ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಚೀನಾ ಉತ್ತೇಜನ: ಭಾರತಕ್ಕೆ ಆತಂಕ

ಕಳೆದ 12 ವರ್ಷಗಳಲ್ಲಿ, ಟಾರ್ ತನ್ನ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ, ವಿಶೇಷವಾಗಿ 20 ಮೆಗಾವಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಯೋಜನೆಗಳಲ್ಲಿ ಸಾಕಷ್ಟು ಪ್ರಗತಿ ಕಂಡಿದೆ.
India and China flag
ಚೀನಾ ಮತ್ತು ಭಾರತದ ಧ್ವಜ
Updated on

ಭಾರತಕ್ಕೆ ತನ್ನ ಗಡಿಭಾಗದಲ್ಲಿ ಹೊಸ ಆತಂಕ ಭುಗಿಲೇಳುವ ಸಾಧ್ಯತೆಯಿದೆ. ಹೊಸ ಅಧ್ಯಯನ ಪ್ರಕಾರ, ಚೀನಾ ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಟಿಬೆಟ್ ಸ್ವಾಯತ್ತ ಪ್ರದೇಶದ (TAR-ಟಾರ್) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ.

ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯ ಜಿಯೋಸ್ಪೇಷಿಯಲ್ ಸಂಶೋಧನಾ ಕಾರ್ಯಕ್ರಮದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವೈ. ನಿತ್ಯಾನಂದಮ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC) ಗೆ ಟಾರ್ ಕಾರ್ಯತಂತ್ರದ ಪ್ರಾಮುಖ್ಯತೆಯ ಕುರಿತು ಕೆಲವು ಮಹತ್ವದ ಅವಲೋಕನ ಮಾಡಿದ್ದಾರೆ. ಭಾರತದಲ್ಲಿ ಗಡಿಪಾರು ಮಾಡಲಾದ ಟಿಬೆಟಿಯನ್ ಸರ್ಕಾರದ ಸ್ವಾಯತ್ತತೆಯ ಹಕ್ಕನ್ನು ಚೀನಾ ಏಕೆ ವಿರೋಧಿಸುತ್ತದೆ ಎಂಬುದನ್ನು ವಿವರಿಸಲು ಈ ಅಂಶಗಳು ಸಹಾಯ ಮಾಡುತ್ತವೆ ಎಂದು ಅವರು ಹೇಳುತ್ತಾರೆ.

ಕಳೆದ 12 ವರ್ಷಗಳಲ್ಲಿ, ಟಾರ್ ತನ್ನ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ, ವಿಶೇಷವಾಗಿ 20 ಮೆಗಾವಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಯೋಜನೆಗಳಲ್ಲಿ ಸಾಕಷ್ಟು ಪ್ರಗತಿ ಕಂಡಿದೆ.

2023 ರಲ್ಲಿ, ಟಿಬೆಟ್ ಗಣನೀಯ ಮುನ್ನಡೆ ಸಾಧಿಸಿತು, 11 ಯೋಜನೆಗಳನ್ನು ಪ್ರಾರಂಭಿಸುವ ಮೂಲಕ 700 ಮೆಗಾವ್ಯಾಟ್ ಇಂಧನ ಸೇರಿತು. ಇದು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವ ಅದರ ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತದೆ. ಇದು 2024ರಲ್ಲಿಯೂ ಮುಂದುವರಿಯಿತು. 15 ಯೋಜನೆಗಳಲ್ಲಿ ಹೆಚ್ಚುವರಿಯಾಗಿ 860 ಮೆಗಾವ್ಯಾಟ್ ಸ್ಥಾಪಿಸಲಾಗಿದೆ, ಇದು ಶುದ್ಧ ಇಂಧನ ಉಪಕ್ರಮಗಳಿಗೆ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ನಿತ್ಯಾನಂದಮ್ ಹೇಳುತ್ತಾರೆ.

2025 ರಲ್ಲಿ ಕೇವಲ ಎರಡು ದೊಡ್ಡ ಪ್ರಮಾಣದ ಯೋಜನೆಗಳಿಂದ 2,600 ಮೆಗಾವ್ಯಾಟ್ ಉತ್ಪಾದಿಸುವ ಮೂಲಕ ಪ್ರಮುಖ ಬದಲಾವಣೆಯನ್ನು ಕಂಡಿದೆ ಎಂದರು.

India and China flag
ಈಶಾನ್ಯ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲು ಯತ್ನ: ಭಾರತ ವಿರೋಧಿ ವಿಷಯಗಳ ಹಂಚಲು ಆ್ಯಪ್ ಮೂಲಕ ಆಮಿಷ, ಚೀನಾ ಕುತಂತ್ರ ಬಯಲು!

ಟಾರ್ ನ ನವೀಕರಿಸಬಹುದಾದ ಇಂಧನ ವಲಯದಲ್ಲಿ ಚೀನಾದ ನಿರಂತರ ಹೂಡಿಕೆಗಳು ಅದರ ಗುರಿಯನ್ನು ಸಾಧಿಸುವ ಬದ್ಧತೆಯನ್ನು ಮತ್ತು ಅದರ ಅತ್ಯಂತ ದೂರದ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಉದ್ದೇಶವನ್ನು ಪ್ರತಿಬಿಂಬಿಸುತ್ತವೆ. ಈ ಇಂಧನ ಉತ್ತೇಜನ ಪ್ರದೇಶದ ಪ್ರಾಮುಖ್ಯತೆಗೆ ಕಾರ್ಯತಂತ್ರದ ಆಳವನ್ನು ಸೇರಿಸಿದೆ ಎಂದರು.

ನಿತ್ಯಾನಂದಮ್ ಅವರ ಸಂಶೋಧನೆಯು 1951 ರಿಂದ ಚೀನಾದ ಆಕ್ರಮಣದಲ್ಲಿರುವ ದೂರದ ಹಿಮಾಲಯನ್ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನಗಳ ಬಗ್ಗೆ ಹೊಸ ಒಳನೋಟಗಳನ್ನು ನೀಡಿದೆ.

ಟಿಬೆಟ್‌ನಲ್ಲಿ ಸೌರಶಕ್ತಿಯ ವಿಸ್ತರಣೆಯು ನವೀಕರಿಸಬಹುದಾದ ಪರಿವರ್ತನೆಗಿಂತ ಹೆಚ್ಚಿನದಾಗಿದೆ. ಸೌರಶಕ್ತಿಯ ಜೊತೆಗೆ, ಟಾರ್ ಜಲವಿದ್ಯುತ್ ಸಾಮರ್ಥ್ಯವು ಅಷ್ಟೇ ಮಹತ್ವದ್ದಾಗಿದೆ. ಈ ಪ್ರದೇಶವು ಬ್ರಹ್ಮಪುತ್ರ, ಸಿಂಧೂ ಮತ್ತು ಮೆಕಾಂಗ್ ಸೇರಿದಂತೆ ಏಷ್ಯಾದ ಹಲವಾರು ಪ್ರಮುಖ ನದಿ ವ್ಯವಸ್ಥೆಗಳ ಮೂಲವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com