ಮದುವೆಯಲ್ಲಿ ಪುರೋಹಿತರ ಮೇಲೆ ಕಿಡಿಗೇಡಿಗಳ ಪುಂಡಾಟ; ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಕಿರುಕುಳ; ಅರ್ಚಕರಿಂದ ಪ್ರತಿಭಟನೆ

ಮದುವೆ ಕಾರ್ಯ ಮಾಡಿಸಲು ಬಂದಿದ್ದ ಪುರೋಹಿತರ ಮೇಲೆಯೇ ಕಿಡಿಗೇಡಿಗಳು ಪುಂಡಾಟ ಮೆರೆದಿದ್ದು, ಅವರ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ವರದಿಯಾಗಿದೆ.
ಪುರೋಹಿತರ ಮೇಲೆ ಕಿಡಿಗೇಡಿಗಳ ಪುಂಡಾಟ
ಪುರೋಹಿತರ ಮೇಲೆ ಕಿಡಿಗೇಡಿಗಳ ಪುಂಡಾಟ

ಕಾಕಿನಾಡ: ಮದುವೆ ಕಾರ್ಯ ಮಾಡಿಸಲು ಬಂದಿದ್ದ ಪುರೋಹಿತರ ಮೇಲೆಯೇ ಕಿಡಿಗೇಡಿಗಳು ಪುಂಡಾಟ ಮೆರೆದಿದ್ದು, ಅವರ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ವರದಿಯಾಗಿದೆ.

ಹೌದು.. ಇತ್ತೀಚಿಗೆ ಶಿವ ದೇವಾಲಯದಲ್ಲಿ ಇಬ್ಬರು ಅರ್ಚಕರ ಮೇಲೆ ವೈಸಿಪಿ ಪಕ್ಷದ ನಾಯಕನೊಬ್ಬ ಹಲ್ಲೆ ನಡೆಸಿದ ಘಟನೆ ಮರೆಯುವ ಮುನ್ನವೇ ಅದೇ ಜಿಲ್ಲೆಯಲ್ಲಿ ಮತ್ತೊಬ್ಬ ಅರ್ಚಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ (Marriage) ಮಾಡಿಸಲು ಬಂದಿದ್ದ ಪುರೋಹಿತರ ಮೇಲೆ ಪುಂಡರು ಕೀಟಲೆ ಮಾಡಿ, ಅವರ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಅವಮಾನಿಸಿ, ಅದರನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಮಾಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡದಲ್ಲಿ ನಡೆದಿದೆ.

ಪುರೋಹಿತರ ಮೇಲೆ ಕಿಡಿಗೇಡಿಗಳ ಪುಂಡಾಟ
ಕುಮಟಾ: ನಾಪತ್ತೆಯಾಗಿದ್ದ ಪುರೋಹಿತ ಶವವಾಗಿ ಪತ್ತೆ !

ಕಾಕಿನಾಡ ಜಿಲ್ಲೆಯ ಕೊತ್ತಪೇಟ್​ ತಾಲೂಕಿನ ಮೂಲಪೇಟ್ ಗ್ರಾಮದಲ್ಲಿ ಇದೇ ತಿಂಗಳ 12ರಂದು ವಿವಾಹ ಸಮಾರಂಭ ನಡೆದಿತ್ತು. ಗ್ರಾಮದ ಅರ್ಚಕ ಅಚ್ಚೆಳ್ಳ ಸೂರ್ಯನಾರಾಯಣಮೂರ್ತಿ ಶರ್ಮ ಎಂಬುವವರು ವಿವಾಹ ನೆರವೇರಿಸಲು ತೆರಳಿದ್ದರು. ಮದುವೆ ಸಮಾರಂಭದ ವೇಳೆ ಕೆಲ ಕಿಡಿಗೇಡಿಗಳು ಅರ್ಚಕನಿಗೆ ಕಿರುಕುಳ ನೀಡಿದ್ದಾರೆ.

ಪೂಜಾರಿ ಶರ್ಮಾ ಅವರ ತಲೆಯ ಮೇಲೆ ಚೀಲವನ್ನು ಹಾಕುವುದು, ಅರಿಶಿನ, ಕುಂಕುಮ ಎರಚುವುದು, ನೀರಿನ ಪ್ಯಾಕೆಟ್​ಗಳಿಂದ ಹೊಡೆಯುವುದು ಮತ್ತು ಇತರ ವಸ್ತುಗಳನ್ನು ಅವರ ಮೇಲೆ ಎರಚುವುದನ್ನ ಮಾಡಿದ್ದಾರೆ.

ಪುಂಡಾಟ ಮೆರೆದಿದ್ದು ಮಾತ್ರವಲ್ಲದೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್

ಇನ್ನು ಪುಂಡಾಟ ಮೆರೆದಿದ್ದು ಮಾತ್ರವಲ್ಲದೇ ತಮ್ಮ ಕಿಡಿಗೇಡಿತನವನ್ನು ವಿಡಿಯೋ ಮಾಡಿಕೊಂಡಿರುವ ಕಿಡಿಗೇಡಿಗಳು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಕೂಡ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು, ಈ ಘಟನೆ ರಾಜಕೀಯ ತಿರುವು ಕೂಡ ಪಡೆದಿದೆ. ಘಟನೆಯನ್ನು ಖಂಡಿಸಿರುವ ತೆಲುಗು ದೇಶಂ ಪಕ್ಷದ ನಾಯಕರು ವೈಸಿಪಿ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದೆ.

