Sivaganga custodial death: 'ಅಮ್ಮಾ ಕ್ಷಮಿಸಿ'; ಸಂತ್ರಸ್ಥನ ತಾಯಿಗೆ ತಮಿಳುನಾಡು ಸಿಎಂ MK Stalin

ತಮಿಳುನಾಡಿನ ಶಿವಗಂಗಾದಲ್ಲಿ 29 ವರ್ಷದ ವ್ಯಕ್ತಿಯ ಕಸ್ಟಡಿ ಸಾವು "ಸಮರ್ಥನೀಯವಲ್ಲ'' ಮತ್ತು ಯಾರಿಗೂ ಅಂತಹ ಗತಿ ಬರಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ.
MK Stalin
ಎಂಕೆ ಸ್ಟಾಲಿನ್
Updated on

ಚೆನ್ನೈ: ತಮಿಳುನಾಡಿನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಪೊಲೀಸ್ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥನ ತಾಯಿಗೆ ತಮಿಳುನಾಡು ಸಿಎಂ MK ಸ್ಟಾಲಿನ್ ಕ್ಷಮೆ ಕೋರಿದ್ದಾರೆ.

ತಮಿಳುನಾಡಿನ ಶಿವಗಂಗಾದಲ್ಲಿ 29 ವರ್ಷದ ವ್ಯಕ್ತಿಯ ಕಸ್ಟಡಿ ಸಾವು "ಸಮರ್ಥನೀಯವಲ್ಲ'' ಮತ್ತು ಯಾರಿಗೂ ಅಂತಹ ಗತಿ ಬರಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸ್ಟಾಲಿನ್, 'ಸರ್ಕಾರ ಸಂತ್ರಸ್ತ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತದೆ. ಮೃತ ಅಜಿತ್‌ಕುಮಾರ್ ಅವರ ತಾಯಿಯೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ, ಸ್ಟಾಲಿನ್ ಕುಟುಂಬಸ್ಥರನ್ನು ಧೈರ್ಯವಾಗಿರುವಂತೆ ಕೇಳಿಕೊಂಡರು.

"ನನಗೆ ತುಂಬಾ ವಿಷಾದವಿದೆ, ಕ್ರಮ ಕೈಗೊಳ್ಳಲು ಅಧಿಕಾರಿಗಳು ಕೇಳಿದ್ದೇನೆ. ಗಂಭೀರ ಕ್ರಮ ಕೈಗೊಳ್ಳಿ. ಸದೃಢವಾಗಿರಿ" ಎಂದು ಸ್ಟಾಲಿನ್ ಹೇಳಿದರು. ಅಲ್ಲದೆ ಸ್ಟಾಲಿನ್ ಸಂತ್ರಸ್ಥ ಕುಟುಂಬದೊಂದಿಗೆ ದೂರವಾಣಿ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

MK Stalin
IIT Bombay: ವಿದ್ಯಾರ್ಥಿ ಸೋಗಿನಲ್ಲಿ 14 ದಿನ ಉಳಿದಿದ್ದ ಮಂಗಳೂರು ಯುವಕ Bilal Ahmad Teli; 21 ಇಮೇಲ್ ಐಡಿ ಸೃಷ್ಟಿ!

ಸಂತ್ರಸ್ತೆಯ ಸಹೋದರನೊಂದಿಗೆ ಮಾತನಾಡುವಾಗ, ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸ್ಟಾಲಿನ್ ಹೇಳಿದರು. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪೊಲೀಸರ ಬಂಧಿಸಲಾಗಿದ್ದು, ಡಿಎಸ್‌ಪಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಎಸ್‌ಪಿಯನ್ನು ಕಡ್ಡಾಯವಾಗಿ ರಜೆ ಮೇಲೆ ಕಳಿಸಲಾಗಿದೆ. ಆರೋಪಿಗಳಿಗೆ ನಾವು ಸರಿಯಾದ ಶಿಕ್ಷೆಯನ್ನು ಖಚಿತಪಡಿಸುತ್ತೇವೆ ಎಂದು ಅವರು ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬರುತ್ತಿದೆ.

"(ಶಿವಗಂಗೆಯಲ್ಲಿ) ತಿರುಪ್ಪುವನಂ ಯುವಕರು ಎದುರಿಸಿದ ಕ್ರೌರ್ಯ ಯಾರಿಗೂ ಸಂಭವಿಸಬಾರದು. ಇದು ಸಮರ್ಥನೀಯವಲ್ಲದ ತಪ್ಪು. ಈ ಸರ್ಕಾರವು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದವರಿಗೆ (ಪೊಲೀಸರಿಗೆ) ಶಿಕ್ಷೆಯನ್ನು ಖಚಿತಪಡಿಸುತ್ತದೆ ಮತ್ತು ಕುಟುಂಬದ ಬೆಂಬಲಕ್ಕೆ ನಿಲ್ಲುತ್ತದೆ" ಎಂದು ಸ್ಟಾಲಿನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com