ಬಾಲಿವುಡ್ ನಟ ಅನುಪಮ್ ಖೇರ್ ತಾಯಿಯಿಂದ ಪ್ರಧಾನಿ ಮೋದಿಗೆ ರುದ್ರಾಕ್ಷಿ ಮಾಲೆ ಗಿಫ್ಟ್!

ಪ್ರಧಾನಿ ಮೋದಿ ಅವರ ರಕ್ಷಣೆಗಾಗಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ರುದ್ರಾಕ್ಷಿ ಮಾಲೆಯನ್ನು ಗಿಫ್ಟ್  ಆಗಿ ನೀಡಿದ್ದಾರೆ.
ರುದ್ರಾಕ್ಷಿ ಮಾಲೆ ಸ್ವೀಕರಿಸುತ್ತಿರುವ ಪ್ರಧಾನಿ ಮೋದಿ
ರುದ್ರಾಕ್ಷಿ ಮಾಲೆ ಸ್ವೀಕರಿಸುತ್ತಿರುವ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರ ರಕ್ಷಣೆಗಾಗಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ರುದ್ರಾಕ್ಷಿ ಮಾಲೆಯನ್ನು ಗಿಫ್ಟ್  ಆಗಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಹಂಚಿಕೊಂಡಿರುವ ಅನುಪಮ್ ಖೇರ್, ನಿಮ್ಮನ್ನು ಭೇಟಿಯಾದದ್ದು ತುಂಬಾ ಸಂತಸವಾಗಿದೆ. ನೀವು ಸ್ಫೂರ್ತಿಯಾಗಿದ್ದೀರಿ. ನಾಗರಿಕರಿಗಾಗಿ ಹಗಲಿರುಳು ಶ್ರಮಿಸುತ್ತೀರಿ. ನಿಮ್ಮ ರಕ್ಷಣೆಗಾಗಿ ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ಸ್ವೀಕರಿಸಿದ್ದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಜೈ ಹಿಂದ್" ಎಂದು ಅವರು ಬರೆದುಕೊಂಡಿದ್ದಾರೆ. 2022 ಏಪ್ರಿಲ್ 23 ರಂದು ಮಾಡಿದ್ದ ಹಳೆಯ ಫೋಸ್ಟ್ ನ್ನು ಅನುಪಮ್ ಖೇರ್ ಇಂದು ಮತ್ತೆ ಫೋಸ್ಟ್ ಮಾಡಿದ್ದಾರೆ.

ಈ ಫೋಟೋ ಕಾಣಿಸಿಕೊಂಡ ತಕ್ಷಣ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಭಿಮಾನಿಯೊಬ್ಬರು ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡಿದ್ದಾರೆ. 

ಇದಕ್ಕೂ ಮುನ್ನಾ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದು, ಈ ಕ್ಷಣ ನೆನಪಿನಲ್ಲಿ ಉಳಿಯುವಂತಹದ್ದು, ರಾಮನಿಗೆ ನಮಸ್ಕಾರ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಭವ್ಯ ರಾಮ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ತಾವು ಕಣ್ತುಂಬಿಕೊಂಡ ಐತಿಹಾಸಿಕ ಕ್ಷಣವನ್ನು ಸೆರೆಹಿಡಿದು ತಮ್ಮ ಆಧ್ಯಾತ್ಮಿಕ ಅನುಭವದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com