ಚೀನಾದಿಂದ ಪಾಕಿಸ್ತಾನಕ್ಕೆ ನಿಷೇಧಿತ ರಾಸಾಯನಿಕ ಸಾಗಿಸುತ್ತಿದ್ದ ಶಿಪ್ ಮೆಂಟ್ ತಮಿಳುನಾಡು ಬಂದರಿನಲ್ಲಿ ಜಪ್ತಿ

ಪಾಕಿಸ್ತಾನವು ತನ್ನ 'ಸ್ನೇಹಿತ' ಚೀನಾದ ಸಹಾಯದಿಂದ ಆಕ್ರಮಣಕಾರಿ ರಾಸಾಯನಿಕ ಮತ್ತು ಜೈವಿಕ ಯುದ್ಧಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಆರೋಪಿಸಲಾಗಿದೆ.
ಶಿಪ್ ಮೆಂಟ್ ಜಪ್ತಿ
ಶಿಪ್ ಮೆಂಟ್ ಜಪ್ತಿ

ಚೆನ್ನೈ: ತಮಿಳುನಾಡಿನ ಬಂದರಿನಲ್ಲಿ ಚೀನಾದಿಂದ ಅಶ್ರುವಾಯು ಮತ್ತು ಗಲಭೆ ನಿಯಂತ್ರಣ ಏಜೆಂಟ್‌ಗಳಿಗೆ ಬಳಸುವ ಅಂತರರಾಷ್ಟ್ರೀಯವಾಗಿ ನಿಷೇಧಿತ ರಾಸಾಯನಿಕಗಳನ್ನು ಪಾಕಿಸ್ತಾನಕ್ಕೆ ಸಾಗಿಸುತ್ತಿದ್ದ ಶಿಪ್ ಮೆಂಟ್ ಅನ್ನು ಭದ್ರತಾ ಸಂಸ್ಥೆಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಪಾಕಿಸ್ತಾನವು ತನ್ನ 'ಸ್ನೇಹಿತ' ಚೀನಾದ ಸಹಾಯದಿಂದ ಆಕ್ರಮಣಕಾರಿ ರಾಸಾಯನಿಕ ಮತ್ತು ಜೈವಿಕ ಯುದ್ಧಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಆರೋಪಿಸಲಾಗಿದೆ.

ಚೀನಾದ ಕಂಪನಿ, ಚೆಂಗ್ಡು ಶಿಚೆನ್ ಟ್ರೇಡಿಂಗ್ ಕಂ. ಲಿಮಿಟೆಡ್, ರಾವಲ್ಪಿಂಡಿ ಮೂಲದ ರಕ್ಷಣಾ ಪೂರೈಕೆದಾರರಾದ ರೊಹೇಲ್ ಎಂಟರ್‌ಪ್ರೈಸಸ್‌ಗೆ "ಆರ್ಥೋ-ಕ್ಲೋರೋ ಬೆಂಜೈಲಿಡೆನ್ ಮಲೋನೋನಿಟ್ರಿಲ್" ಅನ್ನು ರವಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಪ್ ಮೆಂಟ್ ಜಪ್ತಿ
ಮುಂಬೈ ಕ್ರೈಂ ಬ್ರಾಂಚ್ ನಿಂದ 12 ಕೋಟಿ ರೂ. ಮೌಲ್ಯದ ನಿಷೇಧಿತ ಗುಟ್ಖಾ, ಪಾನ್ ಮಸಾಲ ಜಪ್ತಿ; 7 ಮಂದಿ ಬಂಧನ

ಸುಮಾರು 2560 ಕೆಜಿ ತೂಕದ ಶಿಪ್ ಮೆಂಟ್ ನಲ್ಲಿ 25 ಕೆಜಿಯ 103 ಡ್ರಮ್‌ಗಳಲ್ಲಿ ನಿಷೇಧಿತ ರಾಸಾಯನಿಕ ಸಂಗ್ರಹಿಸಲಾಗಿದೆ ಮತ್ತು 2024 ರ ಏಪ್ರಿಲ್ 18 ರಂದು ಚೀನಾದ ಶಾಂಘೈ ಬಂದರಿನಲ್ಲಿ ಲೋಡ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕರಾಚಿಗೆ ತೆರಳುತ್ತಿದ್ದ ಈ ಹಡಗು ಮೇ 08, 2024 ರಂದು ಕಟ್ಟುಪಲ್ಲಿ ಬಂದರನ್ನು(ತಮಿಳುನಾಡು) ತಲುಪಿತು.

ಭಾರತದ ರಫ್ತು ನಿಯಂತ್ರಣ ಪಟ್ಟಿ 'SCOMET' ಅಡಿಯಲ್ಲಿ ರಾಸಾಯನಿಕದ ಹೆಸರು ನಿಷೇಧಿತ ವಸ್ತುವಾಗಿ ಕಾಣಿಸಿಕೊಂಡಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳು ವಾಡಿಕೆಯ ತಪಾಸಣೆಯಲ್ಲಿ ಶಿಪ್ ಮೆಂಟ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com