ಭಾರತ-ಫ್ರಾನ್ಸ್ ನಡುವೆ 63,000 ಕೋಟಿ ರೂ ಮೌಲ್ಯದ 26 'ರಾಫೆಲ್ ಎಂ' ಜೆಟ್ ಒಪ್ಪಂದ; ರಾಫೆಲ್ ಗಿಂತ ಇದು ಹೇಗೆ ಭಿನ್ನ?

22 ಸಿಂಗಲ್-ಸೀಟರ್ ಜೆಟ್‌ಗಳು ಮತ್ತು ತರಬೇತುದಾರರಿಗೆ ಆಸನವಿರುವ ನಾಲ್ಕು ಅವಳಿ-ಆಸನಗಳಿರುವ ಜೆಟ್ ಗಳಿಗೆ ಒಪ್ಪಂದ ನಡೆದಿದ್ದು, 2031ರ ವೇಳೆಗೆ ವಿತರಣೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Rafale-M Jets
ರಾಫೆಲ್ ಜೆಟ್ online desk
Updated on

ನವದೆಹಲಿ: ಭಾರತ ಸೋಮವಾರ ಫ್ರಾನ್ಸ್‌ನಿಂದ 26 ರಫೇಲ್ ಎಂ ಫೈಟರ್ ಜೆಟ್‌ಗಳನ್ನು- ಸಮುದ್ರದಿಂದ ಉಡಾವಣೆ ಮಾಡಬಹುದಾದ ಫೈಟರ್ ಜೆಟ್ ಗಳನ್ನು - ಖರೀದಿಸಲು 63,000 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

22 ಸಿಂಗಲ್-ಸೀಟರ್ ಜೆಟ್‌ಗಳು ಮತ್ತು ತರಬೇತುದಾರರಿಗೆ ಆಸನವಿರುವ ನಾಲ್ಕು ಅವಳಿ-ಆಸನಗಳಿರುವ ಜೆಟ್ ಗಳಿಗೆ ಒಪ್ಪಂದ ನಡೆದಿದ್ದು, 2031ರ ವೇಳೆಗೆ ವಿತರಣೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಒಪ್ಪಂದ ಫ್ಲೀಟ್ ನಿರ್ವಹಣೆ, ಲಾಜಿಸ್ಟಿಕಲ್ ಬೆಂಬಲ ಮತ್ತು ಸಿಬ್ಬಂದಿ ತರಬೇತಿ ಮತ್ತು 'ಆತ್ಮನಿರ್ಭರ ಭಾರತ' ಉಪಕ್ರಮಕ್ಕೆ ಮಹತ್ವದ ಕ್ಷಣದಲ್ಲಿ, ಆಫ್‌ಸೆಟ್ ಬಾಧ್ಯತೆಗಳ ಅಡಿಯಲ್ಲಿ ಘಟಕಗಳ ಸ್ಥಳೀಯ ತಯಾರಿಕೆಯನ್ನು ಸಹ ಒಳಗೊಂಡಿದೆ.

ರಫೇಲ್ ಎಂ ನ್ನು ವಿಶ್ವದ ಅತ್ಯಂತ ಮುಂದುವರಿದ ನೌಕಾ ಯುದ್ಧ ಜೆಟ್‌ಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಪ್ರಸ್ತುತ ಫ್ರೆಂಚ್ ನೌಕಾಪಡೆ ಮಾತ್ರ ಈ ಜೆಟ್ ನ್ನು ಹೊಂದಿದೆ.

ಇದು ಸಫ್ರಾನ್ ಗ್ರೂಪ್ಸ್‌ನ ಬಲವರ್ಧಿತ ಲ್ಯಾಂಡಿಂಗ್ ಗೇರ್‌ಗಳನ್ನು ಹೊಂದಿದ್ದು, ವಾಹಕ-ಹೊಂದಾಣಿಕೆಯ ವಿಮಾನಗಳಿಗೆ ಅತ್ಯುತ್ತಮವಾದದ್ದು ಎಂದು ಪರಿಗಣಿಸಲಾಗಿದೆ. ಕಠಿಣ ಪರಿಸ್ಥಿತಿಗಳು, ಡೆಕ್ ಲ್ಯಾಂಡಿಂಗ್ ಮತ್ತು ಟೈಲ್‌ಹೂಕ್‌ಗಳನ್ನು ತಡೆದುಕೊಳ್ಳಲು ಬಲವರ್ಧಿತ ಅಂಡರ್‌ಕ್ಯಾರೇಜ್ ನ್ನು ಸಹ ಒಳಗೊಂಡಿದೆ.

