ಮಾಂಸದೂಟಕ್ಕಾಗಿ ಹತ್ಯೆ: ಗಂಡನ ತಲೆಯನ್ನು ಕಲ್ಲಿನಿಂದ ಜಜ್ಜಿ ಮೆದುಳನ್ನು ಹೊರತೆಗೆದ ಮಹಿಳೆ, ಭೀಕರ ದೃಶ್ಯ

ನಿಜವಾಗಿ ಹೇಳಬೇಕೆಂದರೆ, ಮಾಂಸದೂಟ ವಿಚಾರದಲ್ಲಿ ಶುರುವಾದ ಜಗಳ ಪತ್ನಿ ಎಷ್ಟು ಕ್ರೂರತೆಗೆ ಇಳಿದಿದ್ದಳು ಎಂದರೆ ಆಕೆ ಗಂಡನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾಳೆ.
ಪತಿಯನ್ನು ಕೊಂದ ಪತ್ನಿ
ಪತಿಯನ್ನು ಕೊಂದ ಪತ್ನಿ
Updated on

ಶಹಜಹಾನ್‌ಪುರ(ಉತ್ತರಪ್ರದೇಶ): ಮಾಂಸದೂಟದ ವಿಚಾರವಾಗಿ ವ್ಯಕ್ತಿಯೋರ್ವ ತನ್ನ ಪತ್ನಿಯಿಂದಲೇ ಹತ್ಯೆಗೀಡಾಗಿದ್ದಾನೆ. ನಿಜವಾಗಿ ಹೇಳಬೇಕೆಂದರೆ, ಮಾಂಸದೂಟ ವಿಚಾರದಲ್ಲಿ ಶುರುವಾದ ಜಗಳ ಪತ್ನಿ ಎಷ್ಟು ಕ್ರೂರತೆಗೆ ಇಳಿದಿದ್ದಳು ಎಂದರೆ ಆಕೆ ಗಂಡನ ತಲೆಯನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಮಹಿಳೆ ಪೊಲೀಸರ ಎದುರೆ ತನ್ನ ಗಂಡನ ತಲೆಯಿಂದ ಮೆದುಳನ್ನು ಕಿತ್ತು ಎಸೆದಿದ್ದಾಳೆ.

