ThinkEdu: ಭಾರತ ಯಾವಾಗಲೂ ಜಾತ್ಯತೀತ ರಾಷ್ಟ್ರ; ಭಾರತ ವಿರುದ್ಧ ಇಂಡಿಯಾವನ್ನು ಪ್ರತಿಸ್ಪರ್ಧಿಯಾಗಿಸುವ ಅಗತ್ಯವಿಲ್ಲ- ರಾಮ್ ಮಾಧವ್

ನಮ್ಮ ರಾಷ್ಟ್ರವನ್ನು ಇಂಡಿಯಾ, ಭಾರತ ಎಂದು ಗುರುತಿಸಬಹುದು. ಭಾರತೀಯ ಸಂದರ್ಭದಲ್ಲಿ ನಿಜವಾದ ಸೆಕ್ಯುಲರಿಸಂ, ಸಮಾನ ಗೌರವ, ಯಾವುದೇ ತಾರತಮ್ಯ ಮತ್ತು ಧರ್ಮದ ಆಧಾರದ ಮೇಲೆ ನಡೆದುಕೊಳ್ಳದಿರುವುದನ್ನು ಒಳಗೊಂಡಿರುತ್ತದೆ ಎಂದು ಲೇಖಕ ಮತ್ತು ಚಿಂತಕ ರಾಮ್ ಮಾಧವ್ ಹೇಳಿದ್ದಾರೆ.
ಥಿಂಕ್ ಎಡುವಿನಲ್ಲಿ ರಾಮ್ ಮಾಧವ್
ಥಿಂಕ್ ಎಡುವಿನಲ್ಲಿ ರಾಮ್ ಮಾಧವ್
Updated on

ಚೆನ್ನೈ: ನಮ್ಮ ರಾಷ್ಟ್ರವನ್ನು ಇಂಡಿಯಾ, ಭಾರತ ಎಂದು ಗುರುತಿಸಬಹುದು. ಭಾರತೀಯ ಸಂದರ್ಭದಲ್ಲಿ ನಿಜವಾದ ಸೆಕ್ಯುಲರಿಸಂ, ಸಮಾನ ಗೌರವ, ಯಾವುದೇ ತಾರತಮ್ಯ ಮತ್ತು ಧರ್ಮದ ಆಧಾರದ ಮೇಲೆ ನಡೆದುಕೊಳ್ಳದಿರುವುದನ್ನು ಒಳಗೊಂಡಿರುತ್ತದೆ ಎಂದು ಲೇಖಕ ಮತ್ತು ಚಿಂತಕ ರಾಮ್ ಮಾಧವ್ ಹೇಳಿದ್ದಾರೆ.

ಬುಧವಾರ ಚೆನ್ನೈನಲ್ಲಿ SASTRA ವಿಶ್ವವಿದ್ಯಾಲಯ ಪ್ರಸ್ತುತಪಡಿಸಿದ 13ನೇ ThinkEdu ಕಾನ್ಕ್ಲೇವ್ ನಲ್ಲಿ, ಇತ್ತೀಚಿಗೆ ಜಿ-20 ಶೃಂಗಸಭೆ ಹಾಗೂ ಚುನಾವಣೆಗೂ ಮುನ್ನಾ ಮುನ್ನೆಲೆಗೆ ಬಂದ 'ಭಾರತ' ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಧವ್, ಇದು ರಾಜಕೀಯ ಅನುಕೂಲಕ್ಕಾಗಿ ನಡೆಸಲ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

