ದೇಶದ ಹಿರಿಯ ವಕೀಲ, ಸಂವಿಧಾನ ತಜ್ಞ ಎ.ಜಿ ನೂರಾನಿ ನಿಧನ

ಮುಂಬೈನಲ್ಲಿ 16, 1930 ರಂದು ಜನಿಸಿದ ನೂರಾನಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿದ್ದರು.
ಎ. ಜಿ. ನೂರಾನಿ
ಎ. ಜಿ. ನೂರಾನಿ
Updated on

ಮುಂಬೈ: ದೇಶದ ಹಿರಿಯ ಖ್ಯಾತ ವಕೀಲ, ಸಂವಿಧಾನ ತಜ್ಞ ಅಬ್ದುಲ್ ಗಫೂರ್ ಮಜೀದ್ ನೂರಾನಿ ಗುರುವಾರ ಮುಂಬೈನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮುಂಬೈನಲ್ಲಿ 16, 1930 ರಂದು ಜನಿಸಿದ ನೂರಾನಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿದ್ದರು.

ಕಾಶ್ಮೀರದ ಶೇಖ್ ಅಬ್ದುಲ್ಲಾ ಅವರ ಧೀರ್ಷಾವಧಿಯ ಬಂಧನ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ತಮಿಳುನಾಡಿನ ಜೆ. ಜಯಲಲಿತಾ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ವಾದಿಸಿದ್ದರು.

ಲೇಖಕರಾಗಿಯೂ ಗುರುತಿಸಿಕೊಂಡಿದ್ದ ಅವರು ದಿ ಕಾಶ್ಮೀರ್ ಡಿಸ್ಪ್ಯೂಟ್ 1947-2012, ಅರ್ಟಿಕಲ್ 370 ಎ, ಕಾನ್ಸಿಟ್ಯೂಶನಲ್ ಹಿಸ್ಟರಿ ಆಫ್ ಜಮ್ಮು ಅಂಡ್ ಕಾಶ್ಮೀರ್ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಬದ್ರುದ್ದೀನ್ ತೈಯ್ಯಬ್ಜಿ ಮತ್ತು ಡಾ. ಝಾಕಿರ್ ಹುಸೇನ್ ಅವರ ಜೀವನ ಚರಿತ್ರೆಯನ್ನು ನೂರಾನಿ ರಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com