ಹರಿಯಾಣದಲ್ಲಿ ಬಸ್​ ಪಲ್ಟಿ: 40 ಮಕ್ಕಳಿಗೆ ಗಂಭೀರ ಗಾಯ

ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಪಿಂಜೋರ್ ಆಸ್ಪತ್ರೆಗೆ ಮತ್ತು ಪಂಚಕುಲದ ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.

ಚಂಡೀಗಢ: ಹರಿಯಾಣದ ಪಂಚಕುಲದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಪಂಚಕುಲದ ಪಿಂಜೋರ್ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಹರಿಯಾಣ ರೋಡ್‌ವೇಸ್ ಬಸ್ ಪಲ್ಟಿಯಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.
ಅಮರನಾಥ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಅಪಘಾತ: ಇಬ್ಬರು ಭಕ್ತರಿಗೆ ಗಾಯ

ಅಪಘಾತದಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಪಿಂಜೋರ್ ಆಸ್ಪತ್ರೆಗೆ ಮತ್ತು ಪಂಚಕುಲದ ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಅಪಘಾತಕ್ಕೆ ಬಸ್ ಚಾಲಕನ ಅತಿ ವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಅಂದರೆ ಓವರ್‌ಲೋಡ್ ಮತ್ತು ರಸ್ತೆಯ ಕಳಪೆ ಸ್ಥಿತಿ ಕೂಡ ಅಪಘಾತಕ್ಕೆ ಹೆಚ್ಚುವರಿ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com