Video: ಸಂಗೀತ ಮಾಂತ್ರಿಕ Ilayarajaಗೆ ಅಪಮಾನ? ದೇಗುಲದ ಗರ್ಭಗುಡಿಗೆ ಪ್ರವೇಶಿಸದಂತೆ ತಡೆ, ಆಗಿದ್ದೇನು?

ತಮಿಳುನಾಡಿನ ಶ್ರೀವಲ್ಲಿಪುತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಇಳಯರಾಜ ಅವರನ್ನು ಅರ್ಚಕರು ಗರ್ಭಗುಡಿಗೆ ಹೋಗದಂತೆ ತಡೆದಿದ್ದಾರೆ.
Andal Temple-Ilayaraja
ಆಂಡಾಳ್ ದೇವಸ್ಥಾನದಲ್ಲಿ ಇಳಯರಾಜಾ
Updated on

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ತಮಿಳುನಾಡಿನ ದೇಗುಲವೊಂದರಲ್ಲಿ ಅಪಮಾನವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ದೇಗುಲದ ಗರ್ಭಗುಡಿ ಪ್ರವೇಶಿಸದಂತೆ ಅರ್ಚಕರು ತಡೆದಿದ್ದಾರೆ ಎನ್ನಲಾಗಿದೆ.

ಇಳಯರಾಜ ಇತ್ತೀಚೆಗೆ ತಮಿಳುನಾಡಿನ ಶ್ರೀವಲ್ಲಿಪುತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ದೇವಸ್ಥಾನದ ಒಳಗೆ ಗರ್ಭಗುಡಿಗೆ ಹೋದ ಇಳಯರಾಜ ಅವರನ್ನು ಅರ್ಚಕರು ತಡೆದಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Andal Temple-Ilayaraja
ಡಾ.ರಾಜ್ ಕುಮಾರ್ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ಹಾಡುವಂತೆ ಹೇಳಿದ್ದೇ ನಾನು: ಇಳಯರಾಜಾ

ಆಗಿದ್ದೇನು?

ಇಳಯರಾಜ ಸಂಯೋಜಿಸಿದ ದಿವ್ಯ ಪಾಶುರಾಮ್ ನಾಟ್ಯಾಂಜಲಿ ಪ್ರದರ್ಶನವನ್ನು ಈ ದೇವಾಲಯದ ಆದಿ ಪುರ ಶೆಡ್‌ನಲ್ಲಿ ಖಾಸಗಿ ಕಂಪನಿಯೊಂದು ನಡೆಸುತ್ತಿತ್ತು. ಹೀಗಾಗಿ ಇಳಯರಾಜ ತಮಿಳುನಾಡಿನ ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನಕ್ಕೆ (Andal Temple) ತೆರಳಿದ್ದರು. ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಇಳಯರಾಜಾ ಅವರಿಗೆ ದೇಗುಲದ ಆಡಳಿತ ಮಂಡಳಿ ಸಿಬ್ಬಂದಿ ಆತ್ಮೀಯ ಸ್ವಾಗತ ಕೋರಿದ್ದರು.

ಬಳಿಕ ಆದಿ ತಿರುಪುರ್ ಪಂಥಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ ಕಾರ್ಯಕ್ರಮ ಮತ್ತು ಇಳಯರಾಜಾ ಸಂಯೋಜಿಸಿದ ದಿವ್ಯ ಪಾಶುರಂ ಹಾಡು ಬಿಡುಗಡೆ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಅವರು ದೇಗುಲದ ಒಳಗೆ ಹೋದರು.

ಗರ್ಭಗುಡಿ ಪ್ರವೇಶಿಸದಂತೆ ತಡೆ!

ಸಂಗೀತ ಸಂಯೋಜಕ ಇಳಯರಾಜ ಅವರು ನಂದನವನಂ, ಆಂಡಾಳ್ ಕ್ಷೇತ್ರ ಹಾಗೂ ಪೆರಿಯ ಪೆರುಮಾಳ್ ದೇವಸ್ಥಾನಗಳಿಗೆ ತೆರಳಿ ಸ್ವಾಮಿಯ ದರ್ಶನ ಪಡೆದರು. ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪಕ್ಕೆ ಇಳಯರಾಜ ಆಂಡಾಳ್ ತೆರಳಲು ಯತ್ನಿಸಿದಾಗ ಅಲ್ಲಿದ್ದ ಅರ್ಚಕರು ಒಳ ಪ್ರವೇಶಿಸದಂತೆ ತಡೆದರು. ಆ ಬಳಿಕ ಇಳಯರಾಜ ಗರ್ಭಗುಡಿಯಿಂದ ಹೊರಟು ಹೋದರು ಎನ್ನಲಾಗಿದೆ.

ನೆಟ್ಟಿಗರ ಕಿಡಿ

ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದ ಅರ್ಥ ಮಂಟಪದಿಂದ ಇಳಯರಾಜ ನಿರ್ಗಮಿಸಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅರ್ಚಕರ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಟೀಕೆ ಮಾಡ್ತಿದ್ದಾರೆ.

ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ

ಇನ್ನು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಈ ಬಗ್ಗೆ ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಆಂಡಾಳ್ ದೇವಾಲಯದಲ್ಲಿ ಇಳಿಯರಾಜ ಅವರಿಗೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಹೇಳಿದೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಆಂಡಾಳ್ ದೇವಾಲಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸಕ್ಕರೆ ಅಮ್ಮಾಳ್, 'ಆಂಡಾಳ್ ದೇವಾಲಯದ ಅರ್ಥ ಮಂಟಪಕ್ಕೆ ಅರ್ಚಕರು, ಸ್ವಾಮೀಜಿಗಳನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವಿಲ್ಲ. ಈ ಪದ್ಧತಿ ಇಂದಿನದಲ್ಲ.. ಹಿಂದಿನಿಂದಲೂ ನಡೆದುಕೊಂಡ ಬಂದದ್ದಾಗಿದೆ.

ದೇವಾಲಯದ ಉತ್ಸವದ ವಿಗ್ರಹಗಳನ್ನು ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪದಲ್ಲಿ ಶಾಶ್ವತವಾಗಿ ಇರಿಸಲಾಗಿರುವುದರಿಂದ, ಜೀಯರ್‌(ಅರ್ಚಕರು ಮತ್ತು ಶ್ರೀಗಳು)ಗಳನ್ನು ಹೊರತುಪಡಿಸಿ ಯಾರಿಗೂ ಪ್ರವೇಶವಿಲ್ಲ. ಇದೇ ಕಾರಣಕ್ಕೆ ಇಳಯರಾಜ ಹೊರಗೆ ನಿಂತು ದರ್ಶನ ಪಡೆದರು ಎಂದು ಅವರು ಹೇಳಿದರು.

ಅಂದಹಾಗೆ ಶ್ರೀವಿಲ್ಲಿಪುತೂರು ದೇವಾಲಯದ ರಾಜಗೋಪುರವು ತಮಿಳುನಾಡು ಸರ್ಕಾರದ ಅಧಿಕೃತ ಮುದ್ರೆಯಲ್ಲಿ ಕಾಣಿಸಿಕೊಂಡಿದೆ. ಅಂತೆಯೇ ಪದ್ಮಭೂಷಣ ಪ್ರಶಸ್ತಿ ವಿಜೇತ ಇಳಯರಾಜ ಕನ್ನಡ, ತೆಲುಗು, ತಮಿಳು, ಚಿತ್ರಗಳಿಗೆ ಸಂಗೀತಾ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com