ಬಂಧನ ರೀತಿಯಲ್ಲಿ ಅಕ್ರಮ ವಲಸಿಗರ ಗಡಿಪಾರು ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಕೇಸು ದಾಖಲಿಸಬಹುದು: ಕಾನೂನು ತಜ್ಞರ ಅಭಿಮತ

ಒಡಂಬಡಿಕೆಯ 10 ನೇ ವಿಧಿಯು ಸ್ವಾತಂತ್ರ್ಯದಿಂದ ವಂಚಿತರಾದ ಎಲ್ಲ ವ್ಯಕ್ತಿಗಳನ್ನು ಅಂತರ್ಗತ ಘನತೆಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳುತ್ತದೆ.
ಬಂಧನ ರೀತಿಯಲ್ಲಿ ಅಕ್ರಮ ವಲಸಿಗರ ಗಡಿಪಾರು ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಕೇಸು ದಾಖಲಿಸಬಹುದು: ಕಾನೂನು ತಜ್ಞರ ಅಭಿಮತ
Updated on

ಬೆಂಗಳೂರು: ಅಮೆರಿಕಾದಿಂದ 104 ಮಂದಿ ಭಾರತೀಯ ಅಕ್ರಮ ವಲಸಿಗರನ್ನು ಗಡೀಪಾರು ಮಾಡಿರುವುದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಹೊರತುಪಡಿಸಿ, ಉಳಿದವರನ್ನು ಅಮೆರಿಕಾ ಮಿಲಿಟರಿ ವಿಮಾನದಲ್ಲಿ ಅಮೃತಸರಕ್ಕೆ ಕರೆತಂದ ಎಸಿ -17 ಗ್ಲೋಬ್‌ಮಾಸ್ಟರ್ ನಲ್ಲಿ 40 ಗಂಟೆಗಳ ಪ್ರಯಾಣದ ಸಮಯದಲ್ಲಿ ಸಾಕಷ್ಟು ತೊಂದರೆ ಕಿರುಕುಳ ನೀಡಲಾಗಿದೆ. ಕೈಕೋಳ ತೊಡಿಸಿ ಸರಪಳಿಯಿಂದ ಬಂಧಿಸಿ ಕರೆತರಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಎರಡು ಸ್ನೇಹಪರ ದೇಶಗಳ ನಡುವೆ ಗಡೀಪಾರು ಮಾಡುವ ಬಗ್ಗೆ ದ್ವಿಪಕ್ಷೀಯ ವ್ಯವಸ್ಥೆಗಳಿವೆ. ಇವುಗಳು ಹೆಚ್ಚು ರಾಜತಾಂತ್ರಿಕ ಮಟ್ಟದಲ್ಲಿರುತ್ತವೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ. ಅಕ್ರಮ ವಲಸಿಗರನ್ನು ಸಾಮೂಹಿಕವಾಗಿ ಗಡೀಪಾರು ಮಾಡುವುದು ಅವರ ಘನತೆಯ ಉಲ್ಲಂಘನೆಯಾಗಿದೆ. ಇದು 1976 ರ ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದ (ICCPR) ಮತ್ತು 1984 ರ ಚಿತ್ರಹಿಂಸೆ ಮತ್ತು ಇತರ ಕ್ರೂರ ಅಮಾನವೀಯ ಅಥವಾ ಅವಮಾನಕರವಾಗಿ ಪರಿಗಣಿಸುವುದು ಅಥವಾ ಶಿಕ್ಷೆಯ ವಿರುದ್ಧದ ವಿಶ್ವಸಂಸ್ಥೆಯ ಸಮಾವೇಶಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಕಾನೂನಿನ ವಕೀಲೆ ರೂಪಾಲಿ ಸ್ಯಾಮ್ಯುಯೆಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ಹೇಳಿದರು.

ಬಂಧನ ರೀತಿಯಲ್ಲಿ ಅಕ್ರಮ ವಲಸಿಗರ ಗಡಿಪಾರು ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಕೇಸು ದಾಖಲಿಸಬಹುದು: ಕಾನೂನು ತಜ್ಞರ ಅಭಿಮತ
ಅಕ್ರಮ ವಲಸಿಗರ ವಾಪಸಾತಿ: ಕೈಗೆ ಕೋಳ, ಕಾಲಿಗೆ ಬೇಡಿ..; ಅಮೆರಿಕಾದಿಂದ ಭಾರತಕ್ಕೆ ಬಂದವರ ಕಣ್ಣೀರ ಕಥೆ ಇದು...!

