ಚೆನ್ನೈ: ಮೀಸಲು ಹುಲಿ ಸಂರಕ್ಷಿತಾರಣ್ಯದಲ್ಲಿ ಯುವಕರ ಗುಂಪೊಂದು ಹುಚ್ಚಾಟ ಮೆರೆದಿದ್ದು, ದಟ್ಟಕಾನನದಲ್ಲಿ ಕಾರು ನಿಲ್ಲಿಸಿ ಜಿಂಕೆ ಹಿಂಡನು ಓಡಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕರ ಗುಪೊಂದು AP16CV0001 ನೋಂದಣಿ ಸಂಖ್ಯೆಯ ಕಾರಿನಿಂದ ಇಳಿದು ಅರಣ್ಯ ಪ್ರದೇಶದೊಳಗೆ ಇದ್ದ ಜಿಂಕೆಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಕಾರಿನಿಂದ ಇಳಿದ ಯುವಕರು ನೇರವಾಗಿ ಅರಣ್ಯದಲ್ಲಿ ಮೇಯುತ್ತಿದ್ದ ಜಿಂಕೆಗಳ ಗುಂಪಿನತ್ತ ಏಕಾಏಕಿ ಶಬ್ದ ಮಾಡುತ್ತಾ ಓಡಿದ್ದಾರೆ. ಈ ವೇಳೆ ಶಾಂತವಾಗಿ ಆಹಾರ ಸೇವಿಸುತ್ತಿದ್ದ ಜಿಂಕೆಗಳ ಗುಂಪು ಯುವಕರ ಹುಚ್ಚಾಟದಿಂದ ಬೆದರಿ ದಿಕ್ಕಾಪಾಲಾಗಿ ಓಡಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ವನ್ಯಜೀವಿಗಳ ನೈಸರ್ಗಿಕ ನಡವಳಿಕೆಯನ್ನು ಅಡ್ಡಿಪಡಿಸುವ ಮತ್ತು ಮೀಸಲು ಪರಿಸರ ಸಮತೋಲನಕ್ಕೆ ಗಂಭೀರ ಅಪಾಯವನ್ನುಂಟುಮಾಡಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಇಂತಹ ಹುಚ್ಚಾಟಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರಾಣಿಗಳಿಗೆ ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಕಿರುಕುಳ ನೀಡುವುದು ಬೇಜವಾಬ್ದಾರಿ ಮತ್ತು ಅನೈತಿಕವಾಗಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದುಮಲೈನಂತಹ ಸಂರಕ್ಷಿತ ಪ್ರದೇಶ ವನ್ಯಜೀವಿಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸುವ ಪ್ರದೇಶವಾಗಿದೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ. ಇಂತಹ ಹುಚ್ಚಾಟಗಳಿಂದ ಪ್ರಾಣಿಗಳು ಅನಗತ್ಯ ಒತ್ತಡ ಮತ್ತು ತಮಗೆ ಹಾನಿ ಮಾಡುತ್ತಾರೆ ಎಂಬ ಭಯದಿಂದ ಅವು ಆಕ್ರೋಶಗೊಂಡು ಇವರ ಮೇಲೆಯೇ ಹಾನಿ ಮಾಡುವ ಸಾಧ್ಯತೆ ಹೆಚ್ಚು.
ಹೀಗಾಗಿ ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸಿದಂತೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ವನ್ಯಜೀವಿಗಳಿಗೆ ತೊಂದರೆ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ದಂಡವನ್ನು ಜಾರಿಗೊಳಿಸಬೇಕು. ಕಾಡಿನ ಕಾನೂನುಗಳನ್ನು ಮತ್ತು ಅದನ್ನು ಮನೆ ಎಂದು ಕರೆಯುವ ಜೀವಿಗಳ ಘನತೆಯನ್ನು ಗೌರವಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
Advertisement