ಈ ಭೀಕರ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದ ರೋಜಾದ ಹಥೋರಾ ಗ್ರಾಮದಲ್ಲಿ ನಡೆದಿದೆ. ಸತ್ಯಪಾಲ್ ಕ್ರೀಡಾಂಗಣದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ವಿಪರೀತ ಮದ್ಯ ಸೇವಿಸುತ್ತಿದ್ದ ಈತ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಗುರುವಾರ ಮಧ್ಯಾಹ್ನ 3 ಗಂಟೆಗೆ ಸತ್ಯಪಾಲ್ ಕೆಲಸ ಮುಗಿಸಿ ಬಂದು ಊಟಕ್ಕೆ ಕುಳಿತಿದ್ದನು. ಅವನು ತನ್ನ ಹೆಂಡತಿ ಗಾಯತ್ರಿ ದೇವಿ ಬಳಿ ಊಟ ಹಾಕುವಂತೆ ಹೇಳಿದ್ದಾನೆ. ಈ ವೇಳೆ ನಾನ್ ವೆಬ್ ಮಾಡಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಅದಕ್ಕೆ ಯಾಕೆ ನಾನ್ ವೆಬ್ ಮಾಡಿಲ್ಲ ಎಂದು ಸತ್ಯಪಾಲ್ ಪ್ರಶ್ನಿಸಿದ್ದಾನೆ. ಈ ವೇಳೆ ಮಾಂಸ ತರಲು ಹಣ ಇಲ್ಲ ಎಂದು ಹೇಳಿದ್ದಳು. ಅದಕ್ಕೆ ಆಕೆ ತನ್ನ ಬಳಿ ಹಣ ಎಂದು ಹೇಳಿದ್ದಳು. ಆಗ ನನ್ನ ಬಳಿ ಹಣ ಕೆಳಬೇಕಲ್ವ ಎಂದು ಸತ್ಯಪಾಲ್ ಹೇಳಿದ್ದು ಇದರಿಂದ ಗಾಯತ್ರಿ ದೇವಿ ತುಂಬಾ ಕೋಪಗೊಂಡಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಮನೆಯಿಂದ ಹೊರಗೆ ಬಂದ ನಂತರ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಗಾಯತ್ರಿ ದೇವಿ ಕೋಪದಿಂದ ತಾಳ್ಮೆ ಕಳೆದುಕೊಂಡು ಇಟ್ಟಿಗೆಯಿಂದ ಸತ್ಯಪಾಲ್ ತಲೆಗೆ ಹಲ್ಲೆ ನಡೆಸಿದ್ದಾಳೆ. ಅವನ ತಲೆಯಿಂದ ರಕ್ತ ಹರಿಯಲಾರಂಭಿಸಿತು. ತೀವ್ರವಾಗಿ ಗಾಯಗೊಂಡಿದ್ದ ಆತ ನೆಲದ ಮೇಲೆ ಬಿದ್ದನು. ಇಷ್ಟಕ್ಕೆ ಮಹಿಳೆಯ ಹೃದಯ ಕುಗ್ಗಲಿಲ್ಲ. ನಂತರ ಆತ ಸಾಯುವವರೆಗೂ ಇಟ್ಟಿಗೆಯಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲಿದ್ದವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ನೋಡಿದಾಗ ಸಾವಿತ್ರಿ ತುಂಬಾ ಕೋಪಗೊಂಡಿದ್ದು ಕಂಡುಬಂತು. ಅವಳು ಸತ್ಯಪಾಲ್‌ನ ಮೃತದೇಹದ ಮೇಲೆ ಕುಳಿತಿದ್ದಳು. ಪೊಲೀಸರನ್ನು ನೋಡಿ ಸತ್ಯಪಾಲ್‌ನ ಮದುಳನ್ನು ತೆಗೆದು ಹೊರಗೆ ಎಸೆದಿದ್ದಾಳೆ. ಇದನ್ನು ನೋಡಿ ಪೊಲೀಸರೂ ಭೀತರಾಗಿದ್ದರು. ಪೊಲೀಸರು ಬಹಳ ಕಷ್ಟಪಟ್ಟು ಆಕೆಯನ್ನು ನಿಯಂತ್ರಿಸಿ ಠಾಣೆಗೆ ಕರೆತಂದ್ದಾರೆ.

ಪತಿಯನ್ನು ಕೊಂದ ಪತ್ನಿ
Video: 5ನೇ ಅಂತಸ್ತಿನಿಂದ ಕೆಳಗೆ ಹಾರಿದ ನಾಯಿ ಬಿದ್ದು 3 ವರ್ಷದ ಮಗು ಸಾವು, ಮಾಲೀಕನ ಬಂಧನ

ಪ್ರಕರಣದ ಕುರಿತು ಎಎಸ್ಪಿ ಸಿಟಿ ಸಂಜಯ್ ಕುಮಾರ್ ಮಾತನಾಡಿ, ಸತ್ಯಪಾಲ್ ಮತ್ತು ಸಾವಿತ್ರಿ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರು ಹೆಚ್ಚು ಮದ್ಯ ಸೇವಿಸುತ್ತಿದ್ದನು. ಹೀಗಾಗಿ ಅವರ ನಡುವೆ ಜಗಳ ನಡೆಯುತ್ತಿತ್ತು. ಇದೆಲ್ಲದರಿಂದ ಮಕ್ಕಳು ತೊಂದರೆಗೀಡಾಗಿ ಅಜ್ಜಿಯ ಬಳಿಯೇ ಇರುತ್ತಾರೆ. ಅವರ ಮನೆ ಸ್ವಲ್ಪ ದೂರದಲ್ಲಿದೆ. ಮೃತದೇಹದೊಂದಿಗೆ ಮಹಿಳೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ತೋರುತ್ತದೆ. ಆರೋಪಿ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com