ಬಿಹಾರ: ವಿಗ್ರಹ ವಿಸರ್ಜನೆ ವೇಳೆ ಘರ್ಷಣೆ, ಕಲ್ಲು ತೂರಾಟ

ಸರಸ್ವತಿ ದೇವಿ ವಿಗ್ರಹ ವಿಸರ್ಜಿಸಲು ಹೊರಟಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ಭಾಗಲ್‌ಪುರದ ಲೋದಿಪುರದಲ್ಲಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘರ್ಷಣೆ ನಡೆದ ಸ್ಥಳದ ಚಿತ್ರ
ಘರ್ಷಣೆ ನಡೆದ ಸ್ಥಳದ ಚಿತ್ರANI

ಬಿಹಾರ: ಸರಸ್ವತಿ ದೇವಿ ವಿಗ್ರಹ ವಿಸರ್ಜಿಸಲು ಹೊರಟಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ಭಾಗಲ್‌ಪುರದ ಲೋದಿಪುರದಲ್ಲಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಪೊಲೀಸರು ಮತ್ತು ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.

"ಲೋದಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವಿಗ್ರಹ ವಿಸರ್ಜನೆ ಸಮಯದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಪರಿಸ್ಥಿತಿಯನ್ನು ಕಾಪಾಡಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಭಾಗಲ್ಪುರ ಎಸ್ಪಿ ರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘರ್ಷಣೆ ನಡೆದ ಸ್ಥಳದ ಚಿತ್ರ
ಜಾರ್ಖಂಡ್: ದುರ್ಗಾ ಮಾತೆಯ ವಿಗ್ರಹ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಉರುಳಿ ಇಬ್ಬರು ಸಾವು, 4 ಮಂದಿಗೆ ಗಾಯ

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ದರ್ಭಾಂಗಾದ ಬಹೇರಾ ಮಾರುಕಟ್ಟೆಯಲ್ಲಿ ಸರಸ್ವತಿ ದೇವಿಯ ವಿಗ್ರಹ ವಿಸರ್ಜಿಸುವ ಮಾರ್ಗದಲ್ಲಿ ಕಲ್ಲು ತೂರಾಟ ನಡೆಸಿದ ನಂತರ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಕೂಡಲೇ ದರ್ಭಾಂಗ ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್‌ಎಸ್‌ಪಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com