ದೆಹಲಿಯಲ್ಲಿ ಪ್ರತಿಭಟನೆ: ವಾಂಗ್ಚುಕ್ ಸೇರಿ 20 ಮಂದಿ ವಶಕ್ಕೆ!

20-25 ಮಂದಿ ಪ್ರತಿಭಟನಾ ನಿರತರು ವಾಂಗ್ಚುಕ್ ಜೊತೆ ನಿರಶನ ಕೈಗೊಂಡಿದ್ದರು. ಅವರನ್ನು ಲಡಾಖ್ ಭವನದ ಬಳಿ ವಶಕ್ಕೆ ಪಡೆಯಲಾಗಿದ್ದು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
Sonam Wangchuk
ಸೋನಮ್ ವಾಂಗ್ಚುಕ್online desk
Updated on: 

ನವದೆಹಲಿ: ಹವಾಮಾನ ಹೋರಾಟಗಾರ ವಾಂಗ್ಚುಕ್ ಹಾಗೂ ಇನ್ನಿತರ ಪ್ರತಿಭಟನಾ ನಿರತರನ್ನು ದೆಹಲಿ ಪೊಲೀಸರು ಲಡಾಖ್ ಭವನದಲ್ಲಿ ವಶಕ್ಕೆ ಪಡೆದಿದ್ದಾರೆ.

20-25 ಮಂದಿ ಪ್ರತಿಭಟನಾ ನಿರತರು ವಾಂಗ್ಚುಕ್ ಜೊತೆ ನಿರಶನ ಕೈಗೊಂಡಿದ್ದರು. ಅವರನ್ನು ಲಡಾಖ್ ಭವನದ ಬಳಿ ವಶಕ್ಕೆ ಪಡೆಯಲಾಗಿದ್ದು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಲವು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿಲ್ಲ, ಶಾಂತಿಯುತವಾಗಿ ಕುಳಿತಿದ್ದೇವೆ ಎಂದು ವಾದಿಸಿದರು. ಪ್ರತಿಭಟನಾಕಾರರು ಲಡಾಖ್ ಭವನದ ಹೊರಗೆ ಕುಳಿತುಕೊಳ್ಳಲು ಯಾವುದೇ ಅನುಮತಿ ಹೊಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Sonam Wangchuk
ಆರ್ ಎಸ್ಎಸ್, ಕೆಲವು ಬಿಜೆಪಿ ನಾಯಕರ ಬೆಂಬಲ ಇದೆ: ನಿರಶನ ನಿರತ ಸೋನಮ್ ವಾಂಗ್ ಚುಕ್

ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಯು ಪರಿಗಣನೆಯಲ್ಲಿದೆ. ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವರಿಗೆ ಅವಕಾಶವಿಲ್ಲ. ನಾವು ಕೆಲವು ಜನರನ್ನು ಬಂಧಿಸಿದ್ದೇವೆ, ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com