Hindenburg Research: ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಸಂಸ್ಥೆ ಕಾರ್ಯಾಚರಣೆ ಸ್ಥಗಿತ; ಕೈಗೆತ್ತಿಕೊಂಡಿದ್ದ ಎಲ್ಲಾ ಕೆಲಸ ಪೂರ್ಣ ಎಂದ ಸಂಸ್ಥಾಪಕ

2017ರಲ್ಲಿ ಸುಮಾರು 10 ಸಿಬ್ಬಂದಿಯೊಂದಿಗೆ ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಹಿಂಡನ್‌ಬರ್ಗ್‌, ಕಡಿಮೆ ಅವಧಿಯಲ್ಲಿ ಭಾರತ ಅದಾನಿ ಗ್ರೂಪ್‌ ಸೇರಿದಂತೆ ಜಗತ್ತಿನ ದೈತ್ಯ ಕಾರ್ಪೋರೇಟ್ ಕಂಪನಿಗಳ ಲೆಕ್ಕಪತ್ರ ದೋಷಗಳು ಸೇರಿದಂತೆ ಹಲವು ಅಕ್ರಮಗಳನ್ನು ಬಯಲಿಗೆಳೆದಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಅದಾನಿ ಸೇರಿದಂತೆ ಹಲವು ಕಾರ್ಪೋರೇಟ್ ದೈತ್ಯರ ಅಕ್ರಮಗಳನ್ನು ಬಯಲಿಗೆಳೆದಿದ್ದ ಅಮೆರಿಕದ ಶಾರ್ಟ್ ಸೆಲ್ಲರ್‌ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಅಮೆರಿಕ ಮೂಲದ ಸಣ್ಣ ಮಾರಾಟ ಘಟಕವಾಗಿರುವ ಹಿಂಡನ್​ ಬರ್ಗ್​ ಅನ್ನು ವಿಸರ್ಜಿಸಲಾಗುತ್ತಿದ್ದು, ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಯಾವುದೇ ಬೆದರಿಕೆ, ಯಾವುದೇ ಆರೋಗ್ಯ ಸಮಸ್ಯೆ ಮತ್ತು ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಯೂ ಇಲ್ಲ ಎಂದು ಸಂಸ್ಥಾಪಕ ನಾಟೆ ಆ್ಯಂಡರ್ಸನ್ ಘೋಷಿಸಿದ್ದಾರೆ.

ಸಂಸ್ಥೆ ಮುಚ್ಚುವ ಕುರಿತು ತಮ್ಮ ವೆಬ್​ಸೈಟ್​ನಲ್ಲಿ ಪೋಸ್ಟ್​ ಮಾಡಿರುವ ಆ್ಯಂಡರ್ಸನ್​, ಜಗತ್ತಿನಲ್ಲಿ ಅನೇಕ ವಿಚಾರಗಳನ್ನು ಹಾಗೂ ನಾನು ಕಾಳಜಿ ವಹಿಸುವ ವ್ಯಕ್ತಿಗಳನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನನ್ನ ಜೀವನದಲ್ಲಿ ಹಿಂಡನ್​ ಬರ್ಗ್​​ ಅಧ್ಯಯನದ ಬಗ್ಗೆ ತಿಳಿದಿದೆ. ಆದರೆ, ಕೇಂದ್ರಿಕೃತ ವಿಚಾರಗಳು ಇವುಗಳನ್ನು ವ್ಯಾಖ್ಯಾನಿಸುವುದಿಲ್ಲ, ನನ್ನ ಕುಟುಂಬ ಹಾಗೂ ತಂಡದೊಂದಿಗೆ ಕಳೆದ ವರ್ಷಾಂತ್ಯದಲ್ಲಿಯೇ ಈ ಕುರಿತು ನಾನು ಚರ್ಚಿಸಿದ್ದೆ. ನಾನು ಯೋಚಿಸಿರುವ ಕೆಲವು ವಿಚಾರಗಳು ಒಂದು ಹಂತಕ್ಕೆ ಬಂದ ಮೇಲೆ ಇದನ್ನು ಮುಚ್ಚುವುದಕ್ಕೆ ನಿರ್ಧರಿಸಿದ್ದೆ. ಅಂತಿಮ ವಿಚಾರಗಳು ಪೂರ್ಣಗೊಂಡಿದ್ದು, ನಿಯಾಮವಳಿಗಳಂತೆ ಇಂದು ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರು ಮುಂದೆ ತಮ್ಮಿಷ್ಟದಂತೆ ಎಲ್ಲಿರಬೇಕು ಎಂದು ನಿರ್ಧರಿಸುತ್ತಾರೆಯೋ ಅದಕ್ಕೆ ಸಹಕಾರ ನೀಡಿ ಗಮನ ಹರಿಸಲಾಗುವುದು. ಕೆಲವರು ತಮ್ಮದೇ ಸ್ವಂತ ಸಂಶೋಧನಾ ಘಟನೆ ಸ್ಥಾಪಿಸಬೇಕು ಎಂದಿದ್ದಾರೆ. ಇದರಲ್ಲಿ ನಾನು ವೈಯಕ್ತಿಕವಾಗಿ ತೊಡಗಿಕೊಳ್ಳದಿದ್ದರೂ ದೃಢವಾಗಿ ಮತ್ತು ಸಾರ್ವಜನಿಕವಾಗಿ ಅವರಿಗೆ ಪ್ರೋತ್ಸಾಹ ನೀಡುತ್ತೇನೆ. ಮತ್ತೆ ಕೆಲವರು ಸ್ವತಂತ್ರ ಏಜೆಂಟ್​ ಆಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಅವರು ಅಗತ್ಯವಿದ್ದಲ್ಲಿ ಮುಕ್ತವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

