
ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ವಿರುದ್ಧ ಅವಹೇಳನಾಕಾರಿ ಹೇಳಿಕೆಗೆ ಸಂಬಂಧಿಸಿದ ಕೇಸ್ ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಸೋಮವಾರವೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಪೊಲೀಸರ ತಂಡವೊಂದನ್ನು ಪರಿಶೀಲಿಸಲು ಅವರ ನಿವಾಸಕ್ಕೆ ತೆರಳಿತು.
ಇಂದು ಹಗಲಿನ ವೇಳೆ ಅವರು ಪೊಲೀಸರ ಮುಂದೆ ಹಾಜರಾಗಬೇಕಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡನೇ ಬಾರಿಗೆ ಅವರಿಗೆ ಸಮನ್ಸ್ ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುನಾಲ್ ಕಾಮ್ರಾ ವಿಚಾರಣೆಗೆ ಹಾಜರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅವರ ಕುಟುಂಬ ನೆಲೆಸಿರುವ ಮಾಹಿಮ್‌ನಲ್ಲಿರುವ ಅವರ ಮನೆಗೆ ಪೊಲೀಸರ ತಂಡವೊಂದು ತೆರಳಿದರು.
ವಿಚಾರಣೆಗೆ ಅವರು ಹಾಜರಾಗದ ಕಾರಣ ಮುಂದಿನ ಕ್ರಮವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಕಳೆದ ವಾರ ಅವರ ಹಾಜರಿ ಕೋರಿ ಮೊದಲ ನೋಟೀಸ್ ನೀಡಲಾಗಿತ್ತು. ಕಾಮ್ರಾ ಅವರ ಏಳು ದಿನಗಳ ಕಾಲಾವಕಾಶದ ಕೋರಿಕೆಯನ್ನು ಪೊಲೀಸರು ನಿರಾಕರಿಸಿದ್ದರು.
ಮದ್ರಾಸ್ ಹೈಕೋರ್ಟ್ ಮಾರ್ಚ್ 28 ರಂದು ಕುನಾಲ್ ಕಾಮ್ರಾ ಅವರ ವಿರುದ್ಧ ದಾಖಲಾಗಿರುವ ಹಲವು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು.
ಬೆದರಿಕೆ ಕರೆ ಹಾಗೂ ಮುಂಬೈ ಪೊಲೀಸರಿಂದ ಬಂಧನದ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡಿನ ವಿಲ್ಲುಪುರಂ ಪಟ್ಟಣದ ಖಾಯಂ ನಿವಾಸಿಯಾಗಿರುವುದರಿಂದ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸುವ ಅಧಿಕಾರ ಮದ್ರಾಸ್ ಹೈಕೋರ್ಟ್ ಗೆ ಇದೆ ಎಂದು ಕಾಮ್ರಾ ಅರ್ಜಿಯಲ್ಲಿ ತಿಳಿಸಿದ್ದರು.
Advertisement