Uttar Pradesh: ಹೆಚ್ಚಿನ ಭದ್ರತೆ ಇದ್ದರೂ ಮಲಗಿದ್ದ Airforce ಮುಖ್ಯ ಎಂಜಿನಿಯರ್‌ಗೆ ಕಿಟಕಿಯಿಂದ ಗುಂಡು ಹಾರಿಸಿ ಹತ್ಯೆ!
TNIE

Uttar Pradesh: ಹೆಚ್ಚಿನ ಭದ್ರತೆ ಇದ್ದರೂ ಮಲಗಿದ್ದ Airforce ಮುಖ್ಯ ಎಂಜಿನಿಯರ್‌ಗೆ ಕಿಟಕಿಯಿಂದ ಗುಂಡು ಹಾರಿಸಿ ಹತ್ಯೆ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಾಯುಪಡೆಯ ಸಿವಿಲ್ ಎಂಜಿನಿಯರ್‌ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
Published on

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಾಯುಪಡೆಯ ಸಿವಿಲ್ ಎಂಜಿನಿಯರ್‌ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಪ್ರಯಾಗ್‌ರಾಜ್‌ನ ಪುರಾಮುಫ್ತಿ ಪೊಲೀಸ್ ಠಾಣೆಯ ವಾಯುಪಡೆ ಕಾಲೋನಿಯಲ್ಲಿ ಶನಿವಾರ ಬೆಳಿಗ್ಗೆ ತಮ್ಮ ಕೋಣೆಯಲ್ಲಿ ಮಲಗಿದ್ದ ವಾಯುಪಡೆಯ ಸಿವಿಲ್ ಎಂಜಿನಿಯರ್ ಎಸ್‌ಎನ್ ಮಿಶ್ರಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶನಿವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ ಸಿವಿಲ್ ಎಂಜಿನಿಯರ್ ಎಸ್ ಎನ್ ಮಿಶ್ರಾ ತಮ್ಮ ಕೋಣೆಯಲ್ಲಿ ಮಲಗಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕಿಟಕಿಯಿಂದ ಗುಂಡು ಹಾರಿಸಿದ್ದಾನೆ ಎಂದು ಪುರಾಮುಫ್ತಿ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಸಿಂಗ್ ತಿಳಿಸಿದ್ದಾರೆ. 1 ವರ್ಷದ ಅಧಿಕಾರಿಯ ಎದೆಗೆ ಗುಂಡು ತಗುಲಿದ್ದು, ಅವರನ್ನು ಸೇನಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ, ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ವಾಯುಪಡೆಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ವಿಧಿವಿಜ್ಞಾನ ತಂಡವು ಕೊಠಡಿಯನ್ನು ಸೀಲ್ ಮಾಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಘಟನೆ ಬಮ್ರೌಲಿ ಪ್ರದೇಶದ ವಾಯುಪಡೆ ಕಾಲೋನಿಯಲ್ಲಿ ನಡೆದಿದೆ. ಪ್ರಸ್ತುತ, ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರಿಗೂ ಗೇಟ್ ಮೂಲಕ ಒಳಗೆ ಪ್ರವೇಶಿಸಲು ಅವಕಾಶವಿಲ್ಲ. ಅಧಿಕಾರಿಯ ನಿವಾಸವು ಸೆಂಟ್ರಲ್ ಏರ್ ಕಮಾಂಡ್‌ನ ಉತ್ತರ ವಲಯದಲ್ಲಿದೆ. ಇದು ವಾಯುಪಡೆಯ ಹೆಚ್ಚಿನ ಭದ್ರತಾ ಪ್ರದೇಶವಾಗಿದ್ದು, ದಿನದ 24 ಗಂಟೆಯೂ ವಾಯುಪಡೆಯ ಸಿಬ್ಬಂದಿಯಿಂದ ಕಾವಲು ಕಾಯಲಾಗುತ್ತದೆ.

Uttar Pradesh: ಹೆಚ್ಚಿನ ಭದ್ರತೆ ಇದ್ದರೂ ಮಲಗಿದ್ದ Airforce ಮುಖ್ಯ ಎಂಜಿನಿಯರ್‌ಗೆ ಕಿಟಕಿಯಿಂದ ಗುಂಡು ಹಾರಿಸಿ ಹತ್ಯೆ!
ದೆಹಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ: ಲಿಂಗ ಬದಲಿಸಿಕೊಂಡು ಅಕ್ರಮವಾಗಿ ನೆಲೆಸಿದ್ದ 6 ಬಾಂಗ್ಲಾ ಯುವಕರ ಬಂಧನ!

ಲಭ್ಯವಾಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ, ಆರೋಪಿಗಳಲ್ಲಿ ಒಬ್ಬನು ಗಡಿ ಗೋಡೆಯನ್ನು ದಾಟಿ ಒಳಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು ಎಂದು ಡಿಸಿಪಿ ಭಾರ್ತಿ ತಿಳಿಸಿದ್ದಾರೆ. ಎಸ್.ಎನ್. ಮಿಶ್ರಾ ಅವರ ಕುಟುಂಬದಲ್ಲಿ ಅವರ ಪತ್ನಿ ಮತ್ತು ಮಗ ಒಟ್ಟಿಗೆ ವಾಸಿಸುತ್ತಿದ್ದರೆ, ಅವರ ಮಗಳು ಲಕ್ನೋದಲ್ಲಿ ಓದುತ್ತಿದ್ದಾಳೆ. ಈ ಕಾಲೋನಿಯಲ್ಲಿ ಸೇವಕ ವಸತಿಗೃಹಗಳ ಜೊತೆಗೆ, ಸಾಮಾನ್ಯ ನಾಗರಿಕರು ಸಹ ಬಾಡಿಗೆ ಕೊಠಡಿಗಳಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದಿಂದ ದೂರು ಸ್ವೀಕರಿಸಿದ ನಂತರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com