ರಾಜಸ್ಥಾನ: ಇಂಡೋ-ಪಾಕ್ ಗಡಿ ಬಳಿ ಡ್ರೋನ್ ಪತ್ತೆ; BSF ಪರಿಶೀಲನೆ, ಸ್ಥಳದಲ್ಲಿ ತೀವ್ರ ಕಟ್ಟೆಚ್ಚರ

ಗುರುವಾರ ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆಹಚ್ಚಿದರು.
Suspicious drone found near India-Pak border in Rajasthan.
ಅನುಮಾನಾಸ್ಪದ ಡ್ರೋನ್‌ ಪತ್ತೆಯಾಗಿರುವುದು.
Updated on

ಜೈಪುರ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನುಪ್‌ಗಢದ ಭಾರತ-ಪಾಕಿಸ್ತಾನ ಗಡಿಯ ಬಳಿ ಅನುಮಾನಾಸ್ಪದ ಡ್ರೋನ್‌ನಂತಹ ವಸ್ತು ಪತ್ತೆಯಾಗಿದ್ದು, ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದಾರೆ.

ಗುರುವಾರ ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆಹಚ್ಚಿದರು. ಅದನ್ನು ಗಮನಿಸಿದ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅನುಪ್‌ಗಢ ಸ್ಟೇಷನ್ ಹೌಸ್ ಆಫೀಸರ್ (SHO) ಈಶ್ವರ್ ಜಂಗಿದ್ ಅವರು, ತಕ್ಷಣ ಗಡಿ ಭದ್ರತಾ ಪಡೆ (BSF)ಗೆ ಮಾಹಿತಿ ನೀಡಿ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಬಿಎಸ್​ಎಫ್ ವಶಕ್ಕೆ ಪಡೆದಿರುವ ಡ್ರೋನ್ 5ರಿಂದ 7 ಅಡಿ ಉದ್ದವಿದ್ದು ಬಹುತೇಕ ಹಾನಿಗೊಳಗಾಗಿದೆ. ಅದರ ಕ್ಯಾಮೆರಾ ಮಾಡ್ಯೂಲ್ ಮುರಿದಿದೆ ಎಂದು ತಿಳಿದುಬಂದಿದೆ.

ಡ್ರೋನ್ ಮೂಲ ಮತ್ತು ಉದ್ದೇಶವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಅನುಪ್‌ಗಢ ಸ್ಟೇಷನ್ ಹೌಸ್ ಆಫೀಸರ್ ಜಂಗೀದ್ ಅವರು ತಿಳಿಸಿದ್ದಾರೆ.

Suspicious drone found near India-Pak border in Rajasthan.
ಸಿದ್ದವಾಯ್ತು ಸ್ವದೇಶಿ ನಿರ್ಮಿತ ಅಗ್ಗದ ಐರನ್ ಡೋಮ್ Bhargavastra: Turkey, China ಡ್ರೋನ್ ದಾಳಿಗೆ ಸಿಕ್ತು ಪರಿಹಾರ, ಪರೀಕ್ಷೆ ಯಶಸ್ವಿ!

ನಾವು ಡ್ರೋನ್ ಅನ್ನು ವಶಪಡಿಸಿಕೊಂಡಿದ್ದೇವೆ. ಆ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳವನ್ನು ಸಹ ಕರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಡ್ರೋನ್ ಅನ್ನು ಅದರ ಮೂಲ ಮತ್ತು ಉದ್ದೇಶವನ್ನು ನಿರ್ಧರಿಸಲು ವಿಧಿವಿಜ್ಞಾನ ಮತ್ತು ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಅನುಮಾನಾಸ್ಪದ ಡ್ರೋನ್ ಗಡಿಯಾಚೆಯಿಂದ ಬಂದಿದೆಯೇ ಅಥವಾ ಯಾವುದೇ ಕಾರ್ಯಾಚರಣೆ ಸಮಯದಲ್ಲಿ ನಮ್ಮ ಸೇನಾ ಪಡೆಗಳಿಂದಲೇ ಹಾರಿಸಲಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ, ಇದಕ್ಕೆ ಪಾಕಿಸ್ತಾನ ಸಂಪರ್ಕ ಕುರಿತು ದೃಢೀಕರಿಸಲು ಸಾಧ್ಯವಿಲ್ಲ, ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ಈ ವಿಷಯವನ್ನು ಅತ್ಯಂತ ಸೂಕ್ಷ್ಮತೆಯಿಂದ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com