2017ರಲ್ಲಿ ಸುಮಾರು 10 ಸಿಬ್ಬಂದಿಯೊಂದಿಗೆ ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಹಿಂಡನ್‌ಬರ್ಗ್‌, ಕಡಿಮೆ ಅವಧಿಯಲ್ಲಿ ಭಾರತ ಅದಾನಿ ಗ್ರೂಪ್‌ ಸೇರಿದಂತೆ ಜಗತ್ತಿನ ದೈತ್ಯ ಕಾರ್ಪೋರೇಟ್ ಕಂಪನಿಗಳ ಲೆಕ್ಕಪತ್ರ ದೋಷಗಳು ಸೇರಿದಂತೆ ಹಲವು ಅಕ್ರಮಗಳನ್ನು ಬಯಲಿಗೆಳೆದಿತ್ತು. 2023ರಲ್ಲಿ ಭಾರತೀಯ ಸಂಘಟಿತ ಸಂಸ್ಥೆಗಳ ವಿರುದ್ಧ ಹಿಂಡನ್‌ಬರ್ಗ್ ವರದಿ ಪ್ರಕಟಿಸಿತ್ತು. ಅದಾನಿ ಗ್ರೂಪ್ ಕಡಲಾಚೆಯ ತೆರಿಗೆಳನ್ನು ಅಸಮರ್ಪಕವಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿತ್ತು. ಆದರೆ, ಈ ಆರೋಪವನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು.

ಸಂಗ್ರಹ ಚಿತ್ರ
Gautam Adani ಗೆ ಸೇರಿದ 5 ಸ್ವಿಸ್ ಬ್ಯಾಂಕ್ ಖಾತೆ ಫ್ರೀಜ್, 310 ಮಿಲಿಯನ್ ಡಾಲರ್ ಸ್ಥಗಿತ: Hindenburg ಮತ್ತೊಂದು ವರದಿ!

ಅದಾನಿ ಗ್ರೂಪ್‌ ತನ್ನ ಕಂಪನಿಯ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಲು ಬಳಸಿದ ಮಾರಿಷಸ್‌ ನಿಧಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಪಾಲು ಹೊಂದಿದ್ದಾರೆ ಎಂದು ಹಿಂಡನ್‌ಬರ್ಗ್ 2024ರಲ್ಲಿ ಆರೋಪ ಮಾಡಿತ್ತು. ಇದು ಷೇರುಪೇಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಇದರಿಂದಾಗಿ ಅದಾನಿ ಗ್ರೂಪ್‌ ಷೇರುಗಳಲ್ಲಿ ಭಾರೀ ಕುಸಿತ ಉಂಟಾಗಿತ್ತು.

