ಅಪ್ರಾಪ್ತ ವಿದ್ಯಾರ್ಥಿ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ; 40 ವರ್ಷದ ಶಿಕ್ಷಕಿ ಬಂಧನ

2023ರ ಡಿಸೆಂಬರ್‌ನ‌ಲ್ಲಿ ಶಾಲೆಯ ವಾರ್ಷಿಕೋತ್ಸವಕ್ಕಾಗಿ ನೃತ್ಯ ಪ್ರದರ್ಶಿಸಲು ಗುಂಪನ್ನು ರಚಿಸಲು ಆಯೋಜಿಸಲಾದ ಸಭೆಗಳ ಸಮಯದಲ್ಲಿ ಆರೋಪಿ ವಿದ್ಯಾರ್ಥಿ ಬಗ್ಗೆ ಅನುಚಿತ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
Representative image
ಪ್ರಾತಿನಿಧಿಕ ಚಿತ್ರ
Updated on

ಮುಂಬೈ: 16 ವರ್ಷದ ವಿದ್ಯಾರ್ಥಿ ಮೇಲೆ ಹಲವು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಗರದ ಪ್ರತಿಷ್ಠಿತ ಶಾಲೆಯ 40 ವರ್ಷದ ಶಿಕ್ಷಕಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಆರೋಪಿ ಶಿಕ್ಷಕಿಗೆ ವಿವಾಹಿತೆಯಾಗಿದ್ದು, ಆಕೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಆರೋಪ ಹೊರಿಸಲಾಗಿದೆ. ಪ್ರಕರಣದ ಬಗ್ಗೆ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು NDTV ವರದಿ ಮಾಡಿದೆ.

ಶಿಕ್ಷಕಿ ಹನ್ನೊಂದನೇ ತರಗತಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಸಂತ್ರಸ್ತ ವಿದ್ಯಾರ್ಥಿ ಕೂಡ 11 ತರಗತಿ ಓದುತ್ತಿದ್ದ. 2023ರ ಡಿಸೆಂಬರ್‌ನ‌ಲ್ಲಿ ಶಾಲೆಯ ವಾರ್ಷಿಕೋತ್ಸವಕ್ಕಾಗಿ ನೃತ್ಯ ಪ್ರದರ್ಶಿಸಲು ಗುಂಪನ್ನು ರಚಿಸಲು ಆಯೋಜಿಸಲಾದ ಸಭೆಗಳ ಸಮಯದಲ್ಲಿ ಆರೋಪಿ ವಿದ್ಯಾರ್ಥಿ ಬಗ್ಗೆ ಅನುಚಿತ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು ಎಂದು ಪೊಲೀಸರು NDTV ಗೆ ತಿಳಿಸಿದ್ದಾರೆ. 2024ರ ಜನವರಿಯಲ್ಲಿ ಆಕೆ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಿದ್ಯಾರ್ಥಿ ಆಕೆಯಿಂದ ದೂರ ಉಳಿಯಲು ಪ್ರಾರಂಭಿಸಿದಾಗ, ಶಿಕ್ಷಕಿ ಶಾಲೆಯಿಂದ ಹೊರಗಿನ ತನ್ನ ಸ್ನೇಹಿತೆಯ ಸಹಾಯ ಕೋರಿದ್ದಾರೆ. ಆಕೆ ಅಪ್ರಾಪ್ತನನ್ನು ಸಂಪರ್ಕಿಸಿ ಅಂತಹ ಸಂಬಂಧಗಳು ಸಾಮಾನ್ಯ ಎಂದು ಹೇಳುವ ಮೂಲಕ ಅವನನ್ನು ಮನವೊಲಿಸಲು ಪ್ರಯತ್ನಿಸಿದ್ದಾಳೆ. ಆತ ಮತ್ತು ಶಿಕ್ಷಕಿ 'ಮೇಡ್ ಫಾರ್ ಈಚ್ ಅದರ್' ಎಂದು ವಿದ್ಯಾರ್ಥಿಗೆ ಹೇಳಿದ್ದಾಳೆ. ವಯಸ್ಸಾದ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು 'ಸಾಕಷ್ಟು ಸಾಮಾನ್ಯವಾಗಿದೆ' ಎಂದು ಸ್ನೇಹಿತೆ ಆತನಿಗೆ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಸ್ನೇಹಿತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

Representative image
ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; 28 ವರ್ಷದ ನೃತ್ಯ ಶಿಕ್ಷಕನ ಬಂಧನ

ನಂತರ ವಿದ್ಯಾರ್ಥಿ ಶಿಕ್ಷಕಿಯನ್ನು ಭೇಟಿಯಾಗಲು ಒಪ್ಪಿಕೊಂಡಿದ್ದಾನೆ. ಬಳಿಕ ಆಕೆ ಅವನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಘಟನೆಯಲ್ಲಿ ಬಳಸಲಾದ ವಾಹನವನ್ನು ತನಿಖೆಗಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಶಿಕ್ಷಕಿ ವಿದ್ಯಾರ್ಥಿಯನ್ನು ದಕ್ಷಿಣ ಮುಂಬೈನಲ್ಲಿರುವ ಪಂಚತಾರಾ ಹೋಟೆಲ್‌ಗಳಿಗೆ ಮತ್ತು ವಿಮಾನ ನಿಲ್ದಾಣದ ಬಳಿ ಕರೆದೊಯ್ದು, ಅಲ್ಲಿ ಅವನಿಗೆ ಮದ್ಯ ಕುಡಿಸಿ ಲೈಂಗಿಕ ಕ್ರಿಯೆಗಳಿಗೆ ಒತ್ತಾಯಿಸಿದ್ದಾಳೆ. ವಿದ್ಯಾರ್ಥಿಗೆ ಆತಂಕವಾಗಲು ಪ್ರಾರಂಭಿಸಿದಾಗ, ಆರೋಪಿ ಅವನಿಗೆ ಆತಂಕ ನಿವಾರಕ ಔಷಧಿಗಳನ್ನು ನೀಡಿರುವುದಾಗಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿಯ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದ ಕುಟುಂಬವು ಆತನನ್ನು ಪ್ರಶ್ನಿಸಿದೆ. ಆದರೆ, ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಶಿಕ್ಷಕಿ ಆತನನ್ನು ಭೇಟಿಯಾಗುವುದನ್ನು ನಿಲ್ಲಿಸುತ್ತಾರೆ ಎಂದು ಆಶಿಸಿ ತಕ್ಷಣವೇ ದೂರು ನೀಡದಿರಲು ನಿರ್ಧರಿಸಿದೆ. ಪರೀಕ್ಷೆ ಬಳಿಕವೂ ಶಿಕ್ಷಕಿ ತನ್ನ ಮನೆಕೆಲಸದ ಸಿಬ್ಬಂದಿ ಮೂಲಕ ವಿದ್ಯಾರ್ಥಿಯನ್ನು ಮತ್ತೆ ಸಂಪರ್ಕಿಸಿದ್ದಾರೆ. ನಂತರ, ವಿದ್ಯಾರ್ಥಿ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ.

Representative image
24 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಸರ್ಕಾರಿ ಶಾಲಾ ಶಿಕ್ಷಕನ ಬಂಧನ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com