ದೇವಸ್ಥಾನ ಪ್ರಸಾದದಲ್ಲಿ ಸತ್ತ ಹಾವು ಪತ್ತೆ?: ಎಲ್ಲಿ.. ಯಾವಾಗ?

ಮೂಲಗಳ ಪ್ರಕಾರ ತಮಿಳುನಾಡಿನ 800 ವರ್ಷಗಳಷ್ಟು ಹಳೆಯ ಚಂದ್ರಚೂಡೇಶ್ವರ ದೇಗುಲದಲ್ಲಿ ಈ ಘಟನೆ ವರದಿಯಾಗಿದೆ.
A dead snake found in Chandra Choodeshwarar temple prasadam?
ಪ್ರಸಾದಲ್ಲಿ ಕಂಡುಬಂದ ಸತ್ತ ಹಾವು
Updated on

ಚೆನ್ನೈ: ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ದೇವಾಲಯವೊಂದರ ಪ್ರಸಾದದಲ್ಲಿ ಸತ್ತ ಹಾವು ಪತ್ತೆಯಾಗಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಪ್ರಸಾದದಲ್ಲಿ ಸತ್ತ ಹಾವು ಪತ್ತೆಯಾಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ದೇವಸ್ಥಾನದಲ್ಲಿ ನೀಡಲಾದ ಪುಳಿಯೊಗರೆ ಪ್ರಸಾದದಲ್ಲಿ ಈ ಹಾವು ಪತ್ತೆಯಾಗಿದ್ದು, ಪ್ರಸಾದದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ ಎಂದು ಹೇಳಲಾಗಿದೆ.

@KalaForTemples ಖಾತೆದಾರರು ಈ ಫೋಟೊವನ್ನು ಹಂಚಿಕೊಂಡಿದ್ದು ನಿರ್ಲಕ್ಷಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

A dead snake found in Chandra Choodeshwarar temple prasadam?
Operation Sindoor: ಜೈಶ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಸರ್ವನಾಶ!

ಮೂಲಗಳ ಪ್ರಕಾರ ತಮಿಳುನಾಡಿನ 800 ವರ್ಷಗಳಷ್ಟು ಹಳೆಯ ಚಂದ್ರಚೂಡೇಶ್ವರ ದೇಗುಲದಲ್ಲಿ ಈ ಘಟನೆ ವರದಿಯಾಗಿದ್ದು, ಪ್ರತಿನಿತ್ಯ ಈ ದೇಗುಲಕ್ಕೆ 800 ರಿಂದ 1000 ಜನರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಇಂತಹ ದೇಗುಲದ ಪ್ರಸಾದದಲ್ಲೇ ಸತ್ತ ಹಾವು ಪತ್ತೆಯಾಗಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಅಂದಹಾಗೆ ಬೆಂಗಳೂರು ಮತ್ತು ಕೃಷ್ಣಗಿರಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ದೇವಾಲಯವು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ ಇಲಾಖೆಯ ನಿಯಂತ್ರಣದಲ್ಲಿದೆ.

ದೂರು ದಾಖಲು

ಪ್ರಸಾದದಲ್ಲಿ ಹಾವಿದೆ ಎಂದು ಭಕ್ತರು ದೇವಾಲಯ ಆಡಳಿತ ಮಂಡಳಿಗೆ ದೂರು ನೀಡಿದ್ದು, ನಂತರ ಭಕ್ತರು ತಕ್ಷಣವೇ ಹಿಂದೂ ದತ್ತಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಪ್ರಸ್ತುತ ಈ ವಿಷಯದ ತನಿಖೆ ನಡೆಯುತ್ತಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಚಂದ್ರಚೂಡೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಥವಾ ಹಿಂದೂ ದತ್ತಿ ದತ್ತಿ ಇಲಾಖೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com