ನೆಲಮಂಗಲ ದುರಂತ: ಸೂತಕದ ಮನೆಯಲ್ಲಿ ಮತ್ತೊಂದು ಸಾವು; ಮಗ ಸೇರಿ 6 ಮಂದಿ ಸಾವಿನಿಂದ ಆಘಾತ, ಚಂದ್ರಮ್ ತಂದೆ ನಿಧನ!

ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ತೀವ್ರವಾಗಿ ಆಘಾತಗೊಂಡಿದ್ದು 80 ವರ್ಷದ ಈರಗೊಂಡ ಏಗಪ್ಪಗೊಳ ಅವರು ಇಂದು ಸಂಜೆ ಮೃತಪಟ್ಟಿದ್ದಾರೆ.
ನೆಲಮಂಗಲ ದುರಂತ: ಸೂತಕದ ಮನೆಯಲ್ಲಿ ಮತ್ತೊಂದು ಸಾವು; ಮಗ ಸೇರಿ 6 ಮಂದಿ ಸಾವಿನಿಂದ ಆಘಾತ, ಚಂದ್ರಮ್ ತಂದೆ ನಿಧನ!
Updated on: 

ಸಾಂಗ್ಲಿ(ಮಹಾರಾಷ್ಟ್ರ): ಡಿಸೆಂಬರ್‌ 22ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದ ಬಳಿ ವೋಲ್ವೋ ಕಾರಿನ ಮೇಲೆ ಕಂಟೇನರ್ ಬಿದ್ದು ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರು. ಈ ಸಾವುಗಳಿಂದ ತೀವ್ರ ಆಘಾತಗೊಂಡಿದ್ದ ಚಂದ್ರಮ್ ಅವರ ತಂದೆ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ.

ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ತೀವ್ರವಾಗಿ ಆಘಾತಗೊಂಡಿದ್ದು 80 ವರ್ಷದ ಈರಗೊಂಡ ಏಗಪ್ಪಗೊಳ ಅವರು ಇಂದು ಸಂಜೆ ಮೃತಪಟ್ಟಿದ್ದಾರೆ. ಚಂದ್ರಮ್‌ ಅವರ ಪತ್ನಿ ಗೌರಾಬಾಯಿ, ಮಕ್ಕಳಾದ ದೀಕ್ಷಾ, ಧ್ಯಾನ್‌, ತಂಗಿಯಾದ ವಿಜಯಲಕ್ಷ್ಮಿ ಹಾಗೂ ಆಕೆಯ 6 ವರ್ಷದ ಪುತ್ರಿ ಆರ್ಯಾ ಸಾವು ಕಂಟೇನರ್ ಅಡಿ ಸಿಲುಕಿ ಮೃತಪಟ್ಟಿದ್ದರು. ಈ ದಾರುಣ ಘಟನೆಗೆ ಕರ್ನಾಟಕ ಸೇರಿದಂತೆ ದೇಶ ಕಂಬನಿ ಮಿಡಿದಿತ್ತು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ಮೊರಬಗಿಯಲ್ಲಿ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಸಾವಿನ ಬಳಿಕ ಈರಗೊಂಡ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅದಲ್ಲದೆ, ದೀರ್ಘಕಾಲದ ಅನಾರೋಗ್ಯ ಕೂಡ ಅವರನ್ನು ಕುಗ್ಗಿಸಿದ್ದು ಇಂದು ಸಾವಿನ ಕದ ತಟ್ಟಿದ್ದಾರೆ.

ನೆಲಮಂಗಲ ದುರಂತ: ಸೂತಕದ ಮನೆಯಲ್ಲಿ ಮತ್ತೊಂದು ಸಾವು; ಮಗ ಸೇರಿ 6 ಮಂದಿ ಸಾವಿನಿಂದ ಆಘಾತ, ಚಂದ್ರಮ್ ತಂದೆ ನಿಧನ!
ನೆಲಮಂಗಲ ಅಪಘಾತದಲ್ಲಿ ಮೃತಪಟ್ಟ ಚಂದ್ರಮ್ ಕುಟುಂಬಸ್ಥರ ಆಕ್ರಂದನ; ಹುಟ್ಟೂರು ಮಹಾರಾಷ್ಟ್ರದ ಮೊರಬಗಿಯಲ್ಲಿ ಅಂತ್ಯಕ್ರಿಯೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com