Bangladesh 'ಪಾಕಿಸ್ತಾನದ ಸಹೋದರ' ರಾಷ್ಟ್ರವಾಗುತ್ತಿದೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

'ಬಾಂಗ್ಲಾದೇಶದ ನಿಯಂತ್ರಣವು "ಪಾಕಿಸ್ತಾನದ ದೊಡ್ಡ ಸಹೋದರ" ಆಗುವವರ ಕೈಗೆ ಬಿದ್ದಿದೆ. ಇದರಿಂದ ಹೂಡಿಕೆದಾರರು ನೆರೆಯ ರಾಷ್ಟ್ರದಿಂದ ದೂರ ಸರಿಯುತ್ತಾರೆ.
Union Minister Giriraj Singh
ಕೇಂದ್ರ ಸಚಿವ ಗಿರಿರಾಜ್ ಸಿಂಗ್
Updated on

ಢಾಕಾ: ಬಾಂಗ್ಲಾದೇಶದಲ್ಲಿನ ಹಾಲಿ ಪರಿಸ್ಥಿತಿಗಳನ್ನು ಗಮನಿಸಿದರೆ ಆ ದೇಶ 'ಪಾಕಿಸ್ತಾನದ ಸಹೋದರ' ರಾಷ್ಟ್ರವಾಗುತ್ತಿರುವಂತೆ ತೋರುತ್ತಿದ್ದು, ಹೂಡಿಕೆದಾರರು ನೆರೆಯ ರಾಷ್ಟ್ರದಿಂದ ದೂರ ಸರಿಯುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ದೆಹಲಿಯ ಭಾರತ್ ಮಂಟಪದಲ್ಲಿ ಮುಂಬರುವ ಫೆಬ್ರವರಿ 14-17 ರವರೆಗೆ ನಡೆಯಲಿರುವ ಭಾರತ್ ಟೆಕ್ಸ್ 2025 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗಿರಿರಾಜ್ ಸಿಂಗ್, 'ಬಾಂಗ್ಲಾದೇಶದ ನಿಯಂತ್ರಣವು "ಪಾಕಿಸ್ತಾನದ ದೊಡ್ಡ ಸಹೋದರ" ಆಗುವವರ ಕೈಗೆ ಬಿದ್ದಿದೆ. ಇದರಿಂದ ಹೂಡಿಕೆದಾರರು ನೆರೆಯ ರಾಷ್ಟ್ರದಿಂದ ದೂರ ಸರಿಯುತ್ತಾರೆ ಎಂದು ಹೇಳಿದ್ದಾರೆ.

Union Minister Giriraj Singh
ಬಾಂಗ್ಲಾದೇಶ: ಪಲಾಯನ ನಂತರ ಶೇಖ್ ಹಸೀನಾ ಮೊದಲ ಹೇಳಿಕೆ; ಮಾಜಿ ಪ್ರಧಾನಿ ಹೇಳಿದ್ದೇನು?

ಬಾಂಗ್ಲಾದೇಶವು ಪಾಕಿಸ್ತಾನದಂತಾದರೆ, ಹೂಡಿಕೆದಾರರು ಅಲ್ಲಿಗೆ ಹೋಗುವ ಮೊದಲು ಯೋಚಿಸುತ್ತಾರೆ ಎಂದು ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಗೆ ಕಾರಣವಾದ ಇತ್ತೀಚಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಅಂತೆಯೇ ಭಾರತವು ದೊಡ್ಡ ಕಾರ್ಮಿಕ ಮಾರುಕಟ್ಟೆಯನ್ನು ಹೊಂದಿರುವುದರಿಂದ ಭಾರತೀಯ ಜವಳಿ ಉದ್ಯಮವು ಬಾಂಗ್ಲಾದೇಶ ಅಥವಾ ವಿಯೆಟ್ನಾಂನಿಂದ ಯಾವುದೇ ಸವಾಲನ್ನು ಎದುರಿಸುತ್ತಿಲ್ಲ. ಪ್ರತಿ ವಲಯವನ್ನು ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆಗೆ ಜೋಡಿಸುವ ಯೋಜನೆ ಇದೆ. ನಾವು ಹೆಚ್ಚು PLI ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ, ಪ್ರತಿಯೊಂದು ಕ್ಷೇತ್ರವನ್ನು ಅದಕ್ಕೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com