ನೌಕಾಪಡೆಯ ಹೊಸ ಶಸ್ತ್ರಾಸ್ತ್ರಗಳನ್ನು ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯಗಳಲ್ಲಿ ನಿಯೋಜಿಸಲಾಗುವುದು, ಇದು ಭಾರತೀಯ ನೌಕಾ ಪಡೆಯ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಹಿಂದೂ ಮಹಾಸಾಗರದಲ್ಲಿನ ಬೆದರಿಕೆಗಳನ್ನು ಎದುರಿಸಲು ಭಾರತಕ್ಕೆ ಮಹತ್ವದ್ದಾಗಿರಲಿದೆ.

ಇದು ನೌಕಾಪಡೆಯಲ್ಲಿ ಹಳೆಯದಾಗುತ್ತಿರುವ ಮಿಗ್ -29 ಕೆ ಗೆ ಬದಲಾಗಿ ಬಳಕೆಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. "ನಾವು ತನ್ನ ಕಾರ್ಯಾಚರಣೆಯ ಕ್ಷೇತ್ರದಲ್ಲಿ ಯಾವುದೇ ಉಲ್ಲಂಘನೆಯನ್ನು "ನಿರಾಕರಿಸಲು" ನಮ್ಮ ಕಾರ್ಯತಂತ್ರವನ್ನು ಬದಲಾಯಿಸುತ್ತಿದ್ದೇವೆ ಮತ್ತು "ಎಲ್ಲಾ ನೆರೆಹೊರೆಯವರಿಂದ ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದೆ" ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಡಿಸೆಂಬರ್‌ನಲ್ಲಿ ಹೇಳಿದ್ದರು.

Rafale-M Jets
50 ಸಾವಿರ ಕೋಟಿ ರೂ. ಮೌಲ್ಯದ ರಾಫೆಲ್ ಮೆರೈನ್ ಜೆಟ್ ಒಪ್ಪಂದ: ಭಾರತ-ಫ್ರಾನ್ಸ್ ನಡುವೆ ಮಾತುಕತೆ!

ಭಾರತೀಯ ವಾಯುಪಡೆಯು ಈಗಾಗಲೇ 36 ರಫೇಲ್ ಯುದ್ಧ ವಿಮಾನಗಳನ್ನು ನಿರ್ವಹಿಸುತ್ತಿದೆ. ಈ ನಡುವೆ ನೌಕಾ ಪಡೆಯಲ್ಲಿನ ಬದಲಾವಣೆಗಳೂ, IAF ನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

ನೌಕಾಪಡೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಥವಾ DRDO ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ, ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ಸೇರಿಸಲು ಸಹ ಯೋಜಿಸುತ್ತಿದೆ.

ಇವು - ಅವಳಿ-ಎಂಜಿನ್, ಡೆಕ್-ಆಧಾರಿತ ಯುದ್ಧವಿಮಾನಗಳಾಗಿ ವಿನ್ಯಾಸಗೊಳಿಸಲಾಗಿದೆ - ವಾಯುಪಡೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ಅಥವಾ AMCA ಯ ನೌಕಾ ಪ್ರತಿರೂಪವಾಗಿರುತ್ತದೆ.

ವಾಯುಪಡೆಯ 36 ರಫೇಲ್ ಜೆಟ್‌ಗಳು - 'ಸಿ' ಆವೃತ್ತಿ- ಉತ್ತರದ ಎರಡು ನೆಲೆಗಳಿಂದ ಕಾರ್ಯನಿರ್ವಹಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com