''ದೊಡ್ಡ ಆತಂಕ ನಿವಾರಣೆ, ಮೋದಿ ಉತ್ತಮ ಸಮಾಲೋಚಕ'': ಮೊದಲ ಬಾರಿಗೆ ಪ್ರಧಾನಿ ಹೊಗಳಿದ ಕಾಂಗ್ರೆಸ್ ಸಂಸದ Shashi Tharoor

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿದ್ದು, ಈ ವೇಳೆ ಹಲವು ವಿಷಯಗಳ ಬಗ್ಗೆ ಮಾತುಕತೆಯಾಗಿದೆ. ಅಂತೆಯೇ ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಕೂಡ ಆಗಿವೆ.
Shashi Tharoor On PM Modi-Donald Trump Meet
ಶಶಿತರೂರ್ ಮತ್ತು ಪ್ರಧಾನಿ ಮೋದಿ-ಟ್ರಂಪ್
Updated on

ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಚಾಲ್ತಿಯಲ್ಲಿರುವಂತೆಯೇ ಅಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಕಾಂಗ್ರೆಸ್ ಸಂಸದ ಶಶಿತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ನಡೆಯನ್ನು ಶ್ಲಾಘಿಸಿದ್ದಾರೆ.

ಹೌದು.. ಮೂರು ದಿನಗಳ ಫ್ರಾನ್ಸ್​ ಭೇಟಿಯ ನಂತರ, ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷರ ಭವನವಾದ ಶ್ವೇವತ ಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ರಕ್ಷಣೆ, ವ್ಯಾಪಾರ ಮತ್ತು ವಲಸೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿದ್ದು, ಈ ವೇಳೆ ಹಲವು ವಿಷಯಗಳ ಬಗ್ಗೆ ಮಾತುಕತೆಯಾಗಿದೆ. ಅಂತೆಯೇ ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಕೂಡ ಆಗಿವೆ.

ಇದಾದ ನಂತರ ಇಬ್ಬರು ನಾಯಕರು ಸಹ ಪತ್ರಿಕಾಗೋಷ್ಠಿ ನಡೆಸಿ ಹಲವಾರು ವಿಷಯಗಳ ಕುರಿತು ಪ್ರತಿಕ್ರಿಯಿಸಿದರು. ಇನ್ನು ಪ್ರಧಾನಿ ಮೋದಿ ಭೇಟಿಗೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಅವರು ಪರಸ್ಪರ ಸುಂಕಗಳನ್ನು ಘೋಷಿಸಿದರು. ಅರ್ಥಾತ್​​ ಭಾರತಕ್ಕೆ ಹೆಚ್ಚು ಸುಂಕ ವಿಧಿಸುವುದಿಲ್ಲ. ಆದರೇ ಭಾರತ ಎಷ್ಟು ಸುಂಕ ವಿಧಿಸುತ್ತೊ ಅಷ್ಟೇ ಸುಂಕವನ್ನು ನಾವು ಸಹ ವಿಧಿಸುತ್ತೇವೆ ಎಂದು ಘೋಷಿಸಿದರು. ಇದು ಹೆಚ್ಚುತ್ತಿರುವ ಸುಂಕ (ಟ್ಯಾಕ್ಸ್​) ಯುದ್ದದ ನಡುವೆ ಮಹತ್ವ ಪಡೆದು ಕೊಂಡಿದೆ.

Shashi Tharoor On PM Modi-Donald Trump Meet
Bangladesh ವಿಚಾರ ಮೋದಿಗೆ ಬಿಡುತ್ತೇನೆ: ಮಹಮದ್ ಯೂನಿಸ್ ಸರ್ಕಾರಕ್ಕೆ Donald Trump ಆಘಾತ!

ಶಶಿ ತರೂರ್ ಮೆಚ್ಚುಗೆ

ಈ ಬಗ್ಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು, ಮೋದಿ ರಾಜತಾಂತ್ರಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿಯವರೆಗೆ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಪ್ರೆಸ್‌ ಮೀಟ್‌ ಅನ್ನು ನೋಡಿದ್ದು, ತುಂಬಾ ಉತ್ತಮವಾಗಿದೆ. ನಮಗೆಲ್ಲರಿಗೂ ಇದ್ದ ಕೆಲವು ದೊಡ್ಡ ಆತಂಕಗಳನ್ನು ಪರಿಹರಿಸಲಾಗಿದೆ. ಎಲ್ಲ ವಿಷಯಗಳ ಚರ್ಚೆಯನ್ನು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮುಕ್ತಾಯಗೊಳಿಸಲು ಗಂಭೀರ ಮಾತುಕತೆ ನಡೆಸಿದ್ದಾರೆ. ಇನ್ನೂ ರಕ್ಷಣಾ ರಂಗದಲ್ಲಿ ನಮಗೆ F-35 ಸ್ಟೆಲ್ತ್ ವಿಮಾನವನ್ನು ಮಾರಾಟ ಮಾಡುವ ಬದ್ಧತೆ ಕೂಡ ಪ್ರಮುಖವಾಗಿದ್ದು, ಅದು ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಭಾರತಕ್ಕೆ ಶಕ್ತಿ ತುಂಬಲಿದೆ. ವಲಸಿಗರ ವಿಚಾರ ಬಿಟ್ಟು ಉಳಿದದ್ದೆಲ್ಲಾ ನಮ್ಮ ನಿರೀಕ್ಷೆಯಂತೆ ಆಗಿದೆ ಎಂದು ಶಶಿ ತರೂರು ಮೆಚ್ಚುಗೆಯ ಮಾತುಗಳನ್ನಾಡಿದರು.

