8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಕೊಲೆ ಮಾಡಿ ಕಾಲುವೆಗೆ ಎಸೆದಿದ್ದ 3 ಅಪ್ರಾಪ್ತ ಬಾಲಕರ ಬಂಧನ

ಬಾಲಕಿಯು ತನ್ನ ಮನೆಯಿಂದ ಸ್ನೇಹಿತರೊಡಗೂಡಿ ಆಟವಾಡಲು ಹೋಗಿದ್ದಳು. ಆದರೆ ಸಂಜೆಯಾದರೂ ಮಗಳು ಮನೆಗೆ ಬಾರದ್ದನ್ನು ಗಮನಿಸಿದ ಪೋಷಕರು ಗಾಬರಿಯಾಗಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
 ಬಾಲಕಿಯ ಶವ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿರುವುದು.
ಬಾಲಕಿಯ ಶವ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿರುವುದು.

ಕರ್ನೂಲ್: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಮೂವರು ಅಪ್ರಾಪ್ತರ ಬಾಲಕರು, ನಂತರ ಆಕೆಯನ್ನು ಹತ್ಯೆ ಮಾಡಿ ಮೃತದೇಹವನ್ನು ಕಾಲುವೆಗೆ ಎಸೆದಿರುವ ಘಟನೆಯೊಂದು ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್ಚುಮರ್ರಿ ಗ್ರಾಮದಲ್ಲಿ ನಡೆದಿದೆ.

ಬಾಲಕಿಯು ತನ್ನ ಮನೆಯಿಂದ ಸ್ನೇಹಿತರೊಡಗೂಡಿ ಆಟವಾಡಲು ಹೋಗಿದ್ದಳು. ಆದರೆ ಸಂಜೆಯಾದರೂ ಮಗಳು ಮನೆಗೆ ಬಾರದ್ದನ್ನು ಗಮನಿಸಿದ ಪೋಷಕರು ಗಾಬರಿಯಾಗಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದರಂತೆ ಪೊಲೀಸರು ಮೂವರು ಬಾಲಕರನ್ನು ವಶಪಡಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೂವರು ಸೇರಿ ಬಾಲಕಿ ಮೇಲೆ ಅತ್ಯಾಚಾರ ವೆಸಗಿ, ಬಳಿಕ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಮೃತದೇಹವನ್ನು ರಾಜಕಾಲುವೆಗೆ ಎಸೆದಿರೋದಾಗಿ ಹೇಳಿದ್ದಾರೆ.

ಮಾಹಿತಿಯಂತೆ, ಮೂವರು ಬಾಲಕರು 3ನೇ ತರಗತಿ ಬಾಲಕಿಯನ್ನು ಆಟವಾಡಲು ಬರುವಂತೆ ಒತ್ತಾಯಿಸಿದ್ದಾರೆ. ಬಳಿಕ ಆಕೆಯ ಬಾಯಿ ಮುಚ್ಚಿಸಿ ಲೈಂಗಿಕದೌರ್ಜನ್ಯ ನಡೆಸಿದ್ದಾರೆ. ಬಳಿಕ ಬಾಲಕಿಯ ಪೋಷಕರಿಗೆ ಹೆದರಿ ಆಕೆಯನ್ನು ಕೊಲೆ ಮಾಡಿದ್ದಾರೆ. ಯಾರಿಗೆ ತಿಳಿಯಬಾರದೆಂದು ರಾಜಕಾಲುವೆಗೆ ಎಸೆದಿದ್ದಾರೆಂದು ತಿಳಿದುಬಂದಿದೆ,

 ಬಾಲಕಿಯ ಶವ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿರುವುದು.
ದೆವ್ವ ಬಿಡಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಂತ್ರವಾದಿ ಬಂಧನ; ಸಹೋದರನಿಂದಲೂ ಲೈಂಗಿಕ ದೌರ್ಜನ್ಯ

ಬಾಲಕಿಯ ಶವವನ್ನು ರಾಜಕಾಲುವೆಗೆ ಎಸೆದ ಕಾರಣ ಮತ್ತು ಮಳೆಯಿಂದಾಗಿ ನೀರು ರಭಸವಾಗಿ ಹರಿಯುವ ಕಾರಣ ಮೃತದೇಹ ಕೊಚ್ಚಿ ಹೋಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ಈ ನಡುವೆ ಹತ್ಯೆಯಾದ ಸ್ಥಳದಲ್ಲಿ ಮಾಟಮಂತ್ರ ಮಾಡುವ ವಸ್ತುಗಳೂ ಕೂಡ ಪತ್ತೆಯಾಗಿದ್ದು, ಮಾಟಮಂತ್ರ ನಡೆಸಿರುವ ಆಯಾಮದಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಬೆನ್ನಲ್ಲೇ ನಂದ್ಯಾಲ ಸಂಸದ ಡಾ.ಬೈರೆಡ್ಡಿ ಶಬರಿ ಬುಧವಾರ ಸ್ಥಳಕ್ಕಾಗಮಿಸಿ ಆರೋಪಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಂದಿಕೋಟ್ಕೂರು ಶಾಸಕ ಜಿ.ಜಯಸೂರ್ಯ ಕೂಡ ಉಪಸ್ಥಿತರಿದ್ದರು.

ಬಾಲಕಿಯ ಮೃತದೇಹ ಪತ್ತೆಯಾಗುವವರೆಗೂ ಶೋಧ ಕಾರ್ಯ ಮುಂದುವರೆಸುವುದಾಗಿ ಎಸ್ಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com