ಗುಜರಾತ್‌: ರಾಸಾಯನಿಕ ಸೋರಿಕೆಯಿಂದ ಹೊತ್ತಿ ಉರಿದ ಗೋಡೌನ್‌, ಮೂವರು ಸಾವು

ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಲ್ಲಿಮೋರಿಯಾ ತಾಲೂಕಿನ ದೇವ್‌ಸರ್ ಗ್ರಾಮದ ಗೋಡೌನ್‌ನಲ್ಲಿ ಕಾರ್ಮಿಕರು ಟ್ರಕ್‌ನಿಂದ ರಾಸಾಯನಿಕ ಬ್ಯಾರೆಲ್‌ಗಳನ್ನು ಇಳಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವಸಾರಿ: ಗುಜರಾತ್‌ನ ನವಸಾರಿ ಜಿಲ್ಲೆಯ ಗೋಡೌನ್‌ನಲ್ಲಿ ಶನಿವಾರ ಬೆಳಗ್ಗೆ ರಾಸಾಯನಿಕ ಸೋರಿಕೆಯಿಂದ ಉಂಟಾದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಲ್ಲಿಮೋರಿಯಾ ತಾಲೂಕಿನ ದೇವ್‌ಸರ್ ಗ್ರಾಮದ ಗೋಡೌನ್‌ನಲ್ಲಿ ಕಾರ್ಮಿಕರು ಟ್ರಕ್‌ನಿಂದ ರಾಸಾಯನಿಕ ಬ್ಯಾರೆಲ್‌ಗಳನ್ನು ಇಳಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಬಿವಿ ಗೋಹಿಲ್ ಹೇಳಿದ್ದಾರೆ.

"ಘಟನೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ. ಗಾಯಾಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ವುಡ್‌ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ; ಕಾರ್ಮಿಕ ಸಜೀವ ದಹನ

ಸಮೀಪದ ತಾಲೂಕುಗಳಿಂದ ಐದು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಗೋಹಿಲ್ ಹೇಳಿದ್ದಾರೆ.

ಟ್ರಕ್‌ನಲ್ಲಿದ್ದ ಬ್ಯಾರೆಲ್ ವೊಂದರಿಂದ ರಾಸಾಯನಿಕ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಮಮ್ಲತಾರ್ ಜಗದೀಶ್ ಚೌಧರಿ ಅವರು ತಿಳಿಸಿದ್ದಾರೆ.

ಟ್ರಕ್‌ಗೆ ಮೊದಲು ಬೆಂಕಿ ಹೊತ್ತಿಕೊಂಡಿತು ಮತ್ತು ನಂತರ ಬೆಂಕಿಯು ತೀವ್ರತೆಯೂ ಗೋಡೌನ್‌ಗೆ ವ್ಯಾಪಿಸಿ ಮೂವರು ಸಾವನ್ನಪ್ಪಿದ್ದಾರೆ.

ಮೂವರು ಕಾರ್ಮಿಕರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಇನ್ನೂ ಒಬ್ಬ ಕಾರ್ಮಿಕ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com