ವಿದೇಶಗಳು ತಮ್ಮ ನೆಲದಲ್ಲಿ ತೆಗೆದುಕೊಳ್ಳುವ ಕ್ರಮಗಳ ಮೇಲೆ ಭಾರತಕ್ಕೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲದಿದ್ದರೂ, ICCPR ನ 41 ನೇ ವಿಧಿಯ ಅಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಅಂತರ-ದೇಶ ವಿವಾದ ಪ್ರಕ್ರಿಯೆಯ ಅಡಿಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ ಮುಂದೆ ದೂರು ನೀಡಲು ಸಾಧ್ಯವಾಗಬಹುದು ಎಂದು ಅವರು ಹೇಳಿದರು. ಆದಾಗ್ಯೂ, ಈ ಪ್ರಕ್ರಿಯೆಗೆ ಒಂದು ಅಡಚಣೆಯೆಂದರೆ, ಭಾರತವು ಹೆಚ್ ಆರ್ ಸಮಿತಿಯಿಂದ ಅಂತಹ ರೀತಿಯ ಪರೀಕ್ಷೆಗೆ ಒಳಗಾಗಿಲ್ಲ, ಇದು ನ್ಯಾಯವ್ಯಾಪ್ತಿಯನ್ನು ನಿರಾಕರಿಸಲು ಒಂದು ಆಧಾರವಾಗಬಹುದು ಎಂದು ಸ್ಯಾಮ್ಯುಯೆಲ್ ಎಚ್ಚರಿಸಿದ್ದಾರೆ.

ಭಾರತೀಯ ಪೊಲೀಸ್ ಅಧಿಕಾರಿಗಳು ಮಾಸ್ಕ್ ಧರಿಸಿ, ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ ವಲಸಿಗರನ್ನು ಕರೆಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಸುರಕ್ಷಿತ, ಕ್ರಮಬದ್ಧವಾದ ವಿದೇಶ ವಲಸೆಗಾಗಿ ಹೊಸ ಕಾನೂನನ್ನು ಯೋಜಿಸುತ್ತಿದೆ. ICCPR ನ 7 ನೇ ವಿಧಿಯು "ಯಾರನ್ನೂ ಚಿತ್ರಹಿಂಸೆ ಅಥವಾ ಕ್ರೌರ್ಯ, ಅಮಾನವೀಯವಾಗಿ ನಡೆಸಿಕೊಳ್ಳುವುದು ಅಥವಾ ಶಿಕ್ಷೆಗೆ ಒಳಪಡಿಸಬಾರದು ಎಂದು ಹೇಳುತ್ತದೆ.

ಬಂಧನ ರೀತಿಯಲ್ಲಿ ಅಕ್ರಮ ವಲಸಿಗರ ಗಡಿಪಾರು ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಕೇಸು ದಾಖಲಿಸಬಹುದು: ಕಾನೂನು ತಜ್ಞರ ಅಭಿಮತ
ಅಮೆರಿಕದಿಂದ ಗಡೀಪಾರು: ಅಮೃತಸರಕ್ಕೆ ಬಂದಿಳಿದ 104 ಭಾರತೀಯರು!

ಒಡಂಬಡಿಕೆಯ 10 ನೇ ವಿಧಿಯು ಸ್ವಾತಂತ್ರ್ಯದಿಂದ ವಂಚಿತರಾದ ಎಲ್ಲ ವ್ಯಕ್ತಿಗಳನ್ನು ಅಂತರ್ಗತ ಘನತೆಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳುತ್ತದೆ.

ಸುಪ್ರೀಂ ಕೋರ್ಟ್ ಪ್ರಕಾರ, ಕೈಕೋಳ ಹಾಕುವುದು, ತೀವ್ರ ಸಂದರ್ಭಗಳಲ್ಲಿ ಹೊರತುಪಡಿಸಿ, ಮಾನವ ಘನತೆಗೆ ವಿರುದ್ಧವಾಗಿದೆ ಮತ್ತು ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಕೀಲರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com