
ಚಂಡೀಗಢ: ಪ್ರೀತಿ ನೆಪನೀಡಿ ತಂದೆತಾಯಿಗೆ ಹೇಳದೇ ಓಡಿ ಹೋಗಿ ಮದುವೆಯಾಗುವ ಮಕ್ಕಳ ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಬೇಕು ಎಂದು ಹರ್ಯಾಣ ಬಿಜೆಪಿ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ಹರಿಯಾಣದ ಸಫಿಡಾನ್ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕುಮಾರ್ ಗೌತಮ್ ಮಂಗಳವಾರ ಮದುವೆಗೆ ಮುನ್ನ ಪೋಷಕರ ಅನುಮತಿ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರಬೇಕು ಎಂದು ಕರೆ ನೀಡಿದ್ದಾರೆ. 'ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದು ಅಗತ್ಯವಾಗಿದೆ ಎಂದು ಹೇಳಿದರು.
ಹರಿಯಾಣ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಾಮ್ ಕುಮಾರ್ ಗೌತಮ್, 'ಹುಡುಗರು ಮತ್ತು ಹುಡುಗಿಯರು ಓಡಿಹೋಗುತ್ತಾರೆ. ಪೋಷಕರು ನಂತರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುವ ಪ್ರಕರಣಗಳಿವೆ. ಸರ್ಕಾರಕ್ಕೆ ನನ್ನ ವಿನಂತಿಯೆಂದರೆ ಮದುವೆಗೆ ಮುನ್ನ ಹುಡುಗರು ಮತ್ತು ಹುಡುಗಿಯರು ಪೋಷಕರ ಅನುಮತಿ ಕಡ್ಡಾಯವಾಗಿರುವ ಕಾನೂನನ್ನು ಮಾಡಬೇಕು" ಎಂದು ಹೇಳಿದರು.
ಇದೇ ವೇಳೆ ಭೂ ಸಂಗ್ರಹಣಾ ದರಗಳ ವಿಷಯವನ್ನು ಸಹ ಅವರು ಎತ್ತಿದರು. ಕೆಲವು ಸ್ಥಳಗಳಲ್ಲಿ ಈ ದರಗಳು ಮತ್ತು ಮಾರುಕಟ್ಟೆ ದರಗಳ ನಡುವೆ ದೊಡ್ಡ ಅಂತರವಿದೆ. ಎಲ್ಲಿ ದೊಡ್ಡ ಅಂತರವಿದೆಯೋ, ಅದನ್ನು ಸರಿಪಡಿಸಬೇಕು, ಅದು ಭ್ರಷ್ಟಾಚಾರವನ್ನು ತಡೆಯಲು ಸಹಾಯ ಮಾಡುತ್ತದೆ" ಎಂದು ಆಡಳಿತಾರೂಢ ಬಿಜೆಪಿ ಶಾಸಕ ಹೇಳಿದರು.
Advertisement