ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಪ್ರವಾಹದಿಂದಾಗಿ 3 ಮಂದಿ ಸಾವನ್ನಪ್ಪಿದ್ದು, 2.5 ಲಕ್ಷ ಮಂದಿ ಅನಾನುಕೂಲ ಎದುರಿಸಿದ್ದಾರೆ. ರಾಜ್ಯದ 6 ಜಿಲ್ಲೆಗಳು ಪ್ರವಾಹ ಪೀಡಿತವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಮೇದಿನಿಪುರ ಮತ್ತು ಹೌರಾ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ಸಚಿವಾಲಯದಲ್ಲಿ ಸಭೆ ನಡೆಸಿದರು ಮತ್ತು ವಿಪತ್ತಿನಿಂದ ಉಂಟಾದ ಹಾನಿಯ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏತನ್ಮಧ್ಯೆ, ಪಕ್ಕದ ಬುರಿಗಂಗಾ ಕಾಲುವೆಯ ನೀರು ಮಧ್ಯಾಹ್ನ ಬ್ಯಾನರ್ಜಿಯವರ ಕಾಳಿಘಾಟ್ ನಿವಾಸವನ್ನು ಜಲಾವೃತಗೊಳಿಸಿದೆ. ಆಡರೆ ಆ ಸಮಯದಲ್ಲಿ ಆಕೆ ಮನೆಯಲ್ಲಿ ಇರಲಿಲ್ಲ.
Advertisement