ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಮಗುವಿನ ರೋಚಕ ರಕ್ಷಣೆ; ವಿಡಿಯೋ ವೈರಲ್

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರಕ್ಷಣೆಯ ರೋಚಕ ಕಾರ್ಯಾಚರಣೆಯ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
child accidentally fell from a balcony
ಮಗು ರಕ್ಷಣೆ ವಿಡಿಯೋ
Updated on

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರಕ್ಷಣೆಯ ರೋಚಕ ಕಾರ್ಯಾಚರಣೆಯ ವಿಡಿಯೋವೊಂದು ಭಾರಿ ವೈರಲ್ ಆಗಿದೆ.

ಚೆನ್ನೈ ನಗರದ ಅವಡಿಯಲ್ಲಿರುವ Choolaimedu ಏರಿಯಾದ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ಮೇಲ್ಛಾವಣಿಯ ರೂಫ್‌ನ ಅಂಚಿನಲ್ಲಿ ಶಿಶುವೊಂದು ಪ್ರಾಣಾಪಾಯಕ್ಕೆ ಸಿಲುಕಿದ್ದು ನೆರೆಮನೆಯವರು ಪ್ರಾಣದ ಹಂಗು ತೊರೆದು ರಕ್ಷಿಸಿದ ರೋಚಕ ವಿಡಿಯೋ ವೈರಲ್ ಆಗಿದೆ.

child accidentally fell from a balcony
ಬಾಗಲಕೋಟೆ: 17 ದಿನ ಮಗು ಸೇರಿ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದ ತಾಯಿ ರಕ್ಷಣೆ, ಮಕ್ಕಳು ನೀರುಪಾಲು!

ಆಪಾರ್ಟ್ ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದ ಮಗು ಎರಡನೇ ಅಂತಸ್ತಿನ ಮೇಲ್ಛಾವಣಿಯ ಅಂಚಿನ ಮೇಲೆ ಬಿದ್ದಿದೆ. ಇದನ್ನು ಗಮನಿಸಿದೆ ನೆರಮನೆಯವರು ಕೂಡಲೇ ಕೆಳಗಿದ್ದವರನ್ನು ಮತ್ತು ಅಕ್ಕಪಕ್ಕದವರನ್ನು ಕೂಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಮಗು ಕೆಳಗೆ ಬಿದ್ದರೂ ಏನೂ ಆಗದಂತೆ ತಡೆಯಲು ದೊಡ್ಡ ದೊಡ್ಡ ಕಂಬಳಿಗಳನ್ನು ತಂದು ಅಡ್ಡಲಾಗಿ ಹಿಡಿದಿದ್ದಾರೆ.

ಈ ವೇಳೆ ಮಗು ಇದ್ದ ಎರಡನೇ ಅಂತಸ್ತಿನ ಕೆಳಗಿನ ಮನೆಯವರು ಅಲ್ಲಿಂದಲೇ ಮೇಲಕ್ಕೆ ಹತ್ತಿ ಮಗುವನ್ನು ರಕ್ಷಿಸಿದ್ದಾರೆ. ಇವಿಷ್ಟೂ ಕಾರ್ಯಾಚರಣೆಯನ್ನು ಎದುರು ಮನೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬಾಲ್ಕನಿಯಿಂದ ರೆಕಾರ್ಡ್ ಮಾಡಿದ ಕ್ಲಿಪ್‌ನಲ್ಲಿ 8 ತಿಂಗಳ ಹರೆಯದ ಹರಿನ್ ಮಾಗಿ ಎಂಬ ಪುಟ್ಟ ಮಗು ಕಟ್ಟಡದ 2ನೇ ಮಹಡಿಯ ಮೇಲ್ಛಾವಣಿಯ ತುದಿಯಲ್ಲಿ ತನ್ನ ಕೈ ಮತ್ತು ಮೊಣಕಾಲುಗಳ ಮೇಲೆ ಮಲಗಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಮೂವರು ಪುರುಷರು ಮಗುವನ್ನು ರಕ್ಷಿಸಲು ಮೊದಲ ಮಹಡಿಯ ಕಿಟಕಿಯಿಂದ ಮೇಲಕ್ಕೆ ಏರಲು ಪ್ರಯತ್ನಿಸಿದಾಗ ಗಾಬರಿಗೊಂಡ ನಿವಾಸಿಗಳು ಸಹಾಯಕ್ಕಾಗಿ ಕಿರುಚಿದ್ದಾರೆ.

ಮಗು ತಪ್ಪಿ ಕೆಳಗೆ ಬಿದ್ದರೆ ಹಿಡಿಯಲು ಜನರ ಗುಂಪು ಕಿಟಕಿಯ ಕೆಳಗೆ ನೆಲ ಮಹಡಿಯಲ್ಲಿ ಬೆಡ್‌ಶೀಟ್ ಗಳನ್ನು ಹಿಡಿದು ನಿಂತಿದ್ದರು. ಮಗುವಿಗೆ ನೋವಾಗದಂತೆ ನೋಡಿಕೊಳ್ಳಲು ಹಾಸಿಗೆಯ ಕೆಳಗೆ ಹಾಸಿಗೆಯನ್ನು ಇರಿಸಲಾಗಿತ್ತು. ಮೊದಲ ಮಹಡಿಯಲ್ಲಿದ್ದ ಪುರುಷರು ಕೊನೆಗೂ ಮಗುವನ್ನು ರಕ್ಷಿಸಿದ್ದಾರೆ.

ರಮ್ಯಾ ಎಂಬಾಕೆ ಬಾಲ್ಕನಿಯಲ್ಲಿ ಶುಶ್ರೂಷೆ ಮಾಡುತ್ತಿದ್ದ ವೇಳೆ ಮಗು ಕೆಳಗೆ ಬಿದ್ದಿತ್ತು ಎಂದು ಆವಡಿ ಪೊಲೀಸ್ ಕಮಿಷನರ್ ಶಂಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com