ಪುಟಿನ್ ಭಾರತ ಭೇಟಿ ಬೆನ್ನಲ್ಲೇ; ಭಾರತದೊಂದಿಗೆ ವ್ಯಾಪಾರ ಮಾತುಕತೆಗೆ ತುದಿಗಾಲಲ್ಲಿ ನಿಂತ ಅಮೆರಿಕ; ಮುಂದಿನ ವಾರ...

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಆರಂಭಿಕ ಒಪ್ಪಂದವನ್ನು ಅಂತಿಮಗೊಳಿಸಲು ಉತ್ಸುಕವಾಗಿದೆ.
Donald Trump- Putin- Modi (file photo)
ಟ್ರಂಪ್- ಪುಟಿನ್- ಮೋದಿ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿಯನ್ನು ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದ್ದು, ಈ ಮಧ್ಯೆ ಅಮೆರಿಕ ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಲು ತುದಿಗಾಲಲ್ಲಿ ನಿಂತಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಟ್ಜರ್ ನೇತೃತ್ವದ ಟ್ರಂಪ್ ಆಡಳಿತದ ಸಂಧಾನಕಾರರ ತಂಡ ಮುಂದಿನ ವಾರ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದು, ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಮುಂದುವರಿಸಲಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ, ನಿಯೋಗದ ಭೇಟಿಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಆರಂಭಿಕ ಒಪ್ಪಂದವನ್ನು ಅಂತಿಮಗೊಳಿಸಲು ಉತ್ಸುಕವಾಗಿದೆ. ಭಾರತೀಯ ಸರಕುಗಳ ಮೇಲಿನ ಶೇ. 50 ರಷ್ಟು ಸುಂಕಗಳು ದೇಶದ ಆರ್ಥಿಕತೆಯ ಪ್ರಮುಖ ವಲಯಗಳಿಗೆ ಅಡ್ಡಿಯಾಗಿದ್ದು, ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಪ್ಪಂದ ಅಂತಿಮಗೊಳಿಸಲು ಭಾರತ ಉತ್ಸುಕವಾಗಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

"ಈ ಕ್ಯಾಲೆಂಡರ್ ವರ್ಷದಲ್ಲಿ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ನಾವು ತುಂಬಾ ಆಶಾವಾದ ಮತ್ತು ವಿಶ್ವಾಸ ಹೊಂದಿದ್ದೇವೆ" ಎಂದು ಭಾರತೀಯ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಕಳೆದ ವಾರ ನಡೆದ ಕೈಗಾರಿಕಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. "ಮೊದಲು ಇತ್ಯರ್ಥವಾಗಬೇಕಾದದ್ದು ಪರಸ್ಪರ ಸುಂಕಗಳನ್ನು ಪರಿಹರಿಸಲು ಸಮರ್ಥವಾಗಿರುವ ಚೌಕಟ್ಟಿನ ವ್ಯಾಪಾರ ಒಪ್ಪಂದವಾಗಿದೆ" ಎಂದು ಅವರು ಹೇಳಿದ್ದರು.

ವಾಷಿಂಗ್ಟನ್ ಮತ್ತು ನವದೆಹಲಿಗಳು ಬಹು ಹಂತಗಳಲ್ಲಿ ಜಾರಿಗೆ ತರಲಾಗುವ ವ್ಯಾಪಾರ ತಿಳುವಳಿಕೆಯ ಮೇಲೆ ಕೆಲಸ ಮಾಡುತ್ತಿವೆ. ಮೊದಲ ಹಂತದಲ್ಲಿ ಟ್ರಂಪ್ ಭಾರತದಿಂದ ಉತ್ಪನ್ನಗಳ ಮೇಲೆ ವಿಧಿಸಿರುವ ಪ್ರತೀಕಾರದ ಸುಂಕಗಳನ್ನು ಪರಿಹರಿಸಲಾಗುತ್ತದೆ. ಈ 50 ಪ್ರತಿಶತ ದರದಲ್ಲಿ ಭಾರತವು ರಷ್ಯಾದ ತೈಲ ಖರೀದಿ ಮಾಡಿದ್ದಕ್ಕಾಗಿ ಪ್ರತೀಕಾರವಾಗಿ ಅಮೆರಿಕ ಅಧ್ಯಕ್ಷರು ಅನ್ವಯಿಸಿದ ಶುಲ್ಕಗಳು ಸೇರಿವೆ.

Donald Trump- Putin- Modi (file photo)
LPG ಆಮದು: ಭಾರತ-ಅಮೆರಿಕ ಒಪ್ಪಂದ ತೈಲ ಸಂಸ್ಥೆಗಳಿಗೆ ದುಬಾರಿ; ಗ್ರಾಹಕರ ಮೇಲೆ ಪರಿಣಾಮ? ತಜ್ಞರು ಹೇಳಿದ್ದೇನು?

ಈ ವರ್ಷದ ಆರಂಭದಲ್ಲಿ ಉದ್ವಿಗ್ನತೆ ಭುಗಿಲೆದ್ದ ನಂತರ, ಟ್ರಂಪ್ ಮೋದಿ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿ ಮಾತನಾಡಿದ್ದಾರೆ ಮತ್ತು ರಷ್ಯಾದಿಂದ ಕಚ್ಚಾ ತೈಲ ಆಮದು ಕಡಿಮೆ ಮಾಡುವ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅದು ಸಂಭಾವ್ಯ ಸುಂಕ ಪರಿಹಾರಕ್ಕೆ ಬಾಗಿಲು ತೆರೆದಂತಾಗಿದೆ.

ಕಳೆದ ತಿಂಗಳು ಟ್ರಂಪ್ "ಒಂದು ಹಂತದಲ್ಲಿ" ಭಾರತೀಯ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುವುದಾಗಿ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದಕ್ಕೆ "ಸಾಕಷ್ಟು ಹತ್ತಿರವಾಗುತ್ತಿದ್ದಾರೆ" ಎಂದು ಹೇಳಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳ ತಂಡಗಳು ಹಲವು ಬಾರಿ ಭೇಟಿಯಾಗಿವೆ ಮತ್ತು ನವದೆಹಲಿಯ ಅಧಿಕಾರಿಗಳು ಒಪ್ಪಂದದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕ ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದ್ದು, ಹೆಚ್ಚಿನ ಆಮದು ತೆರಿಗೆಗಳು ಜವಳಿ, ಚರ್ಮ, ಪಾದರಕ್ಷೆಗಳು ಮತ್ತು ಆಭರಣಗಳು ಸೇರಿದಂತೆ ಕಾರ್ಮಿಕ ವಲಯಗಳಿಗೆ ತೀವ್ರವಾದ ಹೊಡೆತ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com