MK Muthu: ಎಂ ಕರುಣಾನಿಧಿ ಹಿರಿಯ ಪುತ್ರ, ತಮಿಳುನಾಡು ಸಿಎಂ MK Stalin ಹಿರಿಯಣ್ಣ ನಿಧನ!

ಕಳೆದ ಎರಡು ದಶಕಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದರು. ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.
MK Muthu
ಎಂಕೆ ಮುತ್ತು ಮತ್ತು ಎಂಕೆ ಸ್ಟಾಲಿನ್
Updated on

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಹಿರಿಯ ಮಗ ಎಂಕೆ ಮುತ್ತು ಶನಿವಾರ ಸಾವನ್ನಪ್ಪಿದ್ದಾರೆ.

ಕಳೆದ ಎರಡು ದಶಕಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದರು. ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಮಗಳು ತೇನ್ಮೋಳಿ ಇದ್ದು, ತೇನ್ಮೋಳಿ ಅವರು ಎಫ್‌ಎಮ್‌ಸಿಜಿ (Fast-Moving Consumer Goods) ಕಂಪನಿಯಾದ ಕ್ಯಾವಿನ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ರಂಗನಾಥನ್ ಅವರನ್ನು ವಿವಾಹವಾಗಿದ್ದಾರೆ.

ಕಳೆದ ಎರಡು ದಶಕಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದು ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.

ಕಣ್ಣೀರು ಹಾಕಿದ ಸ್ಟಾಲಿನ್

ಇನ್ನು ತಮ್ಮ ಸಹೋದರನ ನಿಧನಕ್ಕೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕಣ್ಣೀರು ಹಾಕಿದ್ದಾರೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅಂತಿಮ ವಿಧಾನಗಳನ್ನು ನಡೆಸಿದ್ದಾರೆ.

MK Muthu
ಹಿಂದೂ ಸಂಪ್ರದಾಯಗಳನ್ನು ಉಲ್ಲಂಘಿಸಿದ 18 ನೌಕರರ ವಿರುದ್ಧ ಟಿಟಿಡಿ ಕ್ರಮ

ನಟ-ರಾಜಕಾರಣಿ

ಕರುಣಾನಿಧಿ ಮೂರು ವಿವಾಹಗಳನ್ನು ಮಾಡಿಕೊಂಡಿದ್ದರೂ, ಮುತ್ತು ಅವರ ಮೊದಲ ಪತ್ನಿ ಪದ್ಮಾವತಿಗೆ ಜನಿಸಿದ ಏಕೈಕ ಪುತ್ರ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಹಿರಿಯ ಪುತ್ರ ಮುತ್ತುವೇಲ್ ಕರುಣಾನಿಧಿ ಮುತ್ತು (ಎಂ.ಕೆ. ಮುತ್ತು) ಅವರು 77 ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ಕೊನೆಯುಸಿರೆಳೆದರು. ದೀರ್ಘಕಾಲದ ಅನಾರೋಗ್ಯದ ನಂತರ ಅವರು ಶನಿವಾರ ನಿಧನರಾದರು. ಎಂ.ಕೆ. ಮುತ್ತು ಜನವರಿ 14, 1948 ರಂದು ಕರುಣಾನಿಧಿ ಅವರ ಮೊದಲ ಪತ್ನಿ ಪದ್ಮಾವತಿಗೆ ಜನಿಸಿದರು

ಮುತ್ತು ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಗ ಅರಿವುನಿಧಿ ಮತ್ತು ಮಗಳು ತೇನ್ ಮೋಳಿ. ಪ್ರಸ್ತುತ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುತ್ತು ಅವರ ಸಹೋದರರಾಗಿದ್ದಾರೆ. ಎಂಕೆ ಮುತ್ತು ಅವರು ನಟ-ರಾಜಕಾರಣಿಯಾಗಿದ್ದರು. ಎಂ.ಜಿ. ರಾಮಚಂದ್ರನ್ ಅವರ ಪ್ರಭಾವವನ್ನು ಮಣಿಸಲು, ಎಂಕೆ ಮುತ್ತು ಅವರನ್ನು ತಮಿಳು ಚಿತ್ರರಂಗಕ್ಕೆ ತರಲಾಗಿತ್ತು. ಆದರೆ ಅವರು ನಟನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

1970 ರ ದಶಕದಲ್ಲಿ, ಅವರು ‘ಪಿಳ್ಳೈಯೋ ಪಿಳ್ಳೈ’, ‘ಪುಕಾರಿ’, ‘ಶಯಲಿಕರಣ್’ ಮತ್ತು ‘ದಮಯ ವಿಲ್ಲುಕ್ಕು’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಮನ್ನಣೆ ಗಳಿಸಿದರು. ಚಿಕ್ಕ ವಯಸ್ಸಿನಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಲು ಅವಕಾಶ ಸಿಕ್ಕಿದ್ದರೂ, ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಮುತ್ತು ಅವರಿಗೆ ಹೆಚ್ಚಿನ ರಾಜಕೀಯ ಪ್ರಾಮುಖ್ಯತೆ ಸಿಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com