"ನಮ್ಮ ರಾಷ್ಟ್ರವಾದ ಭಾರತದ ಪ್ರಮುಖ ಗುರುತನ್ನು ಜಿ-20ಯಲ್ಲಿ ಎತ್ತಿ ಹಿಡಿಯುವ ನಮ್ಮ ನಿರ್ಧಾರವು ಒಂದು ಕಾರ್ಯತಂತ್ರದ ಕ್ರಮವಾಗಿದೆ. ವಿಶ್ವದ ಆರ್ಥಿಕತೆಯ ಶೇ.80 ರಷ್ಟು  ಪ್ರತಿನಿಧಿಸುವ ನಾಯಕರು ಅಲ್ಲಿ ಸೇರಿದ್ದರಿಂದ ನಮ್ಮ ನಾಗರಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಒತ್ತಿ ಹೇಳಲು ಇದು ಅತ್ಯುತ್ತಮ ಅವಕಾಶವನ್ನು ಒದಗಿಸಿತು. G20  ಸಾಹಿತ್ಯದಲ್ಲಿ, 'ಇಂಡಿಯಾ ಮತ್ತು 'ಭಾರತ' ಪದಗಳನ್ನು ಪರಸ್ಪರ ಬದಲಿಯಾಗಿ ಬಳಸಲಾಗಿದೆ, ನಮ್ಮ ರಾಷ್ಟ್ರವನ್ನು ಭಾರತ ಅಥವಾ ಭಾರತಿಯ ಎಂದು ಪರಿಗಣಿಸುವುದರೊಂದಿಗೆ  ಪರಂಪರೆಯಲ್ಲಿ ನಮ್ಮ ಹೆಮ್ಮೆಯನ್ನು ಪ್ರದರ್ಶಿಸಲಾಗಿದೆ ಎಂದರು. 

ಭಾರತ ಮತ್ತು ಇಂಡಿಯಾ ಹೆಸರುಗಳನ್ನು ಪರ್ಯಾಯವಾಗಿ ಬಳಸಬಹುದು ಎಂದು ಅವರು ಪ್ರತಿಪಾದಿಸಿದರು. ಭಾರತದ ವಿರುದ್ಧ ಇಂಡಿಯಾವನ್ನು ಪ್ರತಿಸ್ಪರ್ಧಿಯಾಗಿಸುವ ಅಗತ್ಯವಿಲ್ಲ, ಏಕೆಂದರೆ ಭಾರತ, ಹಿಂದೂ ಧರ್ಮ ಮತ್ತು ನಮ್ಮ ಅಸ್ತಿತ್ವಕ್ಕೆ ಸಮಾನಾರ್ಥಕವಾಗಿದೆ. ಈ ಪದಗಳಿಂದ ದೇಶವನ್ನು ವಿವಿಧ ಹಂತಗಳಲ್ಲಿ ಗುರುತಿಸಲಾಗಿದೆ ಮತ್ತು ನಮ್ಮ ರಾಷ್ಟ್ರವನ್ನು ಏನೆಂದು ಕರೆಯಬೇಕು ಎಂಬುದರ ಕುರಿತು ಐತಿಹಾಸಿಕ ಚರ್ಚೆ ನಡೆಯಿತು. ಕರಡು ರಚನೆ ಸಮಿತಿಯು ಇಂಡಿಯಾ ಪದವನ್ನು ಪ್ರಸ್ತಾಪಿಸಿದೆ ಆದರೆ 'ಭಾರತ' ನಮ್ಮ ಸಾಮೂಹಿಕ ಗುರುತನ್ನು ವ್ಯಾಖ್ಯಾನಿಸುವಲ್ಲಿ ಮಹತ್ವವನ್ನು ಹೊಂದಿದೆ ಎಂದು ಅವರು ಹೇಳಿದರು. 

ಕಾನೂನುಗಳ ರಚನೆ ಹಾಗೂ  ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ಗ್ರಹಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಧವ್, ಭಾರತವು ಯಾವಾಗಲೂ ಜಾತ್ಯತೀತವಾಗಿದೆ ಎಂದು ಪ್ರತಿಪಾದಿಸಿದರು. ಜಾತ್ಯತೀತತೆಗೆ ಸಾಂವಿಧಾನಿಕ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಭಾರತೀಯ ಸಂಪ್ರದಾಯದಲ್ಲಿ ಎಲ್ಲರಿಗೂ ಸಮಾನ ಗೌರವವನ್ನು ನೀಡಬೇಕು ಎಂದು ತಿಳಿಸಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com