2 ವಾರದಲ್ಲಿ ಪಂಜಾಬ್‌ನ 13, ಚಂಡೀಗಢದ 1 ಲೋಕಸಭಾ ಕ್ಷೇತ್ರಕ್ಕೆ ಆಪ್ ಅಭ್ಯರ್ಥಿಗಳ ಘೋಷಣೆ: ಕೇಜ್ರಿವಾಲ್

ತಮ್ಮ ಅಭ್ಯರ್ಥಿಗಳ ಗೆಲುವಿಗೆ ಜನರ ಆಶೀರ್ವಾದ ಕೋರಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳಿಗೆ ಮತ್ತು ಚಂಡೀಗಢದ ಒಂದು ಲೋಕಸಭಾ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಶನಿವಾರ ಹೇಳಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಖನ್ನಾ (ಪಂಜಾಬ್): ತಮ್ಮ ಅಭ್ಯರ್ಥಿಗಳ ಗೆಲುವಿಗೆ ಜನರ ಆಶೀರ್ವಾದ ಕೋರಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳಿಗೆ ಮತ್ತು ಚಂಡೀಗಢದ ಒಂದು ಲೋಕಸಭಾ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಶನಿವಾರ ಹೇಳಿದ್ದಾರೆ.

ಇಂದು ಪಂಜಾಬ್ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರವನ್ನು "ಮನೆ ಬಾಗಿಲಿಗೆ ತಲುಪಿಸುವ" ಸಂಬಂಧ ಆಯೋಜಿಸಲಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಎರಡು ವರ್ಷಗಳ ಹಿಂದೆ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. 117 ಸ್ಥಾನಗಳಲ್ಲಿ ನಮಗೆ 92 ಸ್ಥಾನಗಳನ್ನು ನೀಡುವ ಮೂಲಕ ಪಂಜಾಬ್‌ನಲ್ಲಿ ಇತಿಹಾಸ ನಿರ್ಮಿಸಿದ್ದೀರಿ ಎಂದರು. 

ಇಂದು ನಾನು ಮತ್ತೆ ಕೈ ಜೋಡಿಸಿ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ಎರಡು ತಿಂಗಳ ನಂತರ ಲೋಕಸಭೆ ಚುನಾವಣೆ ಇದೆ. ಪಂಜಾಬ್‌ನ 13 (ಲೋಕಸಭಾ) ಸ್ಥಾನಗಳು ಮತ್ತು ಚಂಡೀಗಢ ಒಂದು ಸ್ಥಾನ ಸೇರಿದಂತೆ 14 ಸ್ಥಾನಗಳನ್ನು ಗೆಲ್ಲಿಸಬೇಕು ಎಂದರು.

"ಮುಂಬರುವ 10-15 ದಿನಗಳಲ್ಲಿ, ಈ ಎಲ್ಲಾ 14 ಸ್ಥಾನಗಳಿಗೆ ಎಎಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತದೆ. ಎರಡು ವರ್ಷಗಳ ಹಿಂದೆ ನೀವು ನಮಗೆ ಆಶೀರ್ವಾದ ಮಾಡಿದ ರೀತಿಯಲ್ಲಿ ಈ ಎಲ್ಲಾ 14 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ನಾನು ವಿನಂತಿಸುತ್ತೇನೆ" ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರವನ್ನು ಶ್ಲಾಘಿಸಿದ ಕೇಜ್ರಿವಾಲ್, ಈ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ "ಬಹಳಷ್ಟು ಕೆಲಸ" ಮಾಡಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com