
ವಿಜಯನಗರಂ: ಈ ಹಿಂದೆ ಕರ್ನಾಟಕದಲ್ಲಿ ವ್ಯಾಪಕ ಸುದ್ದಿ ಮಾಡಿದ್ದ ಫ್ರೀ ಬಸ್ ಇದೀಗ ನೆರೆಯ ಆಂಧ್ರ ಪ್ರದೇಶದಲ್ಲೂ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಬಸ್ ನಲ್ಲಿನ ಸೀಟ್ ಗಾಗಿ ನಡೆದ ಜಟಾಪಟಿ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು... ಇದೇ ಆಗಸ್ಟ್ 15ರಿಂದ ಆಂಧ್ರ ಪ್ರದೇಶ ಸರ್ಕಾರ 'ಸ್ತ್ರೀ ಶಕ್ತಿ' ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಆರಂಭಿಸಿದೆ.
ಈ ಯೋಜನೆ ಅಡಿಯಲ್ಲಿ ಪ್ರತಿದಿನ ಸುಮಾರು 18 ರಿಂದ 20 ಲಕ್ಷ ಜನರು ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಎಲ್ಲಾ ಬಸ್‌ಗಳು ಕಿಕ್ಕಿರಿದು ತುಂಬಿ ಪ್ರಯಾಣ ಮಾಡುತ್ತಿವೆ.
ಎಪಿಎಸ್ಆರ್ ಟಿಸಿ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸೀಟ್ ಗಾಗಿ ಪ್ರಯಾಣಿಕರ ನಡುವೆ ಆಗಾಗ್ಗೆ ಗಲಾಟೆಗಳು ಕೂಡ ಸಾಮಾನ್ಯವಾಗಿ ಬಿಟ್ಟಿವೆ.
ಸೀಟ್ ಗಾಗಿ ಚಪ್ಪಲಿಯಲ್ಲಿ ಬಡಿದಾಡಿದ ಮಹಿಳೆ-ಪುರುಷ
ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಸೀಟ್ ಗಾಗಿ ಮಹಿಳೆ ಮತ್ತು ವ್ಯಕ್ತಿಯ ನಡುವೆ ನಡೆದ ಗಲಾಟೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ತಾನು ಹಿಡಿದಿಟ್ಟಿದ್ದ ಸೀಟ್ ನಲ್ಲಿ ಕುಳಿತ್ತಿದ್ದಾನೆ ಎಂದು ಮಹಿಳೆ ಗಲಾಟೆ ಮಾಡಿದ್ದು ಇಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಬಡಿದಾಡಿದ್ದಾರೆ.
ಮಹಿಳೆ ಹೇಳಿದಂತೆ ಬಸ್ ನಿಲ್ದಾಣದಲ್ಲಿರುವಾಗಲೇ ತನಗಾಗಿ ಮತ್ತು ತನ್ನ ಮಗಳಿಗಾಗಿ ಹೊರಗಿನಿಂದ ದುಪ್ಪಟ ಹಾಕಿ ಸೀಟು ಹಿಡಿದಿದ್ದೆ. ಆದರೆ ಬಸ್ ಹತ್ತಿದಾಗ ಈತ ತನ್ನ ದುಪ್ಪಟ್ಟಾ ತೆಗೆದು ಕುಳಿತುಕೊಂಡಿದ್ದ. ಸೀಟ್ ಹಿಡಿದಿದ್ದೇನೆ ಎಂದು ಹೇಳಿದರೂ ಕೇಳದೇ ಬಲವಂತವಾಗಿ ಕುಳಿತುಕೊಂಡ ಎಂದು ಆರೋಪಿಸಿದ್ದಾರೆ.
ಈ ವೇಳೆ ಮಹಿಳೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆತ ಕೂಡ ಗದರಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ನೋಡನೋಡುತ್ತಲೇ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಆತ ಕೂಡ ಹಲ್ಲೆ ಮಾಡಿದ್ದು, ಈ ವೇಳೆ ಮಹಿಳೆ ತನ್ನ ಚಪ್ಪಲಿ ತೆಗೆದುಕೊಂಡು ಹೊಡೆಯಲು ಮುಂದಾಗಿದ್ದು, ಈತ ಕೂಡ ಚಪ್ಪಲಿ ತೆಗೆದು ಹೊಡೆಯಲು ಮುಂದಾಗಿದ್ದಾನೆ.
ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಚುನ್ನಿಯೊಂದಿಗೆ ಸೀಟನ್ನು ತಡೆದಳು. ಆದಾಗ್ಯೂ, ಅವಳು ಬಸ್ ಹತ್ತುವ ಮೊದಲು, ಇನ್ನೊಬ್ಬ ವ್ಯಕ್ತಿ ಬಂದು ಆ ಸೀಟಿನಲ್ಲಿ ಕುಳಿತಳು. ಆದರೆ, ಆ ಮಹಿಳೆ ಅವನನ್ನು ಇದು ನನ್ನ ಸೀಟು ಎಂದು ಕೇಳಿದಳು.. ಆದರೆ ಅವನು, 'ನಾನು ಎದ್ದೇಳುವುದಿಲ್ಲ' ಎಂದು ಉತ್ತರಿಸಿದನು. ಆಗ ಇಬ್ಬರ ನಡುವೆ ಜಗಳ ಶುರುವಾಯಿತು. ಎಲ್ಲಾ ಪ್ರಯಾಣಿಕರು ನೋಡುತ್ತಿರುವಾಗಲೇ ಬಸ್ಸಿನಲ್ಲಿ ಎಷ್ಟು ಬೇಕಾದರೂ ಶಪಿಸಿಕೊಂಡರು.
ಸೀಟ್ ಜಗಳ ಸಾಮಾನ್ಯ
ಆಂಧ್ರ ಪ್ರದೇಶದಲ್ಲಿ ಫ್ರೀ ಬಸ್ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ಗಳಲ್ಲಿ ಸೀಟ್ ಗಾಗಿ ಜಗಳ ಸಾಮಾನ್ಯವಾಗಿ ಬಿಟ್ಟಿವೆ. ಈ ಹಿಂದೆ ಇಬ್ಬರು ಮಹಿಳೆಯರು ಪರಸ್ಪರ ಜಗಳ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮಹಿಳೆ ಸಹ ಪ್ರಯಾಣಿಕನಿಗೆ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ವೈರಲ್ ಆಗಿದೆ.
ಅಧಿಕಾರಿಗಳ ಪ್ರಕಾರ ಫ್ರೀ ಬಸ್ ಯೋಜನೆ ಜಾರಿ ಬಳಿಕ ಆರ್‌ಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹಾಲಿ ಇರುವ ಬಸ್ ಗಳು ಸಾಲುತ್ತಿಲ್ಲ. ಶೀಘ್ರದಲ್ಲೇ ಹೊಸ ಬಸ್‌ಗಳು ಬರುತ್ತವೆ. ಆಗ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ರಾಜ್ಯಾದ್ಯಂತ ಉಚಿತ ಬಸ್ ಯೋಜನೆ ಸುಗಮವಾಗಿ ನಡೆಯುತ್ತಿದ್ದರೂ.. ಅಲ್ಲಲ್ಲಿ ಜಗಳಗಳು ವರದಿಯಾಗುತ್ತಿವೆ ಎಂದರು.
Advertisement