ಈ ನಡುವೆ 2024ರ ನವೆಂಬರ್‌ನಲ್ಲಿ ಬಹುಕೋಟಿ ಡಾಲರ್‌ ಲಂಚ ಮತ್ತು ವಂಚನೆ ಆರೋಪಿಸಿ ನ್ಯೂಯಾರ್ಕ್‌ನಲ್ಲಿ ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ ಸೇರಿದಂತೆ ಹಲವರ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ ಎಂದು ಯುಎಸ್‌ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದರು.

ಭಾರತಕ್ಕೆ ಸಂಬಂಧಪಟ್ಟಂತೆ ಅದಾನಿ ವಿರುದ್ದ ಹಿಂಡನ್‌ಬರ್ಗ್ ಮಾಡಿದ್ದ ಎರಡು ಪ್ರಮುಖ ಆರೋಪಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದಾನಿ ಕಂಪನಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಭಾರತದಲ್ಲಿ ಆಡಳಿತ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಒಕ್ಕೂಟ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ನಡುವೆ ತೀವ್ರ ತಿಕ್ಕಾಟ ನಡೆದಿತ್ತು.

ಬಿಜೆಪಿ ಮತ್ತು ಸಂಘ ಪರಿವಾರದ ಹಿಂದುತ್ವ ಸಂಘಟನೆಗಳು ಆದಾನಿ ವಿರುದ್ದ ಹಿಂಡನ್‌ಬರ್ಗ್‌ ಆರೋಪ ಭಾರತ ವಿರೋಧಿ ಕೃತ್ಯ ಎಂದು ಬಣ್ಣಿಸಿತ್ತು. ಹಿಂಡನ್‌ಬರ್ಗ್ ಅನ್ನು ಬೆಂಬಲಿಸಿದ್ದ ಪ್ರತಿಪಕ್ಷಗಳ ವಿರುದ್ದ ದೇಶದ್ರೋಹದ ಆರೋಪ ಮಾಡಿತ್ತು.

ಸಂಗ್ರಹ ಚಿತ್ರ
Hindenburg Research ವಿಸರ್ಜನೆ! ಯಾರು ಈ Nathan Anderson? ಕಾರಣವೇನು?

ಹಿಂಡನ್‌ಬರ್ಗ್ ಜಾಗತಿಕ ಮಟ್ಟದಲ್ಲಿ ಬಯಲಿಗೆಳೆದ ಕಾರ್ಪೋರೇಟ್ ಕಂಪನಿಗಳ ಅಕ್ರಮಗಳಲ್ಲಿ ಎಲೆಕ್ಟ್ರಿಕ್ ಟ್ರಕ್ ತಯಾರಕ ಕಂಪನಿ ನಿಕೋಲಾ ವಿರುದ್ಧದ ಪ್ರಕರಣವೂ ಒಂದು. ನಿಕೋಲಾ ತನ್ನ ತಂತ್ರಜ್ಞಾನದ ಸ್ಥಿತಿಯ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು 2020ರಲ್ಲಿ ಹಿಂಡನ್‌ಬರ್ಗ್ ಆರೋಪಿಸಿತ್ತು. ಪರಿಣಾಮ, ನಿಕೋಲಾ ಕಂಪನಿಯ ಮೇಲೆ ಕ್ರಿಮಿನಲ್ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ಕಂಪನಿಯು ಯುಎಸ್‌ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ 125 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿತ್ತು. ಇದು ಹಿಂಡನ್‌ಬರ್ಗ್‌ನ ಯಶಸ್ವಿ ವರದಿ ಎಂದು ಪರಿಗಣಿಸಲಾಗಿದೆ.

ಹಿಂಡೆನ್‌ಬರ್ಗ್ ವರದಿಯು ವಂಚನೆ ಆರೋಪ ಹೊರಿಸಿದ ನಂತರ ಅದಾನಿ ಗ್ರೂಪ್ 2023 ರಲ್ಲಿ ತನ್ನ ಮಾರುಕಟ್ಟೆ ಮೌಲ್ಯದಿಂದ 150 ಬಿಲಿಯನ್ ಡಾಲರ್ ಕಳೆದುಕೊಂಡಿತ್ತು. ಬಹಳ ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ದೈತ್ಯ ಕಾರ್ಪೋರೇಟ್ ಕಂಪನಿಗಳ ಅಕ್ರಮ ಬಯಲಿಗೆಳೆದು, ಅವರನ್ನು ಹಿಂಡನ್‌ಬರ್ಗ್ ಎದುರು ಹಾಕಿಕೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com