ಗುಂಡಿಕ್ಕಿ ಹತ್ಯೆ(ಸಾಂದರ್ಭಿಕ ಚಿತ್ರ)
ಗುಂಡಿಕ್ಕಿ ಹತ್ಯೆ(ಸಾಂದರ್ಭಿಕ ಚಿತ್ರ)

12ನೇ ತರಗತಿ ಪಾಸ್ ಔಟ್ ಜತೆ ಮದುವೆ: ಎಂಬಿಬಿಎಸ್ ಮಗಳನ್ನೇ ಕೊಂದ ನಿವೃತ್ತ CRPF ಅಧಿಕಾರಿ!

ನಿವೃತ್ತ CRPF ಅಧಿಕಾರಿ ಕಿರಣ್ ಮಾಂಗಲೆ (50) ಅವರು ಕಳೆದ ಶನಿವಾರ ರಾತ್ರಿ ಉತ್ತರ ಮಹಾರಾಷ್ಟ್ರ ಜಿಲ್ಲೆಯ ಚೋಪ್ಡಾ ತಹಸಿಲ್‌ನಲ್ಲಿ ತನ್ನ ಮಗಳು ತೃಪ್ತಿ ವಾಘ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Published on

ಜಲಗಾಂವ್‌: ಜಲಗಾಂವ್‌ನಲ್ಲಿ 24 ವರ್ಷದ ಯುವತಿಯನ್ನು ಆಕೆಯ ತಂದೆ, ನಿವೃತ್ತ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಕೊಲೆ ಮಾಡಿದ್ದು, 12ನೇ ತರಗತಿ ಪಾಸ್ ಔಟ್ ಯುವಕನನ್ನು ಮದುವೆಯಾದ ಕಾರಣಕ್ಕೆ ತನ್ನ ಎಂಬಿಬಿಎಸ್ ಮಗಳ ಮೇಲೆ ಅವರಿಗೆ ದ್ವೇಷ ಇತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ನಿವೃತ್ತ CRPF ಅಧಿಕಾರಿ ಕಿರಣ್ ಮಾಂಗಲೆ (50) ಅವರು ಕಳೆದ ಶನಿವಾರ ರಾತ್ರಿ ಉತ್ತರ ಮಹಾರಾಷ್ಟ್ರ ಜಿಲ್ಲೆಯ ಚೋಪ್ಡಾ ತಹಸಿಲ್‌ನಲ್ಲಿ ತನ್ನ ಮಗಳು ತೃಪ್ತಿ ವಾಘ್ ಅವರನ್ನು ತಮ್ಮ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆಕೆಯ ಪತಿ ಅವಿನಾಶ್ ವಾಘ್ ಅವರ ಮೇಲೂ ಫೈರಿಂಗ್ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರು ಮಾಂಗಲೆ ಅವರ ಮಗ ನಿಖಿಲ್ ಮಾಂಗಲೆ ಅವರನ್ನು ಬಂಧಿಸಿದ್ದಾರೆ. ನಿಖಿಲ್ ತಮ್ಮ ತಂದೆಯೊಂದಿಗೆ ಅಪರಾಧ ಸ್ಥಳಕ್ಕೆ ಹೋಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಂಡಿಕ್ಕಿ ಹತ್ಯೆ(ಸಾಂದರ್ಭಿಕ ಚಿತ್ರ)
ಮಾಜಿ DGP ಓಂ ಪ್ರಕಾಶ್ ಹತ್ಯೆ ಪ್ರಕರಣ: ಚೂರಿ ಇರಿತಕ್ಕೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿದ್ದ ಪತ್ನಿ, 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ

ಗುಂಡಿನ ದಾಳಿಯ ನಂತರ, ಸುತ್ತಮುತ್ತಲಿನ ಜನ, ಕಿರಣ್ ಮಾಂಗಲೆ ಅವರನ್ನು ತೀವ್ರವಾಗಿ ಥಳಿಸಿದ್ದಾರೆ. ಗಾಯಗೊಂಡಿರುವ ಅವರನ್ನು ಜಲಗಾಂವ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಗುಂಡೇಟಿನಿಂದ ಗಾಯಗೊಂಡಿರುವ ಅವರ ಅಳಿಯ ಅವಿನಾಶ್ ಅವರನ್ನು ಪುಣೆಯ ಸಾಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಿನಾಶ್ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕಿರಣ್ ಮಾಂಗಲೆ ಮತ್ತು ಅವರ ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com