ಕಾಲುವೆಗೆ ಬಿದ್ದ ಮರಿಗಾಗಿ ತಾಯಿ ಆನೆ ಹರಸಾಹಸ; ನೆರವಿಗೆ ಧಾವಿಸಿದ ಅರಣ್ಯ ಸಿಬ್ಬಂದಿಗೆ ಆನೆ ಮಾಡಿದ್ದೇನು?

ಆಹಾರ ಅರಸಿ ಬರುತ್ತಿದ್ದ ವೇಳೆ ಮರಿ ಆನೆಯೊಂದು ಆಯತಪ್ಪಿ ಕಾಲುವೆಗೆ ಬಿದ್ದಿದ್ದು, ಅದನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿಗೆ ತಾಯಿ ಆನೆ ತೋರಿದ ಭಾವುಕ ನಮನ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ತಾಯಿ ಆನೆಯಿಂದ ಭಾವುಕ ನಮನ
ತಾಯಿ ಆನೆಯಿಂದ ಭಾವುಕ ನಮನ
Updated on

ಕೊಯಮತ್ತೂರು: ಆಹಾರ ಅರಸಿ ಬರುತ್ತಿದ್ದ ವೇಳೆ ಮರಿ ಆನೆಯೊಂದು ಆಯತಪ್ಪಿ ಕಾಲುವೆಗೆ ಬಿದ್ದಿದ್ದು, ಅದನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿಗೆ ತಾಯಿ ಆನೆ ತೋರಿದ ಭಾವುಕ ನಮನ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಕಾಲುವೆಯೊಂದಕ್ಕೆ ಬಿದ್ದಿದ್ದ ಮರಿ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ರೀತಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಯಿ ಆನೆಯಿಂದ ಭಾವುಕ ನಮನ
'ನಡೆದಾಡುವ ಕಾಡಿನ ನಿಘಂಟು' ಖ್ಯಾತಿಯ ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪ ನಿಧನ

ಮರಿ ಆನೆಯೊಂದು ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದಿತ್ತು. ತಾಯಿ ಆನೆ ತನ್ನ ಮರಿಯನ್ನು ರಕ್ಷಿಸಲು ತೀವ್ರವಾಗಿ ಒದ್ದಾಡಿತು. ಆದರೆ ಬಲವಾದ ನೀರಿನ ಹರಿವಿನಿಂದಾಗಿ ಇದು ಸಾಧ್ಯವಾಗಲಿಲ್ಲ. ನೀರಿನ ಪ್ರವಾಹವನ್ನು ತಡೆದುಕೊಳ್ಳಲು ಮತ್ತು ಅಲ್ಲಿಂದ ಜಿಗಿಯಲು ತಾನು ತುಂಬ ಚಿಕ್ಕದಾಗಿರುವ ಕಾರಣ ಮರಿ ಆನೆಗೂ ಸಾಧ್ಯವಾಗಲಿಲ್ಲ.

ಈ ನಡುವೆ ಈ ವಿಚಾರ ಅರಣ್ಯಾಧಿಕಾರಿಗಳಿಗೆ ತಿಳಿದಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಜೆಸಿಬಿ ನೆರವಿನಿಂದ ಮರಿ ಆನೆಯನ್ನು ಜಾಗರೂಕತೆಯಿಂದ ಕಾಲುವೆಯಿಂದ ರಕ್ಷಿಸಿದ್ದಾರೆ. ಅಲ್ಲದೆ ಮರಿ ಆನೆಯನ್ನು ತಾಯಿ ಜತೆಗೆ ಮತ್ತೆ ಒಂದುಗೂಡಿಸಿದ್ದಾರೆ.

ಈ ವಿಡಿಯೋವನ್ನು ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡಿದ್ದು, 'ಮರಿ ಆನೆ ಸುರಕ್ಷಿತವಾಗಿ ಮೇಲೆ ಬಂದಾಗ ತಾಯಿ ಅನೆ ಭಾವುಕವಾಗಿಯಿತು. ಸೊಂಡಿಲನ್ನು ಮೇಲಕ್ಕೆತ್ತಿ ಕೃತಜ್ಞತೆ ಸೂಚಿಸಿತು. “ಬಹಳ ಚಿಕ್ಕ ಮರಿ ಆನೆಯನ್ನು ರಕ್ಷಿಸಿದ ಬಳಿಕ ತಾಯಿ ಆನೆ ನಮ್ಮ ಅರಣ್ಯ ಅಧಿಕಾರಿಗಳಿಗೆ ಧನ್ಯವಾದ ಹೇಳಲು ತನ್ನ ಸೊಂಡಿಲನ್ನು ಎತ್ತುವುದನ್ನು ನೋಡಿ ಹೃದಯ ತುಂಬಿ ಬಂತುʼʼ ಎಂದು ಹೇಳಿದ್ದಾರೆ.

“ಕಾರ್ಯಾಚರಣೆಯು ಅಪಾಯಗಳಿಂದ ತುಂಬಿದ್ದರೂ ನಮ್ಮ ಅರಣ್ಯಾಧಿಕಾರಿಗಳ ತಂಡ ಇದರಿಂದ ವಿಚಲಿತವಾಗಲಿಲ್ಲ. ಯಶಸ್ವಿ ಪುನರ್ಮಿಲನಕ್ಕೆ ಕಾರಣವಾದ ಅವರ ಅಸಾಧಾರಣ ಪ್ರಯತ್ನಗಳಿಗೆ ಅಭಿನಂದನೆಗಳು. ಎಫ್.ಡಿ. ರಾಮಸುಬ್ರಹ್ಮಣ್ಯಂ, ಡಿಡಿ ಬಿ.ತೇಜ, ಎಫ್ಆರ್‌ಒ ಪುಗಲೆಂತಿ, ಫಾರೆಸ್ಟರ್ ತಿಲಕರ್, ಅರಣ್ಯ ರಕ್ಷಕ ಸರವಣನ್, ಅರಣ್ಯ ರಕ್ಷಕ ವೆಲ್ಲಿಂಗ್ರಿ, ಅರಣ್ಯ ವೀಕ್ಷಕರಾದ ಮುರಳಿ, ರಾಸು, ಎಪಿಡಬ್ಲ್ಯುಗಳಾದ ಬಾಲು, ನಾಗರಾಜ್, ಮಹೇಶ್ ಮತ್ತು ಚಿನ್ನನಾಥನ್ ಮತ್ತಿತರರು ಅದ್ಭುತ ಕೆಲಸ ಮಾಡಿದ್ದಾರೆʼʼ ಎಂದು ಸುಪ್ರಿಯಾ ಸಾಹು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com