ಅರ್ಚಕ ಸಮುದಾಯದಿಂದ ಪ್ರತಿಭಟನೆ

ಪುಂಡರ ಪುಂಡಾಟದ ವಿಡಿಯೋ ವೈರಲ್ ಬೆನ್ನಲ್ಲೇ ಬ್ರಾಹ್ಮಣ ಮತ್ತು ವಿಶ್ವ ಹಿಂದೂ ಪರಿಷತ್ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಹಲವರು ಸಂತ್ರಸ್ತ ಅರ್ಚಕರ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಒತ್ತಾಯಿಸಿದ್ದಾರೆ.

ಪುರೋಹಿತರ ಮೇಲೆ ಕಿಡಿಗೇಡಿಗಳ ಪುಂಡಾಟ
ತಮಿಳುನಾಡು: ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿದ್ದ ಐವರು ಅರ್ಚಕರು ನೀರಿನಲ್ಲಿ ಮುಳುಗಿ ಸಾವು

ಪುಂಡರು ಪುಂಡಾಟ ಮೆರೆದಿದ್ದು ನಿಜ

ಇನ್ನು ಘಟನೆ ಸಂಬಂಧ ಸಂತ್ರಸ್ತ ಪುರೋಹಿತ ಸೂರ್ಯನಾರಾಯಣಮೂರ್ತಿ ಶರ್ಮಾ ಅವರನ್ನು ಸಂಪರ್ಕಿಸಿದಾಗ ಅವರು ಘಟನೆ ನಡೆದಿದ್ದು ನಿಜ. ಮದುವೆಗ ಬಂದಿದ್ದ ಕೆಲ ಪುಂಡರ ತಮ್ಮ ಮೇಲೆ ಕೀಟಲೆ ಮಾಡಿದ್ದು ನಿಜ, ನನ್ನನ್ನು ನಡೆಸಿಕೊಂಡ ರೀತಿಯಿಂದ ನೋವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೀಗ ವಿಶ್ವಹಿಂದೂ ಪರಿಷತ್​ ಸಂಘಟನೆ ಚರ್ಚಿಸಿ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿದರು.

ನೆಟ್ಟಿಗರ ತರಾಟೆ

ಪೊಲೀಸರನ್ನು ಸಂಪರ್ಕಿಸಿದಾಗ ಯಾವುದೇ ದೂರು ಬಂದಿಲ್ಲ ಎಂದು ಉತ್ತರಿಸಿದರು. ಈ ದುಷ್ಕೃತ್ಯ ಎಸಗಿರುವ ಎಲ್ಲರೂ ತುಂಡುಡುಗರು ಎಂಬುದು ವಿಡಿಯೋದಲ್ಲಿ ಕಾಣಬಹುದು. ಪದೇ ಪದೇ ಪುರೋಹಿತರ ಹತ್ತಿರ ಬಂದು ಅವರ ತಲೆಯ ಮೇಲೆ ಚೀಲ, ಹಾಕುವುದು, ವಾಟರ್ ಬಲೂನ್​ಗಳಿಂದ ಹೊಡೆಯುವುದು ಮಾಡಿದ್ದಾರೆ. ಇದನ್ನು ತಡೆದು ಹುಡುಗರಿಗೆ ಬುದ್ದಿ ಹೇಳಬೇಕಿದ್ದ ಹಿರಿಯರು ಕೂಡ ಏನೂ ಮಾತನಾಡದೇ ಸುಮ್ಮನೆ ನಿಂತಿದ್ದಾರೆ.

ಇದರಿಂದ ಯುವಕರ ಕಿರುಕುಳ ಮುಂದುವರಿದಿದೆ. ಇವರಲ್ಲಿ ವಿದ್ಯೆ, ಸಂಸ್ಕಾರ ಎಂಬುದು ಕಿಂಚಿತ್ತಿದಾರೂ ಇದಿಯಾ? ದೊಡ್ಡವರು ಚಿಕ್ಕವರು ಎಂಬ ಗೌರವ ಇಲ್ಲದೆ ವೃದ್ಧರನ್ನ ಈ ರೀತಿ ನಡೆಸಿಕೊಳ್ಳಬಹುದಾ? ಅವರ ಮನೆಯಲ್ಲಿರುವ ಹಿರಿಯನ್ನ ಇದೇ ರೀತಿ ನಡೆಸಿಕೊಳ್ಳುತ್ತಾರೆಯೇ? ಎಂದೆಲ್ಲಾ ಪ್ರಶ್ನಿಸಿರುವ ನೆಟ್ಟಿಗರು ಇವರಿಗೆ ತಕ್ಕ ಶಿಕ್ಷೆ ಕೊಟ್ಟು ಬುದ್ದಿ ಕಲಿಸಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com