ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ಭಾಷಣ ತಿರಸ್ಕರಿಸಿ ರಾಷ್ಟ್ರಗೀತೆಗೂ ಮುನ್ನ ಹೊರ ನಡೆದ ರಾಜ್ಯಪಾಲ ರವಿ

ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಹೈಡ್ರಾಮಾವೇ ನಡೆದಿದ್ದು, ರಾಷ್ಟ್ರಗೀತೆಗೂ ಮುನ್ನವೇ ರಾಜ್ಯಪಾಲ ರವಿ ಅವರು ಕಾರ್ಯಕ್ರಮ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ
ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ
Updated on

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಹೈಡ್ರಾಮಾವೇ ನಡೆದಿದ್ದು, ರಾಷ್ಟ್ರಗೀತೆಗೂ ಮುನ್ನವೇ ರಾಜ್ಯಪಾಲ ರವಿ ಅವರು ಕಾರ್ಯಕ್ರಮ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ವಿಧಾನಸಭೆಯ ಅಧಿವೇಶನದ ಆರಂಭಿಕ ಸಾಂಪ್ರದಾಯಿಕ ಭಾಷಣವನ್ನು ಓದಲು ನಿರಾಕರಿಸಿದ್ದು, ಸದನ ಆರಂಭವಾಗುವ ಮುನ್ನ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಬೇಕೆಂದು ಸಲಹೆ ನೀಡಿದ್ದೆ. ಆದರೆ ಅವರು ನಿರ್ಲಕ್ಷಿಸಿದ್ದಾರೆ ಎಂದು ಹೇಳಿ ಸದನದಿಂದ ಹೊರನಡೆದಿದ್ದಾರೆ. 

ರಾಷ್ಟ್ರಗೀತೆಗೆ ಗೌರವ ಕೊಡದ ಕಾರಣ ನನಗೆ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ತಮಿಳುನಾಡು ವಿಧಾನಸಭೆಯಿಂದ ರಾಜ್ಯಪಾಲ ಆರ್​ ಎನ್​ ರವಿ(RN Ravi) ಹೊರನಡೆದಿದ್ದು, ಸದನ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಂತೆ ಎನ್​ ರವಿ ಸಲಹೆ ನೀಡಿದ್ದರು. ಆದರೆ ಸ್ಟಾಲಿನ್ ಸರ್ಕಾರವು ಅದನ್ನು ನಿರಾಕರಿಸಿದೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರು ಸದನದಿಂದ ಹೊರ ನಡೆದಿದ್ದಾರೆ.

ಈಬೆಳವಣಿಗೆ ಬೆನ್ನಲ್ಲೇ ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಭಾಷಣದ ಪ್ರತಿಯನ್ನು ಓದಲು ನಿರಾಕರಿಸಿದ ಆರ್​ಎನ್​ ರವಿ ವಿಧಾನಸಭೆಯಿಂದ ಹೊರಹೋಗಿದ್ದಾರೆ. ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾತನಾಡಿ, ತಮಿಳುನಾಡು ವಿಧಾನಸಭೆಯ ಅಧಿವೇಶನದ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತೆ ರಾಜ್ಯಪಾಲರು ವಿನಂತಿಸಿದ್ದರು.

ಅವರ ಸಲಹೆಯನ್ನು ನಿರ್ಲಕ್ಷಿಸಿದ ಕಾರಣ ಅವರು ಸಾಂಪ್ರದಾಯಿಕ ಭಾಷಣ ಮಾಡಲು ನಿರಾಕರಿಸಿದ್ದು, ಇದು ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಮಸ್ಯೆಯಾಗಿದೆ ಎಂದಿದ್ದಾರೆ. ತಮಿಳುನಾಡು ಸರ್ಕಾರ ತಮಗಾಗಿ ಸಿದ್ಧಪಡಿಸಿರುವ ಭಾಷಣದಲ್ಲಿ ಮಾಡಿರುವ ಕೆಲವು ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾ ಭಾಷಣ ಮುಗಿಸಿದರು. ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರು ಭಾಷಣ ಮುಗಿಸಿ ಹೊರ ನಡೆದಿದ್ದಾರೆ.

ರಾಜಭವನ ಸ್ಪಷ್ಟನೆ
ಸದನದಲ್ಲಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಭವನ ಸ್ಪಷ್ಟನೆ ನೀಡಿದ್ದು,“ಸ್ಪೀಕರ್ ಭಾಷಣವನ್ನು ಮುಕ್ತಾಯಗೊಳಿಸಿದಾಗ, ರಾಜ್ಯಪಾಲರು ನಿಗದಿಯಂತೆ ರಾಷ್ಟ್ರಗೀತೆಗೆ ಮುಂದಾದರು. ಈ ವೇಳೆ ಸದನದಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಲಾಗಿದೆ. ಅವರನ್ನು ನಾಥುರಾಮ್ ಗೋಡ್ಸೆ ಅನುಯಾಯಿ ಎಂದು ಕರೆದರು. ಹೀಗಾಗಿ ರಾಜ್ಯಪಾಲ ರವಿ ಸದನದಿಂದ ಹೊರ ನಡೆದರು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com