ಶಂಭು ಗಡಿಯಲ್ಲಿ ತೀವ್ರಗೊಂಡ 'ದೆಹಲಿ ಚಲೋ' ಹೋರಾಟ: ಇಂದು ರೈತರು-ಸರ್ಕಾರದ ನಡುವೆ 4ನೇ ಸುತ್ತಿನ ಮಾತುಕತೆ

ಪಂಜಾಬ್​ ಮತ್ತು ಹರಿಯಾಣ ರೈತರು ನಡೆಸುತ್ತಿರುವ 'ದೆಹಲಿಚಲೋ' ಹೋರಾಟ ದಿನಕಳೆಯುತ್ತಿದ್ದಂತೆ ತೀವ್ರತೆ ಪಡೆದುಕೊಳ್ಳುತ್ತಿದೆ. ಶಂಭು ಗಡಿಯಲ್ಲಿ ನಿಹಾಂಗ್​ ಸಿಖ್ಖರು ಕತ್ತಿ ಝಳಪಿಸುತ್ತಿರುವ ಮತ್ತು ಖಲಿಸ್ತಾನಿ ಉಗ್ರ ಭಿಂದ್ರನ್​ ವಾಲೆ ಚಿತ್ರ ಹೋರಾಟದಲ್ಲಿ ಕಂಡುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹರಿಯಾಣ: ಪಂಜಾಬ್​ ಮತ್ತು ಹರಿಯಾಣ ರೈತರು ನಡೆಸುತ್ತಿರುವ 'ದೆಹಲಿಚಲೋ' ಹೋರಾಟ ದಿನಕಳೆಯುತ್ತಿದ್ದಂತೆ ತೀವ್ರತೆ ಪಡೆದುಕೊಳ್ಳುತ್ತಿದೆ. ಶಂಭು ಗಡಿಯಲ್ಲಿ ನಿಹಾಂಗ್​ ಸಿಖ್ಖರು ಕತ್ತಿ ಝಳಪಿಸುತ್ತಿರುವ ಮತ್ತು ಖಲಿಸ್ತಾನಿ ಉಗ್ರ ಭಿಂದ್ರನ್​ ವಾಲೆ ಚಿತ್ರ ಹೋರಾಟದಲ್ಲಿ ಕಂಡುಬಂದಿದೆ.

ಇದು 2021ರ ಹೋರಾಟದಲ್ಲಿ ನಡೆದ ಹಿಂಸಾಚಾರವನ್ನು ಮರುಕಳಿಸುವ ಸೂಚನೆ ನೀಡಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಪಂಜಾಬ್​ ಮತ್ತು ಹರಿಯಾಣದ ಹಲವು ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಕೆಲವರು ಬಿಲ್ಲು ಬಾಣ ಹಿಡಿದು ತಿರುಗಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಸಂಘರ್ಷ ವಾತಾವರಣ ಉಂಟಾಗಿದೆ.

ಸಂಗ್ರಹ ಚಿತ್ರ
ಕೇಂದ್ರ ಸರ್ಕಾರ ನಮ್ಮ ವಿರುದ್ಧ ರಬ್ಬರ್ ಗುಂಡು, ಹೊಗೆ ಶೆಲ್ ಗಳನ್ನು ಬಳಸುತ್ತಿದೆ: ರೈತರು

ಒಂದೆಡೆ ರೈತ ನಾಯಕರು ಶಾಂತಿಯುತ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದರೆ, ಪ್ರತಿಭಟನಾಕಾರರು ತೀವ್ರತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಈ ನಡುವೆ ರೈತ ಹೋರಾಟ ಆರಂಭವಾದ ದಿನದಿಂದ ಅಮಾನತಿನಲ್ಲಿರುವ ಮೊಬೈಲ್​ ಇಂಟರ್​ನೆಟ್​, ಸಂದೇಶ ರವಾನೆ ಸೇವೆಯನ್ನು ಫೆಬ್ರವರಿ 19ರ ವರೆಗೆ ನಿರ್ಬಂಧಿಸಿ ವಿಸ್ತರಿಸಲಾಗಿದೆ. ಈ ಹಿಂದೆ ಫೆಬ್ರವರಿ 13 ರಿಂದ ಫೆಬ್ರವರಿ 15 ರವರೆಗೆ ಮೊಬೈಲ್ ಇಂಟರ್​ನೆಟ್​ ನಿರ್ಬಂಧ ಹೇರಲಾಗಿತ್ತು.

ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕಾ ಕ್ರಮ, ಯಾವುದೇ ಹಿಂಸಾಚಾರ ಮತ್ತು ಸುಳ್ಳು ಮಾಹಿತಿ ಹಬ್ಬದಂತೆ ತಡೆಯಲು ಅಂತರ್ಜಾಲ ಸೇವೆಯನ್ನು ಹರಿಯಾಣದ 7 ಜಿಲ್ಲೆಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.

ಸಂಗ್ರಹ ಚಿತ್ರ
ಲಾರಿ ಚಾಲಕರ ಮುಷ್ಕರ: ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರುಪೇರು, ಮತ್ತೆ ಸಂಕಷ್ಟದಲ್ಲಿ ರೈತರು!

ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಧ್ವನಿ ಕರೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಈ ನಡುವೆ ಪ್ರತಿಭಟನೆ ಹತ್ತಿಕ್ಕಲು ಸರ್ಕಾರದ ನಡೆಸುತ್ತಿರುವ ಯತ್ನಗಳು ಮುಂದುವರೆದಿದ್ದು, ಇಂದು ಸಂಜೆ 5 ಗಂಟೆಗೆ ರೈತ ಸಂಘಟನೆಗಳೊಂದಿಗೆ 4ನೇ ಸುತ್ತಿನ ಸಭೆ ನಿಗದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com