ಅತೀ ದೊಡ್ಡ ಅತಂಕ ನಿವಾರಣೆ

ಅಂತೆಯೇ 'ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯಿಂದ ನಾವು ಪಡೆಯ ಬಹುದಾದ ಎಲ್ಲ ನಿರೀಕ್ಷೆಗಳು ಸಹ ಈಡೇರಿವೆ ಎಂದಿರುವ ಅವರು, ಅಕ್ರಮ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸುವ ವಿಧಾನವನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಮಗೆಲ್ಲರಿಗೂ ಇದ್ದ ಕೆಲವು ದೊಡ್ಡ ಆತಂಕಗಳನ್ನು ಪರಿಹರಿಸಲಾಗಿದೆ. ಎಲ್ಲ ವಿಷಯಗಳ ಚರ್ಚೆಯನ್ನು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮುಕ್ತಾಯಗೊಳಿಸಲು ಗಂಭೀರ ಮಾತುಕತೆ ನಡೆಸಿದ್ದಾರೆ. ಇನ್ನೂ ರಕ್ಷಣಾ ರಂಗದಲ್ಲಿ ನಮಗೆ F-35 ಸ್ಟೆಲ್ತ್ ವಿಮಾನವನ್ನು ಮಾರಾಟ ಮಾಡುವ ಬದ್ಧತೆ ಕೂಡ ಪ್ರಮುಖವಾಗಿದ್ದು, ಅದು ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಭಾರತಕ್ಕೆ ಶಕ್ತಿ ತುಂಬಲಿದೆ. ವಲಸಿಗರ ವಿಚಾರ ಬಿಟ್ಟು ಉಳಿದದ್ದೆಲ್ಲಾ ನಮ್ಮ ನಿರೀಕ್ಷೆಯಂತೆ ಆಗಿದೆ ಎಂದು ಶಶಿ ತರೂರ್ ಹೇಳಿದ್ದಾರೆ.

ಅಮಾಯಕರು, ದಾರಿ ತಪ್ಪಿಸಿದ್ದಾರೆ

ಅಲ್ಲದೆ "ಯಾರಾದರೂ ಬೇರೆ ದೇಶವನ್ನು ಅಕ್ರಮವಾಗಿ ಪ್ರವೇಶಿಸಿದರೆ, ಅವರಿಗೆ ಆ ದೇಶದಲ್ಲಿ ಇರಲು ಯಾವುದೇ ಹಕ್ಕಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದು, "ಅವರನ್ನು ವಾಪಸ್ ಕಳುಹಿಸುವ ವಿಧಾನ ಮಾತ್ರ ಕೊರತೆಯಾಗಿತ್ತು. ಇಲ್ಲದಿದ್ದರೆ, ಅವರ ನಿಲುವು ಸಂಪೂರ್ಣವಾಗಿ ಸರಿಯಾಗಿತ್ತು. ಇವರು ದಾರಿ ತಪ್ಪಿದ ಯುವಕರು, ಅವರನ್ನು ಅಕ್ರಮವಾಗಿ ವಲಸೆ ಹೋಗಲು ಪ್ರೋತ್ಸಾಹಿಸಲಾಗಿದೆ ಮತ್ತು ಪ್ರೇರೇಪಿಸಲಾಗಿದೆ. ಅವರು ಭಾರತೀಯ ಪ್ರಜೆಗಳಾಗಿದ್ದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು" ಎಂದು ತರೂರ್ ಹೇಳಿದರು.

ಮೋದಿ ಉತ್ತಮ ಸಮಾಲೋಚಕ

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರನ್ನು ತಮಗಿಂತ ಉತ್ತಮ ಸಮಾಲೋಚಕ ಎಂದು ಕರೆಯುವುದು ಆಶ್ಚರ್ಯಕರವಾಗಿದೆ. ಏಕೆಂದರೆ, ಒಪ್ಪಂದದ ಕಲೆಯಲ್ಲಿ ಟ್ರಂಪ್ ತಮ್ಮ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ ನಿನ್ನೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಸೇರಿದಂತೆ ಅವರ ಅಭಿಮಾನಿಗಳು ಟ್ರಂಪ್ ವಿಶ್ವದ ಶ್ರೇಷ್ಠ ಸಮಾಲೋಚಕ ಎಂದು ಹೇಳಿದ್ದರು. ಈಗ, ಸ್ವತಃ ಟ್ರಂಪ್ ಅವರೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಉತ್ತಮ ಸಮಾಲೋಚಕ ಎಂದು ಶ್ಲಾಘಿಸಿದ್ದಾರೆ. ಪ್ರಶಂಸಾರ್ಹ ವಿಷಯಗಳನ್ನು ಹೇಳುವುದಕ್ಕೆ ಹೆಸರುವಾಸಿಯಲ್ಲದ ವ್ಯಕ್ತಿಯಿಂದ ನಾವು ಹೆಚ್ಚಿನ ಮಟ್ಟದ ಹೊಗಳಿಕೆಯನ್ನು ನೋಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದು ಒಳ್ಳೆಯ ಸುದ್ದಿ ಎಂದು ತರೂರ್ ಮೆಚ್ಚುಗೆ ಸೂಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com