
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಸಹಿ ಮಾಡಿರುವ ಜೆರ್ಸಿಯನ್ನು ಸ್ವೀಕರಿಸಿದ್ದಾರೆ.
ಹೌದು.. ಈ ಕುರಿತು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ ಮೆಸ್ಸಿ ಅವರನ್ನು "artist with the ball" ಎಂದು ಬಣ್ಣಿಸಿದ್ದಾರೆ. ಅಂತೆಯೇ ಈ ಜೆರ್ಸಿ ಬಂಗಾಳ ಮತ್ತು ಸುಂದರ ಆಟ ಫುಟ್ಬಾಲ್ ನಡುವಿನ ಮುರಿಯಲಾಗದ ಸಂಪರ್ಕವನ್ನು ಸಂಕೇತಿಸುತ್ತದೆ ಎಂದು ಬ್ಯಾನರ್ಜಿ ಹೇಳಿದರು.
"ಫುಟ್ಬಾಲ್ ನನ್ನ ರಕ್ತನಾಳಗಳಲ್ಲಿ ಹರಿಯುವ ಉತ್ಸಾಹವಾಗಿದೆ. ಫುಟ್ಬಾಲ್ ನಮ್ಮ ಜನರ ಅಚ್ಚುಮೆಚ್ಚಿನ ಕ್ರೀಡೆಯಾಗಿದ್ದು, ನಾವು ಅತೀವ ಪ್ರೀತಿಸುವ ಸ್ಚಾರ್ ಆಟಗಾರನಿಂದಲೇ ಇಂದು ನಾನು ಜೆರ್ಸಿ ಪಡೆದಿದ್ದೇನೆ. ನಮ್ಮ ಕಾಲದ ಮೇಸ್ಟ್ರೋ ಮೆಸ್ಸಿ ಬಂಗಾಳ ಮೆಚ್ಚುವ ಪ್ರತಿಭೆಯ ಚೈತನ್ಯವನ್ನು ಸಾಕಾರಗೊಳಿಸುತ್ತಾರೆ. ಈ ಜೆರ್ಸಿ ಬಂಗಾಳ ಮತ್ತು ಫುಟ್ಬಾಲ್ ನಡುವಿನ ಮುರಿಯಲಾಗದ ಸಂಪರ್ಕದ ಸಂಕೇತವಾಗಿರಲಿದೆ" ಎಂದು ಹೇಳಿದರು.
Advertisement