5 ವರ್ಷದಲ್ಲಿ 22 ಸಾವಿರಕ್ಕೂ ಅಧಿಕ ಚುನಾವಣಾ ಬಾಂಡ್ ಬಿಡುಗಡೆ, ದತ್ತಾಂಶ ನೀಡಿಕೆ ಗಡುವು ವಿಸ್ತರಿಸಿ: 'ಸುಪ್ರೀಂ'ಗೆ SBI ಮನವಿ

5 ವರ್ಷದಲ್ಲಿ 22 ಸಾವಿರಕ್ಕೂ ಅಧಿಕ ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿ ನೀಡಿಕೆಗಾಗಿ ನೀಡಿರುವ ಗಡುವನ್ನು ಮಾರ್ಚ್ 6 ರಿಂದ ಜೂನ್ 30 ರವರೆಗೆ ವಿಸ್ತರಿಸಿ ಎಂದು ಸುಪ್ರೀಂ ಕೋರ್ಟ್ ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನವಿ ಮಾಡಿಕೊಂಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: 5 ವರ್ಷದಲ್ಲಿ 22 ಸಾವಿರಕ್ಕೂ ಅಧಿಕ ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿ ನೀಡಿಕೆಗಾಗಿ ನೀಡಿರುವ ಗಡುವನ್ನು ಮಾರ್ಚ್ 6 ರಿಂದ ಜೂನ್ 30 ರವರೆಗೆ ವಿಸ್ತರಿಸಿ ಎಂದು ಸುಪ್ರೀಂ ಕೋರ್ಟ್ ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನವಿ ಮಾಡಿಕೊಂಡಿದೆ.

ಹೌದು.. ಕಳೆದ ಐದು ವರ್ಷಗಳಲ್ಲಿ 22,217 ಚುನಾವಣಾ ಬಾಂಡ್ ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಸಲುವಾಗಿ ಬಳಸಲಾಗಿದೆ ಎಂಬ ಅಂಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಬಹಿರಂಗಪಡಿಸಿದೆ. "ಬಿಡುಗಡೆ ಮಾಡಲಾದ ಚುನಾವಣಾ ಬಾಂಡ್ ಗಳನ್ನು ಅನುಮತಿ ನೀಡಲಾದ ಶಾಖೆಗಳು ಮುಂಬೈ ಪ್ರಧಾನ ಶಾಖೆಗೆ ಪ್ರತಿ ಹಂತದ ಕೊನೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿವೆ. ಎರಡು ಭಿನ್ನ ಮಾಹಿತಿ ಭಾಗಗಳು ಇರುವುದರಿಂದ ಒಟ್ಟು 44,434 ಮಾಹಿತಿ ಸೆಟ್ ಗಳನ್ನು ಡಿಕೋಡ್ ಮಾಡಿ, ಕ್ರೋಢೀಕರಿಸಿ, ತುಲನೆ ಮಾಡಬೇಕಾಗುತ್ತದೆ. ದಾನಿಗಳ ಹೆಸರನ್ನು ಗುಪ್ತವಾಗಿ ಇಡುವ ಉದ್ದೇಶದಿಂದ ಡಿಕೋಡ್ ಮಾಡುವ ಪ್ರಕ್ರಿಯೆ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಲಿದೆ ಎಂದು ಎಸ್ ಬಿಐ ಸ್ಪಷ್ಟಪಡಿಸಿದೆ.

ಬಾಂಡ್‌ಗಳ ಡಿಕೋಡಿಂಗ್‌ಗೆ ಸಂಬಂಧಿಸಿದ “ಪ್ರಾಯೋಗಿಕ ತೊಂದರೆಗಳನ್ನು” ಎಸ್ ಬಿಐ ಉಲ್ಲೇಖಿಸಿದ್ದು, ವಿವರಗಳನ್ನು ಒದಗಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಚ್ 6 ರ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಲು ಕೋರಿದೆ.

ಒಂದು ವೇಳೆ 116 ದಿನಗಳ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದರೆ, ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜಕೀಯ ನಿಧಿಯ ಕುರಿತು ಪ್ರಮುಖ ಮಾಹಿತಿಯು ಗೌಪ್ಯವಾಗಿರುತ್ತದೆ.

ಸುಪ್ರೀಂ ಕೋರ್ಟ್
Explainer: ಚುನಾವಣಾ ಬಾಂಡ್ ಕುರಿತ ದತ್ತಾಂಶ ಒದಗಿಸಲು SBI ನಾಲ್ಕು ತಿಂಗಳ ಸಮಯ ಕೇಳಿದ್ದೇಕೆ?

ಏನಿದು ಪ್ರಕರಣ?

ಫೆಬ್ರವರಿ 15ರಂದು ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಸ್ರಾಹಾದ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ ಐವರು ನ್ಯಾಯಾಧೀಶರ ಪೀಠ ನಿರ್ದೇಶನ ನೀಡಿ, "ಸುಪ್ರೀಕೋರ್ಟ್ 2019ರ ಏಪ್ರಿಲ್ 12ರಂದು ನೀಡಿದ ಮಧ್ಯಂತರ ಆದೇಶದ ಬಳಿಕ ಖರೀದಿಯಾದ ಚುನಾವಣಾ ಬಾಂಡ್ ಗಳ ವಿವರಗಳನ್ನು ಎಸ್ ಬಿಐ, ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಪ್ರತಿ ಬಾಂಡ್ ಖರೀದಿಯ ದಿನಾಂಕದ ವಿವರ, ಖರೀದಿದಾರರ ಹೆಸರು ಮತ್ತು ಖರೀದಿ ಮಾಡಿದ ಬಾಂಡ್ ಗೆ ನೀಡಲ್ಪಟ್ಟ ದೇಣಿಗೆಯ ವಿವರಗಳನ್ನು ಇದು ಒಳಗೊಂಡಿರಬೇಕು" ಎಂದು ಸೂಚಿಸಿತ್ತು. ಎಸ್ ಬಿಐ ನೀಡಿದ ವಿವರಗಳನ್ನು ಭಾರತದ ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಒಂದು ವಾರದ ಒಳಗಾಗಿ ಅಂದರೆ ಮಾರ್ಚ್ 13ರ ಒಳಗಾಗಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com