ಈ ವಾರ ದೇಶದ ಪ್ರಮುಖ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ: IMD ಮುನ್ಸೂಚನೆ

ವಾರವಿಡೀ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ, ಜೊತೆಗೆ ಮಿಂಚು, ಆಲಿಕಲ್ಲು ಮತ್ತು ಬಲವಾದ ಗಾಳಿ ಬೀಳುವ ಸಾಧ್ಯತೆ ಇದೆ ಐಎಂಡಿ ಎಚ್ಚರಿಕೆ ನೀಡಿದೆ.
Bengaluru experienced thunderstorms, lightning
ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆPhoto | Allen Egenuse J, EPS
Updated on: 

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಉತ್ತರ ಭಾರತದಲ್ಲಿ ಬಿರುಗಾಳಿ ಬೀಸಿದ ನಂತರ, ಭಾರತೀಯ ಹವಾಮಾನ ಇಲಾಖೆ (IMD) ದೆಹಲಿ-NCR ಪ್ರದೇಶ ಸೇರಿದಂತೆ ವಾಯುವ್ಯ ಭಾರತ ಹಾಗೂ ಪೂರ್ವ ಮತ್ತು ಮಧ್ಯ ಭಾರತದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಆರೆಂಜ್ ಅಲರ್ಟ್ ನೀಡಿದೆ. ವಾರವಿಡೀ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ, ಜೊತೆಗೆ ಮಿಂಚು, ಆಲಿಕಲ್ಲು ಮತ್ತು ಬಲವಾದ ಗಾಳಿ ಬೀಳುವ ಸಾಧ್ಯತೆ ಇದೆ ಐಎಂಡಿ ಎಚ್ಚರಿಕೆ ನೀಡಿದೆ.

ಇದರ ನಂತರ, ಬೆಳೆಗಳು ಮತ್ತು ತೋಟಗಳನ್ನು ರಕ್ಷಿಸಲು IMD ಕೃಷಿ ಹವಾಮಾನ ಸಲಹೆಯನ್ನು ನೀಡಿದೆ. ಅಪಾಯಕಾರಿ ಹವಾಮಾನಕ್ಕೆ ಮುಂಚಿತವಾಗಿ ವಿಶೇಷವಾಗಿ ನಗರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ದುರ್ಬಲ ಪ್ರದೇಶಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಐಎಂಡಿ ಸೂಚಿಸಿದೆ.

ಕಳೆದ 24 ಗಂಟೆಗಳಲ್ಲಿ, ದೆಹಲಿಯ ಸಫ್ದರ್ಜಂಗ್ ನಿಲ್ದಾಣವು 77 ಮಿಮೀ ಮಳೆಯನ್ನು ದಾಖಲಿಸಿದೆ, ಇದು 1901 ರಿಂದ ಮೇ ತಿಂಗಳಿನಲ್ಲಿ ಸುರಿದ ಎರಡನೇ ಅತಿ ಹೆಚ್ಚು ಮಳೆಯಾಗಿದೆ. ಮೇ 20, 2021 ರಂದು ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ ದಾಖಲಾಗಿದ್ದ 119.3 ಮಿಮೀ ಅತ್ಯಧಿಕ ಮಳೆಯಾಗಿದೆ.

Bengaluru experienced thunderstorms, lightning
ಮೇ ತಿಂಗಳಲ್ಲಿ ರಣಬಿಸಿಲಿಗೆ ಉತ್ತರ ಕರ್ನಾಟಕ ಸೇರಿ ಭಾರತ ತತ್ತರ: IMD ಎಚ್ಚರಿಕೆ

ಇತ್ತೀಚಿನ ಈ ಮಳೆಯು ಗುಜರಾತ್ ಕರಾವಳಿಯನ್ನು ದಾಟಿದ "ತೌಕ್ತೆ" ಚಂಡಮಾರುತದ ಪರಿಣಾಮವಾಗಿದೆ. ಗುಡುಗು ಸಹಿತ ಭಾರಿ ಮಳೆಯಾದ ನಂತರ, ದೆಹಲಿ-ಎನ್‌ಸಿಆರ್‌ನಲ್ಲಿ ಕನಿಷ್ಠ ತಾಪಮಾನವು 8°C ಯಷ್ಟು ಕಡಿಮೆಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3°C ರಷ್ಟು ಕಡಿಮೆಯಾಗಲಿದೆ ಎಂದು ಊಹಿಸಲಾಗಿದೆ.

ಐಎಂಡಿ ವರದಿಗಳ ಪ್ರಕಾರ, ದೇಶದ ಪ್ರಮುಖ ಪ್ರದೇಶಗಳಲ್ಲಿ ನಿರಂತರ ಮಳೆ, ಗುಡುಗು ಸಹಿತ ಮಳೆ ಮತ್ತು ಮಿಂಚು ಉಂಟಾಗುತ್ತದೆ. ಈ ಹವಾಮಾನ ವ್ಯವಸ್ಥೆಗಳು ವಾರವಿಡೀ ಸಕ್ರಿಯವಾಗಿರುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ರಾಜಸ್ಥಾನದ ಕೆಲವು ಭಾಗಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಪ್ರತ್ಯೇಕ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com