತ್ಯ ಹೇಳಿಕೆಗಳನ್ನು ಸಹಿಸಿಕೊಂಡು ಎಐಎಡಿಎಂಕೆ ಬಿಜೆಪಿಯನ್ನು ಕೊಂಡೊಯ್ಯುವ ಅವಶ್ಯಕತೆ ಏನು? ಬಿಜೆಪಿಗೆ ಲಾಭವಾಗುವುದಿಲ್ಲ. ನಿಮ್ಮ ಮತಬ್ಯಾಂಕ್ ನಮಗೆ ಗೊತ್ತಿರುವುದರಿಂದ ತಮಿಳುನಾಡಿನಲ್ಲಿ ನೆಲೆಯೂರಿದೆ. ಎಐಎಡಿಎಂಕೆ ಬಿಜೆಪಿಯ ಗುರುತಾಗಿದೆ ಎಂದು ಅವರು ಹೇಳಿದರು.

ಎಐಎಡಿಎಂಕೆ ನಾಯಕರು ಈ ವಿಷಯವನ್ನು ಈಗಾಗಲೇ ಬಿಜೆಪಿಯ ವರಿಷ್ಠರೊಂದಿಗೆ ತೆಗೆದುಕೊಂಡು ಹೋಗಲಾಗಿದೆ. ಅಣ್ಣಾಮಲೈ ಅವರನ್ನು ನಿಯಂತ್ರಿಸುವಂತೆ ವಿನಂತಿಸಿದ್ದಾರೆ. ಇಷ್ಟಾದರೂ ಅಣ್ಣಾಮಲೈ ಎಐಎಡಿಎಂಕೆ ನಾಯಕರನ್ನು ಟೀಕಿಸುತ್ತಲೇ ಇದ್ದಾರೆ ಮತ್ತು ಪಕ್ಷದ ಕಾರ್ಯಕರ್ತರು ಇದನ್ನು ಸಹಿಸುತ್ತಿಲ್ಲ ಎಂದು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com