ನವದೆಹಲಿ: ಕ್ರಿಕೆಟಿಗ ಸುರೇಶ್ ರೈನಾ ಅಂಕಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣ್ ಕೋಟ್ ಕೋರ್ಟ್ 12 ಮಂದಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು ಮಾತ್ರವಲ್ಲದೇ 2 ಲಕ್ಷ ರೂ ದಂಡ ಕೂಡ ಹೇರಿದೆ.
2020ರ ಆಗಸ್ಟ್ ತಿಂಗಳಿನಲ್ಲಿ ಸುರೇಶ್ ರೈನಾ ಅವರ ಸಂಬಂಧಿ ಅಲೋಕ್ ಕುಮಾರ್ ಮತ್ತು ಅವರ ಪುತ್ರ ಕೌಶಲ್ ರನ್ನು ಅವರ ಪಠಾಣ್ ಕೋಟ್ ನಿವಾಸದಲ್ಲೇ ಭೀಕರವಾಗಿ ಕೊಂದು ಹಾಕಲಾಗಿತ್ತು.
ಅಂದು ಮನೆ ತಾರಸಿಯಲ್ಲಿ ಮಲಗಿದ್ದ ತಂದೆ ಮಗನನ್ನು ಮನೆ ಲೂಟಿಗೆ ಬಂದಿದ್ದ ದುಷ್ಕರ್ಮಿಗಳ ತಂಡವೇ ಕೊಂದು ಹಾಕಿತ್ತು ಎಂದು ಹೇಳಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣ್ ಕೋಟ್ ನ್ಯಾಯಾಲಯ ತೀರ್ಪು ನೀಡಿದ್ದು, 12 ಮಂದಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಶಿಕ್ಷೆಗೊಳಗಾದವರನ್ನು ಉತ್ತರ ಪ್ರದೇಶದ ಸ್ವರ್ನ್ ಅಲಿಯಾಸ್ ಮ್ಯಾಚಿಂಗ್ (28), ರಾಜಸ್ಥಾನದ ಶಾರುಖ್ ಖಾನ್ ಅಲಿಯಾಸ್ ಲುಕ್ಮಾನ್ (46), ರಾಜಸ್ಥಾನದ ಮೊಹಬ್ಬತ್ (26), ರಾಜಸ್ಥಾನದ ರಿಹಾನ್ ಅಲಿಯಾಸ್ ಸೋನು (29), ಪಂಜಾಬ್‌ನ ಅಸ್ಲಂ ಅಲಿಯಾಸ್ ನಾಸೋ (44) ಎಂದು ಗುರುತಿಸಲಾಗಿದೆ.
ಅಲ್ಲದೆ ಉತ್ತರ ಪ್ರದೇಶದ ತವಜಲ್ ಬೀಬಿ (53), ಕಜಮ್ ಅಲಿಯಾಸ್ ರಿದಾ (60), ಚಾಹತ್ ಅಲಿಯಾಸ್ ಜಾನ್ (38), ರಾಜಸ್ಥಾನದ ಜಬ್ರಾನಾ (43), ಸಜನ್ ಅಲಿಯಾಸ್ ಅಮೀರ್ (55), ಸೆಹಜಾನ್ ( 18 ) ಮತ್ತು ಛಾಜು ಅಲಿಯಾಸ್ ಬಾಬು ಮಿಯಾನ್ (70) ಎಂದು ಗುರುತಿಸಲಾಗಿದೆ.
ಕೋರ್ಟ್ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ ಎಲ್ಲ ಅಪರಾಧಿಗಳಿಗೆ ತಲಾ 2 ಲಕ್ಷ ರೂ ದಂಡ ಕೂಡ ವಿಧಿಸಿದೆ.
Advertisement