ದೆಹಲಿಯಲ್ಲಿ ತ್ರಿವಳಿ ಕೊಲೆ: ಮೈದಾನ್ ಗರ್ಹಿಯಲ್ಲಿ ತಂದೆ-ತಾಯಿ, ಅಣ್ಣನನ್ನು ಕೊಂದು ಯುವಕ ಪರಾರಿ!

ದಕ್ಷಿಣ ದೆಹಲಿಯಲ್ಲಿನ ಮನೆಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಮಹಿಳೆಯನ್ನು ಬಾಯಿಗೆ ಬಟ್ಟೆ ಕಟ್ಟಿ ಕೊಲೆ ಮಾಡಲಾಗಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ
Updated on

ದಕ್ಷಿಣ ದೆಹಲಿಯಲ್ಲಿ ತ್ರಿವಳಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಮನೆಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಮಹಿಳೆಯನ್ನು ಬಾಯಿಗೆ ಬಟ್ಟೆ ಕಟ್ಟಿ ಕೊಲೆ ಮಾಡಲಾಗಿದೆ. ಇನ್ನು ರಕ್ತದಲ್ಲಿ ತೊಯ್ದ ಸ್ಥಿತಿಯಲ್ಲಿ ಪುರುಷರ ಮೃತದೇಹ ಪತ್ತೆಯಾಗಿದೆ. ಘಟನೆಯ ನಂತರ ಮೃತರ ಮಗ ನಾಪತ್ತೆಯಾಗಿದ್ದಾನೆ.

ದಕ್ಷಿಣ ದೆಹಲಿಯ ಮೈದಾನ್ ಗರ್ಹಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಬುಧವಾರ ಒಂದೇ ಕುಟುಂಬದ ಮೂವರ ಕೊಲೆ ಸಂಚಲನ ಮೂಡಿಸಿದೆ. ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದಾಗ, ರಕ್ತದಲ್ಲಿ ತೊಯ್ದ ಸ್ಥಿತಿಯಲ್ಲಿ ಮನೆಯೊಳಗೆ ಮೂರು ಮೃತದೇಹಗಳು ಬಿದ್ದಿದ್ದವು.

ಪೊಲೀಸರ ಪ್ರಕಾರ, ನೆಲಮಹಡಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದು, ಮೊದಲ ಮಹಡಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತರನ್ನು ಪ್ರೇಮ್ ಸಿಂಗ್ 50, ಅವರ ಪತ್ನಿ ರಜನಿ 45 ಮತ್ತು ಮಗ ಹೃತಿಕ್ 24) ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ಬಂದ ತಕ್ಷಣ, ಎಫ್‌ಎಸ್‌ಎಲ್ ಮತ್ತು ಅಪರಾಧ ತಂಡ ಸ್ಥಳಕ್ಕೆ ತಲುಪಿ ಮನೆಯನ್ನು ಸೀಲ್ ಮಾಡಿದೆ. ಕುಟುಂಬದ ನಾಲ್ಕನೇ ಸದಸ್ಯ 23 ವರ್ಷದ ಸಿದ್ಧಾರ್ಥ್ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರತ್ಯಕ್ಷ ದೃಶ್ಯ
ಚಿತ್ರದುರ್ಗ ಕೊಲೆ: ಮತ್ತೊಬ್ಬನ ಜೊತೆ ಸಂಬಂಧ; ಮದುವೆಗೆ ಒತ್ತಾಯಿಸಿದ ದಲಿತ ಗರ್ಭಿಣಿ ವಿದ್ಯಾರ್ಥಿನಿಯನ್ನು ಕೊಂದ ಪ್ರಿಯಕರ!

ಮಗ ಸ್ವಲ್ಪ ಸಮಯದಿಂದ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದನೆಂದು ಸ್ಥಳೀಯ ಜನರು ತಿಳಿಸಿದ್ದಾರೆ. ಕುಟುಂಬವನ್ನು ಕೊಂದಿದ್ದೇನೆ ಮತ್ತು ಇನ್ನು ಮುಂದೆ ಇಲ್ಲಿ ವಾಸಿಸುವುದಿಲ್ಲ ಎಂದು ಅವನು ವ್ಯಕ್ತಿಯೊಬ್ಬನಿಗೆ ತಿಳಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಸ್ತುತ, ಪೊಲೀಸರು ಶವಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಪ್ರಾರಂಭಿಸಿದ್ದಾರೆ ಮತ್ತು ಕಾಣೆಯಾದ ಮಗನಿಗಾಗಿ ಹುಡುಕಾಟ ಮುಂದುವರೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com